ಚಾಕೊಲೇಟ್ ಕೊಡ್ತಿಲ್ಲ ಅಂತ ಡಿವೋರ್ಸ್ ಗೆ ಮುಂದಾದ ಮಹಿಳೆ!

ಚಾಕೊಲೇಟ್ ಅನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಪತ್ನಿಯೊಬ್ಬಳು ವಿಚ್ಛೇದನದತ್ತ ಮುಖ ಮಾಡಿರುವ ಕುರಿತು ವರದಿಯಾಗಿದೆ.

Published: 20th September 2019 03:57 PM  |   Last Updated: 20th September 2019 04:13 PM   |  A+A-


woman seeks divorce

ಸಂಗ್ರಹ ಚಿತ್ರ

Posted By : Srinivasamurthy VN
Source : Online Desk

ಚಾಕೊಲೇಟ್ ಇರುವ ಫ್ರಿಡ್ಜ್ ಗೆ ಬೀಗ ಹಾಕಿದ ಪತಿ ಮಹಾಶಯ, ಫೇಸ್ ಬುಕ್ ನಲ್ಲಿ ಪತ್ನಿಯ ಅಳಲು

ನವದೆಹಲಿ: ಚಾಕೊಲೇಟ್ ಅನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಪತ್ನಿಯೊಬ್ಬಳು ವಿಚ್ಛೇದನದತ್ತ ಮುಖ ಮಾಡಿರುವ ಕುರಿತು ವರದಿಯಾಗಿದೆ.

ಆಧುನಿಕ ಜೀವನ ಶೈಲಿಯಲ್ಲಿ ದಂಪತಿಗಳು ಕ್ಷುಲ್ಲಕ ವಿಚಾರಕ್ಕೆಲ್ಲಾ ಜಗಳ ಮಾಡಿಕೊಂಡು ವಿಚ್ಛೇದನ ಪಡೆಯುತ್ತಿದ್ದಾರೆ. ಇದಕ್ಕೆ ನೂತನ ಸೇರ್ಪಡೆಯೊಂದು ಇಲ್ಲಿದ್ದು, ಪತಿ ತನಗೆ ಚಾಕೊಲೇಟ್ ನೀಡುತ್ತಿಲ್ಲ ಎಂದು ಆರೋಪಿಸಿ ಪತ್ನಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಅಲ್ಲದೆ ತನ್ನ ಪತಿಯ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಕೂಡ ಹಾಕಿದ್ದಾರೆ. ಆಕೆ ಹಾಕಿರುವ ಪೋಸ್ಟ್ ಇದೀಗ ವೈರಲ್ ಆಗಿದೆ.

ಸ್ಟೇಸಿ ಲೋವೆ ಎಂಬ ಫೇಸ್ ಬುಕ್ ಖಾತೆದಾರರು ಈ ಪೋಸ್ಟ್ ಹಾಕಿದ್ದು, ಚಾಕೊಲೇಟ್ ಪ್ರಿಯ ತನ್ನ ಪತಿ ಚಾಕಲೇಟ್ ಇರುವ ಬಾಕ್ಸ್ ಗೆ ಲಾಕ್ ಹಾಕಿದ್ದಾರೆ. ಆ ಚಾಕೊಲೇಟ್ಅನ್ನು ನಾನು ತಿನ್ನಬಾರದು ಎಂದು. ಇಂತಹ ಹೀನ ಮನಸ್ಥಿತಿಯ ವ್ಯಕ್ತಿಯೊಂದಿಗೆ ಬಾಳಬೇಕೇ.. ಇದು ವಿಚ್ಛೇದನದ ಕುರಿತು ಗಂಭೀರವಾಗಿ ಆಲೋಚಿಸಬೇಕಿದೆ ಎಂದು ಬರೆದುಕೊಂಡಿದ್ದಾರೆ.

ಚಾಕೋಲೆಟ್ ಇರುವ ಫ್ರಿಜ್​​ನ ಒಂದು ಭಾಗಕ್ಕೆ ಸೆಕ್ಯೂರಿಟಿ ಲಾಕ್​ ಅಳವಡಿಸಿರುವ ತನ್ನ ಭಾವಿ ಪತಿಯ ನಡೆಯಿಂದ ಬೇಸರಗೊಂಡ ಲೊವೆ, 'ನೀವು ಒಟ್ಟಿಗೆ ಮನೆಯನ್ನು ಖರೀದಿಸುತ್ತೀರಾ, ಮಗುವನ್ನು ಒಟ್ಟಿಗೆ ಬಯಸುತ್ತೀರಾ​, ನಿಶ್ಚಿತಾರ್ಥದಿಂದ ಹಿಡಿದು ಮದುವೆಯ ಯೋಜನೆ ಮತ್ತು ಮನೆ ಮಾಡುವವರೆಗೂ ಎಲ್ಲವೂ ಒಟ್ಟಿಗೆ ಬೇಕು. ಆದರೆ, ಡೇವ್​ ಮಾತ್ರ ಹೊರ ಹೋಗಿ ಚಾಕೋಲೆಟ್​ ಕೊಂಡು ಬಂದು ತಮ್ಮ ಫ್ರಿಜ್​​ನಲ್ಲಿ ಸೇಫ್​ ಆಗಿ ಸೆಕ್ಯೂರಿಟಿ ಲಾಕ್​ನಲ್ಲಿ ಇಡುತ್ತಾರೆ. ಇವನೊಬ್ಬ ಮೂರ್ಖ, ಇನ್ನು ಮುಂದೆ ನನ್ನೊಂದಿಗೆ ಶೇರ್​ ಮಾಡಿಕೊಳ್ಳುವುದಿಲ್ಲವಂತೆ. ಇಂತಹವನನ್ನು ಯಾರಾದರೂ ಬಯಸುತ್ತಾರೆಯೇ? ನಿಜವಾಗಿಯೂ ಇದು ಮುರಿದುಕೊಳ್ಳುವಂತಹ ಸಂಬಂಧವಲ್ಲವೇ? ಎಂದು ಬರೆದುಕೊಂಡಿದ್ದಾರೆ.

ಅಲ್ಲದೆ ಫ್ರಿಡ್ಜ್ ನಲ್ಲಿ ಇಡಬಹುದಾದ ಲಾಕರ್ ಗಳ ಆನ್ ಲೈನ್ ಖರೀದಿ ಲಿಂಕ್ ಅನ್ನು ಕೂಡ ಶೇರ್ ಮಾಡಿದ್ದಾರೆ. ಸೆಪ್ಟೆಂಬರ್​ 12 ರಂದು ಈ ಪೋಸ್ಟ್​ ಮಾಡಲಾಗಿದ್ದು, ಈ ಪೋಸ್ಟ್ ವೈರಲ್​ ಆಗಿದೆ. ಈವರೆಗೂ 60,000 ಬಾರಿ ಶೇರ್​ ಆಗಿದ್ದು, 1 ಲಕ್ಷಕ್ಕೂ ಹೆಚ್ಚು ಮಂದಿ ಕಮೆಂಟ್​ ಮಾಡಿದ್ದಾರೆ. 

Stay up to date on all the latest ಅಂತಾರಾಷ್ಟ್ರೀಯ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp