ಪುಸ್ತಕ ನೋಡಿ ಬಡತನದ ಪಾಠ ಕಲಿತಿಲ್ಲ: ಪ್ರಧಾನಿ ಮೋದಿ

ಪುಸ್ತಕಗಳಿಂದ ಬಡತನ ನೋಡಿ ಕಲಿತಿಲ್ಲ ಬದಲಾಗಿ ದೇಶದ ರೈಲ್ವೆ ನಿಲ್ದಾಣದಲ್ಲಿ ನಿಜವಾದ ಬಡತನ ನೋಡಿ ಪಾಠ ಕಲಿತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರಿಯಾದ್: ಪುಸ್ತಕಗಳಿಂದ ಬಡತನ ನೋಡಿ ಕಲಿತಿಲ್ಲ ಬದಲಾಗಿ ದೇಶದ ರೈಲ್ವೆ ನಿಲ್ದಾಣದಲ್ಲಿ ನಿಜವಾದ ಬಡತನ ನೋಡಿ ಪಾಠ ಕಲಿತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

2 ದಿನಗಳ ಸೌಹಾರ್ದಯುತ ಭೇಟಿಗಾಗಿ ಸೌದಿ ಅರೇಬಿಯಾ ದೇಶಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಅಂತ್ಯವಾಗಿದೆ. ನಿನ್ನೆ ಸೌದಿ ಅರೇಬಿಯಾದಲ್ಲಿ ಮಾತನಾಡಿರುವ ಮೋದಿ ತಮ್ಮ ಹಳೆಯ ದಿನಗಳ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಸೌದಿಯ ರಿಯಾದ್ ನಗರದಲ್ಲಿ ನಡೆಯಲಿರುವ 3ನೇ ಫ್ಯೂಚರ್ ಇನ್ವೆಸ್ಟ್​ಮೆಂಟ್ ಇನಿಷಿಯೇಟಿವ್ ಫೋರಮ್​ನ ಸರ್ವ ಸದಸ್ಯರ ಸಭೆಯಲ್ಲಿ ಪಾಲ್ಗೊಳ್ಳಲು ಸೌದಿ ರಾಜರ ಆಹ್ವಾನದ ಮೇರೆಗೆ ಮೋದಿ ಕೊಲ್ಲಿ ರಾಷ್ಟ್ರಕ್ಕೆ ಭೇಟಿ ನೀಡಿದ್ದಾರೆ. ಪ್ರಧಾನಿಯಾಗಿ ನರೇಂದ್ರ ಮೋದಿ ಅವರಿಗೆ ಇದು ಸೌದಿ ಅರೇಬಿಯಾಗೆ ನೀಡಿರುವ 4ನೇ ಭೇಟಿಯಾಗಿದೆ. ಈ ಸಂದರ್ಭದಲ್ಲಿ ತಾವು ಪ್ರಧಾನಿಯಾಗುವ ಮೊದಲು ಯಾವೆಲ್ಲ ರೀತಿಯ ಕಷ್ಟಗಳನ್ನು ಅನುಭವಿಸಿದೆ ಎಂಬ ಜೀವನ ಪಯಣವನ್ನು ಹಂಚಿಕೊಂಡಿದ್ದಾರೆ.

'ನಾನು ಯಾವುದೇ ದೊಡ್ಡ ರಾಜಕೀಯ ಕುಟುಂಬದ ಹಿನ್ನಲೆಯಿಂದ ಬಂದವನಲ್ಲ ಪುಸ್ತಕಗಳಿಂದ ಬಡತನದ ಬಗ್ಗೆ ಕಲಿತಿಲ್ಲ ಬದಲಾಗಿ . ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಚಹಾ ಮಾರಾಟ ಮಾಡುವ ಮೂಲಕ ನಾನು ಇಲ್ಲಿಗೆ ತಲುಪಿದ್ದೇನೆ. ಬಡತನ ಹೇಗಿರುತ್ತದೆ ಎಂಬ ಬಗ್ಗೆ ನಾನು ಪುಸ್ತಕ ಓದಿ ತಿಳಿದಿಲ್ಲ, ನನ್ನ ಜೀವನದ ಅನುಭವಗಳೇ ನನಗೆ ಬಡತನದ ಪಾಠಗಳನ್ನು ಕಲಿಸಿದೆ. ಕೆಲವೇ ವರ್ಷಗಳಲ್ಲಿ ಭಾರತ ಬಡತನಮುಕ್ತವಾಗಲಿದೆ. ಬಡತನ ನಿರ್ಮೂಲನೆಯತ್ತ ನನ್ನ ಮೊದಲ ಹೆಜ್ಜೆಯೆಂದರೆ ಬಡವರನ್ನು ಸಬಲರನ್ನಾಗಿ ಮಾಡುವುದು. ಬಡವರಿಗೂ ಸಮಾಜದಲ್ಲಿ ಉತ್ತಮ ಸ್ಥಾನಮಾನ ಸಿಗಬೇಕು. ಒಬ್ಬ ಬಡವನಿಗೆ ತಾನೀಗ ಬಡವನಲ್ಲ ಎಂದು ಅನಿಸಿದರೆ ಅದಕ್ಕಿಂತ ದೊಡ್ಡ ಆತ್ಮತೃಪ್ತಿ ಮತ್ತೊಂದಿಲ್ಲ. ದೇಶದಲ್ಲಿ ಶೌಚಾಲಯಗಳನ್ನು ಕಟ್ಟುವ, ಬ್ಯಾಂಕ್​ ಖಾತೆಗಳನ್ನು ತೆರೆಯುವ ಮೂಲಕ ಬಡವರನ್ನು ಸಬಲರನ್ನಾಗಿ ಮಾಡಲು ಪಣ ತೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com