ಸಂಪರ್ಕಕ್ಕೆ ಸಿಗದ ವಿಕ್ರಮ್: ಭಾರತದ ಕಾಲೆಳೆಯಲು ಹೋಗಿ ಟ್ರೋಲ್ ಗೊಳಗಾದ ಪಾಕ್ ಸಚಿವ

ವಿಕ್ರಮ್ ಲ್ಯಾಂಡರ್​​ ಚಂದ್ರನ ಮೇಲೆ ಇಳಿಯುವುದನ್ನು ಕಣ್ಣು ತುಂಬಿಕೊಳ್ಳಲು ತಡರಾತ್ರಿವರೆಗೆ ಟಿವಿ ಮುಂದೆ ಕಣ್ಣು ಬಿಟ್ಟು ಕುಳಿತಿದ್ದ ಫವಾದ್​ ಹುಸೇನ್, ಲ್ಯಾಂಡರ್ ಸಂಕರ್ಪ ಕಳೆದುಕೊಂಡ ಸುದ್ದಿ ತಿಳಿದಾಕ್ಷಣ ಟ್ವಿಟರ್​​ನಲ್ಲಿ ಭಾರತವನ್ನು ಟ್ರೋಲ್  ಮಾಡಲು ಮುಂದಾಗಿದ್ದಾರೆ. 
ಫವಾದ್ ಹುಸೇನ್
ಫವಾದ್ ಹುಸೇನ್

ನವದೆಹಲಿ: ವಿಕ್ರಮ್ ಲ್ಯಾಂಡರ್​​ ಚಂದ್ರನ ಮೇಲೆ ಇಳಿಯುವುದನ್ನು ಕಣ್ಣು ತುಂಬಿಕೊಳ್ಳಲು ತಡರಾತ್ರಿವರೆಗೆ ಟಿವಿ ಮುಂದೆ ಕಣ್ಣು ಬಿಟ್ಟು ಕುಳಿತಿದ್ದ ಫವಾದ್​ ಚೌಧರಿ, ಲ್ಯಾಂಡರ್ ಸಂಕರ್ಪ ಕಳೆದುಕೊಂಡ ಸುದ್ದಿ ತಿಳಿದಾಕ್ಷಣ ಟ್ವಿಟರ್​​ನಲ್ಲಿ ಭಾರತವನ್ನು ಟ್ರೋಲ್ ಮಾಡಲು ಮುಂದಾಗಿದ್ದಾರೆ. 

ಆದರೆ  ತಾನೊಂದು ನೆನೆದರೇ ದೈವವೊಂದು ಬಗೆಯಿತು  ಎಂಬಂತೆ Satellite ಗೆ ಬದಲಾಗಿ Sattelite ಎಂದು ತಪ್ಪಾಗಿ ಬರೆದಿದ್ದಾರೆ. ಇದನ್ನು ಬಳಸಿಕೊಂಡು ಸೋಷಿಯಲ್ ಮೀಡಿಯಾ ಮಂದಿ ಚೌಧರಿಯನ್ನು ಬಾರಿ ಟ್ರೋಲ್‌ ಮಾಡುತ್ತಿದ್ದಾರೆ.

ಸ್ಯಾಟಲೈಟ್​ಗೆ ಸರಿಯಾದ ಸ್ಪೆಲ್ಲಿಂಗ್ ಬರೆಯಲು ಬಾರದ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್​ ಚೌಧರಿ ಚಂದ್ರಯಾನ-2 ಕುರಿತು ತಿಳಿವಳಿಕೆ ನೀಡುತ್ತಿದ್ದಾರೆ ಎಂದು ಟ್ವೀಟಿಗರು ಅಣಕಿಸಿದ್ದಾರೆ.

ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ನ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿತಗೊಂಡಿದ್ದು ತಿಳಿಯುತ್ತಲೇ ಭಾರತವನ್ನು ಅಣಕಿಸಲು ಹೋಗಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com