ಕಾಶ್ಮೀರಿ ಮಕ್ಕಳು ಸುರಕ್ಷಿತವಾಗಿ ಮರಳಿ ಶಾಲೆಗೆ ಹೋಗಲು ವಿಶ್ವಸಂಸ್ಥೆ ನೆರವಾಗಬೇಕು-ಮಲಾಲ

ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿನ ಮಕ್ಕಳು ಸುರಕ್ಷಿತವಾಗಿ ಮರಳಿ ಶಾಲೆಗೆ ಹೋಗಲು ವಿಶ್ವಸಂಸ್ಥೆ ನೆರವಾಗಬೇಕು ಎಂದು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಹಾಗೂ ಪಾಕಿಸ್ತಾನಿ ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸಫ್ ಝಾಯಿ ಒತ್ತಾಯಿಸಿದ್ದಾರೆ.
ಮಲಾಲ ಯೂಸಫ್ ಝಾಯಿ
ಮಲಾಲ ಯೂಸಫ್ ಝಾಯಿ
Updated on

ಇಸ್ಲಾಬಾಮಾದ್ : ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿನ ಮಕ್ಕಳು ಸುರಕ್ಷಿತವಾಗಿ ಮರಳಿ ಶಾಲೆಗೆ ಹೋಗಲು ವಿಶ್ವಸಂಸ್ಥೆ ನೆರವಾಗಬೇಕು ಎಂದು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಹಾಗೂ ಪಾಕಿಸ್ತಾನಿ ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸಫ್ ಝಾಯಿ ಒತ್ತಾಯಿಸಿದ್ದಾರೆ.

ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಗೊಳಿಸಿದ ನಂತರ ಆಗಸ್ಟ್ 5 ರಿಂದಲೂ ಅಲ್ಲಿ ನಿರ್ಬಂಧ ವಿಧಿಸಲಾಗಿದೆ. ಬಹುತೇಕ ಅಂಗಡಿಗಳು ಹಾಗೂ ಶಾಲಾ, ಕಾಲೇಜುಗಳು ಮುಚ್ಚಲ್ಪಟ್ಟಿದ್ದು, ಸಾಮಾನ್ಯ ಜನಜೀವನದ ಮೇಲೆ ಪರಿಣಾಮ ಬೀರಿದೆ. 

ಕಾಶ್ಮೀರಿಗಳ ಧ್ವನಿಗಳನ್ನು ಕೇಳಬೇಕಾಗಿದೆ, ಅವರ ಮಕ್ಕಳು ಸುರಕ್ಷಿತವಾಗಿ ಮರಳಿ ಶಾಲೆಗೆ ಹೋಗುವಂತಾಗಬೇಕು, ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಮುಂದಾಗಬೇಕೆಂದು ಕೇಳಿಕೊಳ್ಳುವುದಾಗಿ ಮಲಾಲ ಟ್ವೀಟ್ ಮಾಡಿದ್ದಾರೆ. 

ಹೆಣ್ಣು ಮಕ್ಕಳು ಮನೆಯಲ್ಲಿ ವಾಸಿಸಲು ಭಯಪಡುವಂತಾಗಿದ್ದು, 40ಕ್ಕೂ ಅಧಿಕ ದಿನಗಳಿಂದಲೂ ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿಲ್ಲ ಎಂಬಂತಹ ವರದಿಗಳ ಬಗ್ಗೆ 22 ವರ್ಷದ ಮಲಾಲ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರದಲ್ಲಿ ಸಂವಹನ ವ್ಯವಸ್ಥೆ ಸ್ಥಗಿತಗೊಂಡಿದ್ದು, ಅಲ್ಲಿನ ಜನರು ಹೊರ ಜಗತ್ತಿದೊಂದಿಗೆ ಸಂಪರ್ಕ ಸಾಧಿಸದಂತಾಗಿದೆ. ಅವರ ಧ್ವನಿಯನ್ನು ಕೇಳದಂತಾಗಿದೆ ಎಂದು ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com