ಇಂಧನ ವಲಯ ಸಿಇಒಗಳೊಂದಿಗೆ ಪಿಎಂ ಸಭೆ 'ಫಲಪ್ರದ'ವಾಗಿತ್ತು: ವಿದೇಶಾಂಗ ಇಲಾಖೆ 

ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಂದು ವಾರದ ಅಮೆರಿಕಾ ಪ್ರವಾಸದಲ್ಲಿದ್ದು ಇಂಧನ ವಲಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. 
ಅಮೆರಿಕಾದ ಉನ್ನತ ತೈಲ ಕಂಪೆನಿಗಳ ಸಿಇಒಗಳೊಂದಿಗೆ ಪಿಎಂ ನರೇಂದ್ರ ಮೋದಿ
ಅಮೆರಿಕಾದ ಉನ್ನತ ತೈಲ ಕಂಪೆನಿಗಳ ಸಿಇಒಗಳೊಂದಿಗೆ ಪಿಎಂ ನರೇಂದ್ರ ಮೋದಿ

ಹೌಸ್ಟನ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಂದು ವಾರದ ಅಮೆರಿಕಾ ಪ್ರವಾಸದಲ್ಲಿದ್ದು ಇಂಧನ ವಲಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.


ಸಭೆಯಲ್ಲಿ ಎರಡೂ ದೇಶಗಳು ಇಂಧನ ವಲಯದಲ್ಲಿ ಭದ್ರತೆ ಮತ್ತು ಪರಸ್ಪರ ಹೂಡಿಕೆ ಅವಕಾಶಗಳ ವಿಸ್ತರಣೆಗೆ ಒಟ್ಟಾಗಿ ಕೆಲಸ ಮಾಡಲು ಗಮನ ಹರಿಸುವ ಕುರಿತು ಮಾತುಕತೆ ನಡೆಸಲಾಯಿತು. 


ಉದ್ಯಮದ ಕುರಿತು ಚರ್ಚೆಯಾಯಿತು. ಹೌಸ್ಟನ್ ನಲ್ಲಿ ದುಂಡುಮೇಜಿನ ಸಭೆಯಲ್ಲಿ ಇಂಧನ ವಲಯ ಸಿಇಒಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಈಗಷ್ಟೇ ಫಲಪ್ರದ ಮಾತುಕತೆ ಮುಗಿಸಿದರು. ಇಂಧನ ಭದ್ರತೆ ಮತ್ತು ಪರಸ್ಪರ ಹೂಡಿಕೆ ಅವಕಾಶಗಳನ್ನು ಭಾರತ ಮತ್ತು ಅಮೆರಿಕಾದಲ್ಲಿ ವಿಸ್ತರಿಸಲು ಮಾತುಕತೆ ನಡೆಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.


ಇದಕ್ಕೂ ಮುನ್ನ ಪ್ರಧಾನಿ ಮೋದಿ ಅಮೆರಿಕಾದಲ್ಲಿರುವ ಕೆಲವು ಉನ್ನತ ಮಟ್ಟದ ತೈಲ ಕಂಪೆನಿಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸುವ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯ ಪ್ರಕಟಿಸಿದೆ.


ಇಂದು ಬಹುನಿರೀಕ್ಷಿತ ಹೌಡಿ-ಮೋಡಿ ಕಾರ್ಯಕ್ರಮ ಹೌಸ್ಟನ್ ನಲ್ಲಿ ನಡೆಯಲಿದ್ದು ಸುಮಾರು 50 ಸಾವಿರಕ್ಕೂ ಅಧಿಕ ಭಾರತೀಯ ಅಮೆರಿಕನ್ನರು ಭಾಗವಹಿಸುವ ನಿರೀಕ್ಷೆಯಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com