ಚೀನಾದಲ್ಲಿ ಭಾರಿ ಮಳೆ: ಪ್ರವಾಸಿಗರಿಗೆ 'ಮೌಂಟ್ ಹುವಾಶಾನ್' ಬಂದ್

ಚೀನಾದಲ್ಲಿ ಧಾರಾಕಾರ ಮಳೆಯಿಂದಾಗಿ ವಾಯವ್ಯ ಪ್ರಾಂತ್ಯದ ಶಾಂಶಿಯ ಪ್ರವಾಸಿ ತಾಣ 'ಮೌಂಟ್ ಹುವಾಶನ್' ಗೆ ಪ್ರವಾಸಿಗರ ಭೇಟಿಯನ್ನು ಭಾನುವಾರ ಮಧ್ಯಾಹ್ನದಿಂದ ನಿಷೇಧಿಸಲಾಗಿದೆ.
ಚೀನಾದಲ್ಲಿ ಭಾರಿ ಮಳೆ: ಪ್ರವಾಸಿಗರಿಗೆ 'ಮೌಂಟ್ ಹುವಾಶಾನ್' ಬಂದ್
ಚೀನಾದಲ್ಲಿ ಭಾರಿ ಮಳೆ: ಪ್ರವಾಸಿಗರಿಗೆ 'ಮೌಂಟ್ ಹುವಾಶಾನ್' ಬಂದ್

ಶಿಯಾನ್ (ಕ್ಷಿನುಹಾ) ಚೀನಾದಲ್ಲಿ ಧಾರಾಕಾರ ಮಳೆಯಿಂದಾಗಿ ವಾಯವ್ಯ ಪ್ರಾಂತ್ಯದ ಶಾಂಶಿಯ ಪ್ರವಾಸಿ ತಾಣ 'ಮೌಂಟ್ ಹುವಾಶನ್' ಗೆ ಪ್ರವಾಸಿಗರ ಭೇಟಿಯನ್ನು ಭಾನುವಾರ ಮಧ್ಯಾಹ್ನದಿಂದ ನಿಷೇಧಿಸಲಾಗಿದೆ.

ಶನಿವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ರವಿವಾರ ಬೆಳಗ್ಗೆ 9 ಗಂಟೆಯವರೆಗೆ 60 ಮಿ.ಮೀ ಮಳೆಯಾಗಿದ್ದು ಪರ್ವತಾರೋಹಣ ನಿರ್ಬಂಧಿಸಲಾಗಿದೆ ಎಂದು ಮೌಂಟ್ ಹುವಾಶಾನ್‌ ನಿರ್ವಹಣಾ ಸಮಿತಿ ತಿಳಿಸಿದೆ. ಸ್ಥಳೀಯ ಹವಾಮಾನ ಇಲಾಖೆ ಅನುಸಾರ, ಗುರುವಾರದವರೆಗೂ ಮಳೆ ಮುಂದುವರಿಯಲಿದ್ದು, ಇದರಿಂದಾಗಿ ಭೂಕುಸಿತ ಮತ್ತು ಮಣ್ಣು ಕುಸಿತ ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com