ಬಗ್ದಾದಿ ಹತ್ಯೆಗೆ ಕಾರಣವಾಗಿತ್ತು ಅತ ಧರಿಸಿದ್ದ ಚಡ್ಡಿ!, ಇಸಿಸ್ ಮುಖ್ಯಸ್ಥ ಅಂತಿಮ ಕ್ಷಣದ ರೋಚಕ ಮಾಹಿತಿ

ಜಗತ್ತಿನ ಶ್ರೀಮಂತ ಮತ್ತು ಅತೀ ದೊಡ್ಡ ಉಗ್ರ ಸಂಘಟನೆ ಎಂಬ ಕುಖ್ಯಾತಿ ಗಳಿಸಿದ್ದ ಇಸ್ಲಾಮಿಕ್ ಸ್ಟೇಟ್ ನ ಮುಖ್ಯಸ್ಥ ಅಬೂಬಕರ್ ಅಲ್ ಬಗ್ದಾದಿಯನ್ನು ಹತ್ಯೆಗೈಯ್ಯಲಾಗಿದ್ದು, ಆತನ ಹತ್ಯೆಗೆ ಆತ ಧರಿಸಿದ್ದ ಒಳಉಡುಪು (ಚಡ್ಡಿ) ಕಾರಣವಾಗಿದ್ದ ರೋಚಕ ಅಂಶ ಇದೀಗ ಬಹಿರಂಗವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೈರುತ್: ಜಗತ್ತಿನ ಶ್ರೀಮಂತ ಮತ್ತು ಅತೀ ದೊಡ್ಡ ಉಗ್ರ ಸಂಘಟನೆ ಎಂಬ ಕುಖ್ಯಾತಿ ಗಳಿಸಿದ್ದ ಇಸ್ಲಾಮಿಕ್ ಸ್ಟೇಟ್ ನ ಮುಖ್ಯಸ್ಥ ಅಬೂಬಕರ್ ಅಲ್ ಬಗ್ದಾದಿಯನ್ನು ಹತ್ಯೆಗೈಯ್ಯಲಾಗಿದ್ದು, ಆತನ ಹತ್ಯೆಗೆ ಆತ ಧರಿಸಿದ್ದ ಒಳಉಡುಪು (ಚಡ್ಡಿ) ಕಾರಣವಾಗಿದ್ದ ರೋಚಕ ಅಂಶ ಇದೀಗ ಬಹಿರಂಗವಾಗಿದೆ.

ಹೌದು.. ಇಡೀ ಜಗತ್ತಿಗೇ ಮಾರಣಾಂತಿಕವಾಗಿ ಪರಿಣಮಿಸಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ರೂವಾರಿ ಅಬೂಬಕರ್ ಅಲ್ ಬಾಗ್ದಾದಿಯನ್ನು ಅಮೆರಿಕ ಮಿತ್ರಪಡೆಗಳು ಹೊಡೆದುರುಳಿಸಿವೆ. ಈ ಕುರಿತಂತೆ ಬೃಹತ್ ಕಾರ್ಯಾಚರಣೆಯೇ ನಡೆದಿದ್ದು, ಬಾಗ್ದಾದಿ ಇರುವಿಕೆ ಕುರಿತು ಒಂದು ತಿಂಗಳ ಹಿಂದೆ ಅಮೆರಿಕಕ್ಕೆ ಖಚಿತ ಮಾಹಿತಿ ಲಭ್ಯವಾಗಿತ್ತು. ಸಿರಿಯಾ ಕುರ್ದಿಶ್‌ ಸಂಘಟನೆಯಿಂದಲೂ ಪೂರಕ ವಿವರ ಲಭಿಸಿತ್ತು. ಇದರ ಆಧಾರದಲ್ಲಿ ಎರಡು ವಾರದ ಹಿಂದೆ ಅಮೆರಿಕ ಸೇನೆಯಿಂದ ಬಾಗ್ದಾದಿಯ ನೆಲೆ ಪತ್ತೆ ಮಾಡಿತ್ತು. 

ಪ್ರಮುಖವಾಗಿ ಸಿರಿಯಾದ ಡೆಮಾಕ್ರಟಿಕ್ ಪಡೆಗಳು ಶಂಕಿತ ಪ್ರದೇಶದಲ್ಲಿ ಬಾಗ್ದಾದಿ ಇರುವಿಕೆಯನ್ನು ಖಚಿತಪಡಿಸಿಕೊಂಡಿದ್ದವು. ಬಾಗ್ದಾದಿ ಧರಿಸಿದ್ದ ಚಡ್ಡಿಯನ್ನು ಸಂಗ್ರಹಿಸಿದ್ದ ಇಸಿಸ್ ಪಡೆಗಳು ಅದನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಿ ಆತನೇ ಬಗ್ದಾದಿ ಎಂಬುದನ್ನು ಖಚಿತಪಡಿಸಿಕೊಂಡಿದ್ದರು. ಬಾಗ್ದಾದಿ ತನ್ನ ಜಾಗ ಬದಲಿಸುತ್ತಿದ್ದ ಬಾಗ್ಜಾದಿ ಇನ್ನು ಕೆಲ ದಿನಗಳಲ್ಲೇ ತಾನಿದ್ದ ಜಾಗವನ್ನು ಬದಲಿಸಲು ಸಜ್ಜಾಗಿದ್ದ. ಜರಬ್ರಲ್ ಗೆ ತೆರಳು ಸಜ್ಜಾಗಿದ್ದ ಬಗ್ದಾದಿಯನ್ನು ಅಮೆರಿಕ ಸೇನೆ ಕಾರ್ಯಾಚರಣೆ ನಡೆಸಿ ಹತ್ಯೆ ಮಾಡಿದೆ.

ಹೇಗಾಯ್ತು ಕಾರ್ಯಾಚರಣೆ?
ಶನಿವಾರ ಸಂಜೆ 4.30 ಗಂಟೆಗೆ (ಸಿರಿಯಾ ಕಾಲಮಾನ ರಾತ್ರಿ 10.30) ಮಧ್ಯಪೂರ್ವದ ಹೆಸರು ಬಹಿರಂಗಪಡಿಸದ ಸೇನಾನೆಲೆಯಿಂದ ಎಂಟು ಹೆಲಿಕಾಪ್ಟರ್‌ ಗಳಲ್ಲಿ ಅಮೆರಿಕದ ಡೆಲ್ಟಾ ಪಡೆಗೆ ಸೇರಿದ ಯೋಧರು, ಶ್ವಾನದಳದ ರವಾನೆ ಮಾಡಲಾಗಿತ್ತು. ಬಾಗ್ದಾದಿ ನೆಲೆಸಿದ್ದ ತಾಣವನ್ನು ಹೆಲಿಕಾಪ್ಟರ್ ತಲುಪಿದಾಗ ಅಲ್ಲಿದ್ದ ಇಸಿಸ್ ಉಗ್ರರು ಗುಂಡಿನ ದಾಳಿ ಮೂಲಕ ಪ್ರತಿರೋಧ ತೋರಿದರು. ಇದನ್ನು ಸಮರ್ಪಕವಾಗಿ ಎದುರಿಸಿದ ಅಮೆರಿಕ ಸೇನೆ ಯಶಸ್ವಿಯಾಗಿ ಕಾಪ್ಟರ್ ಭೂಸ್ಪರ್ಶ ಮಾಡಿತ್ತು. ಬಳಿಕ ಮುಖ್ಯದ್ವಾರವಿದ್ದ ಗೋಡೆಯನ್ನು ಸ್ಫೋಟಿಸುವ ಮೂಲಕ ಸೇನೆ ಒಳ ಪ್ರವೇಶಸಿತ್ತು. ಈ ವೇಳೆ ಅಲ್ಲಿದ್ದ ಉಗ್ರರನ್ನು ಕೊಲ್ಲುವ ಅಥವಾ ಶರಣಾಗತಿ ಮೂಲಕ ವಶಕ್ಕೆ ಪಡೆಯುವ ಮೂಲಕ ಪರಿಸ್ಥಿತಿಯ ಪೂರ್ಣ ನಿಯಂತ್ರಣ ಸಾಧಿಸಿತ್ತು. ಅಲ್ಲದೆ ಅಲ್ಲಿದ್ದ 13 ಮಕ್ಕಳನ್ನು ರಕ್ಷಿಸಲಾಯಿತು. ಅಲ್ಲದೆ, ಇಸ್ಲಾಮಿಕ್‌ ಸ್ಟೇಟ್‌ಗೆ ಸೇರಿದ ಅನೇಕ ಹೋರಾಟಗಾರರನ್ನು ಬಂಧಿಸಲಾಯಿತು.

ಈ ಹಂತದಲ್ಲಿ ಕಟ್ಟಡದ ಒಳಗಿದ್ದ ಸುರಂಗ ಮಾರ್ಗದ ಮೂಲಕ ತನ್ನ ಮೂವರು ಮಕ್ಕಳ ಜೊತೆ ಪರಾರಿಗೆ ಬಾಗ್ದಾದಿ ಯತ್ನಿಸಿದ್ದ. ಈ ವೇಳೆ ಆತನನ್ನು ಹಿಂಬಾಲಿಸಿದ ಸೈನಿಕರು ಶರಣಾಗುವಂತೆ ಸೂಚಿಸಿದ್ದರು. ಆದರೆ ಆತ ಅದಕ್ಕೆ ಸ್ಪಂದಿಸದಿದ್ದಾಗ ಸೇನೆಯ ಸೂಚನೆಯಂತೆ ಅಮೆರಿಕ ಸೇನೆಯ ನಾಯಿಗಳು ಆತನನ್ನು ಬೆನ್ನಟ್ಟಿದವು. ಈ ವೇಳೆ ಸುರಂಗದೊಳಗೆ ನುಗ್ಗಿದ ಬಾಗ್ದಾದಿ ಕೊನೆಯಲ್ಲಿ ಪಾರಾಗಲು ಮಾರ್ಗ ಇಲ್ಲದಿದ್ದಾಗ ಅನ್ಯಮಾರ್ಗವಿಲ್ಲದೆ ಸೊಂಟಕ್ಕೆ ಕಟ್ಟಿಕೊಂಡಿದ್ದ ಸ್ಫೋಟಕಗಳನ್ನು ಸಿಡಿಸಿಕೊಂಡಿದ್ದಾನೆ. ಸ್ಫೋಟದ ರಭಸಕ್ಕೆ ಆತನ ದೇಹ ಛಿದ್ರವಾಗಿದ್ದು, ಆತನೊಂದಿಗೆ ಮೂವರು ಮಕ್ಕಳು ಸಹ ಸತ್ತಿದ್ದಾರೆ. ಸ್ಫೋಟದ ರಭಸಕ್ಕೆ ಸುರಂಗ ಕುಸಿದಿದೆ.

ಬಳಿಕ ಸ್ಥಳದಲ್ಲೇ ಸೈನಿಕರು 15 ನಿಮಿಷ ಕಾಲ ಡಿಎನ್‌ಎ ಪರೀಕ್ಷೆಯನ್ನು ನಡೆಸಿ ಸತ್ತಿರುವುದು ಬಾಗ್ದಾದಿಯೇ ಎಂದು ಖಾತರಿಪಡಿಸಿಕೊಳ್ಳಲಾಯಿತು. ಸೇನಾ ಕಮಾಂಡರ್‌ ‘ಶೇ 100ರಷ್ಟು ವಿಶ್ವಾಸವಿದೆ. ಜಾಕ್‌ಪಾಟ್‌’ ಎಂದು ಹೇಳುವ ಮೂಲಕ ಕಾರ್ಯಾಚರಣೆ ಯಶಸ್ವಿ ಆಗಿದೆ ಎಂದು ಘೋಷಿಸಿದರು. 

ಬಳಿಕ ಅಮೆರಿಕ ಸೇನೆ  ಸುಮಾರು ಎರಡು ಗಂಟೆ ಕಾಲ ನೆಲೆಯನ್ನು ಸುತ್ತುವರಿದು ಶೋಧಿಸಿತು.‌ ಇಸ್ಲಾಮಿಕ್ ಸ್ಟೇಟ್‌ನ ಸ್ಥಾಪನೆ, ಭವಿಷ್ಯದ ಯೋಜನೆಗಳು ಕುರಿತ ಮಾಹಿತಿಗಳನ್ನು ಒಳಗೊಂಡ ಅನೇಕ ದಾಖಲೆಗಳನ್ನು ವಶಕ್ಕೆ ಪಡೆಯಲಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com