ಕೆನಡಾಗೆ ಅಪ್ಪಳಿಸಿದ ಡೋರಿಯನ್ ಚಂಡಮಾರುತ; ಬಹಮಾಸ್ ನಲ್ಲಿ 43ಕ್ಕೆ ಏರಿಕೆ

ಬಹಮಾಸ್ ನಲ್ಲಿ ಮರಣ ಮೃದಂಗ ಬಾರಿಸಿರುವ ವಿನಾಶಕಾರಿ ಡೋರಿಯನ್ ಚಂಡಮಾರುತ ಇದೀಗ ಕೆನಡಾಗೆ ಅಪ್ಪಳಿಸಿದ್ದು, ಭಾರಿ ಪ್ರಮಾಣದ ಮಳೆಯಾಗುತ್ತಿದೆ.
ಡೋರಿಯನ್ ಚಂಡಮಾರುತ
ಡೋರಿಯನ್ ಚಂಡಮಾರುತ

ಕೆನಡಾ: ಬಹಮಾಸ್ ನಲ್ಲಿ ಮರಣ ಮೃದಂಗ ಬಾರಿಸಿರುವ ವಿನಾಶಕಾರಿ ಡೋರಿಯನ್ ಚಂಡಮಾರುತ ಇದೀಗ ಕೆನಡಾಗೆ ಅಪ್ಪಳಿಸಿದ್ದು, ಭಾರಿ ಪ್ರಮಾಣದ ಮಳೆಯಾಗುತ್ತಿದೆ.

ಕೆನಡಾದ ನೋವಾ ಸ್ಕೋಟಿಯಾ ಪ್ರಾಂತ್ಯದಲ್ಲಿ ಡೊರಿಯಾನ್ ಚಂಡಮಾರುತ ಅಪ್ಪಳಿಸಿದ್ದು, ಇಲ್ಲಿನ ಬಹುತೇಕ ಮನೆಗಳು ಹಾನಿಗೀಡಾಗಿವೆ. ಮನೆಗಳ ಮೇಲ್ಛಾವಣಿಗಳು ಚಂಡಮಾರುತದ ರಭಸಕ್ಕೆ ಹಾರಿ ಹೋಗಿದ್ದು, ಪ್ರತೀ ಗಂಟೆಗೆ 150 ಕಿಮೀ ವೇಗದಲ್ಲಿ ಬೀಸುತ್ತಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಚಂಡಮಾರುತದ ಪರಿಣಾಮ ಸಮುದ್ರದಲ್ಲಿ 15 ಮೀಟರ್ ಗೂ ಅಧಿಕ ಎತ್ತರ ಅಲೆಗಳು ಎದ್ದಿದ್ದು, ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಬಹಮಾಸ್‌ನಲ್ಲಿ 43ಕ್ಕೆ ಏರಿಕೆ
ಇನ್ನು ಬಹಮಾಸ್‌ನಲ್ಲಿ ಭೀಕರ ಡೋರಿಯನ್ ಚಂಡಮಾರುತದಿಂದ ಮೃತಪಟ್ಟವರ ಸಂಖ್ಯೆ 43 ಜನರಿಗೆ ಏರಿದ್ದು, ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಲ್ಲಿನ ಪ್ರಧಾನಿ ಹ್ಯೂಬರ್ಟ್ ಮಿನ್ನಿಸ್ ಕಚೇರಿ ತಿಳಿಸಿದೆ. ಚಂಡ ಮಾರುತದಿಂದ 30 ಜನರು ಸಾವನ್ನಪ್ಪಿದ್ದಾರೆ ಎಂದು ಮಿನ್ನಿಸ್ ಗುರುವಾರ ಹೇಳಿದ್ದರು. ‘ಇದುವರೆಗೆ 43ಮಂದಿ ಮೃತಪಟ್ಟಿರುವುದು ಅಧಿಕೃತವಾಗಿ ತಿಳಿದುಬಂದಿದ್ದು, ಹತ್ತಾರು ಮಂದಿ ನಾಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಪ್ರಧಾನ ಮಂತ್ರಿ ವಕ್ತಾರ ಎರಿಕಾ ವೆಲ್ಸ್ ಕಾಕ್ಸ್ ಶುಕ್ರವಾರ ತಿಳಿಸಿರುವುದಾಗಿ ಎನ್‌ಬಿಸಿ ನ್ಯೂಸ್ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com