ಪ್ರಧಾನಿ ಮೋದಿಗಾಗಿ ವಿಶೇಷ ನಮೋ ಥಾಲಿ ಸಿದ್ಧಪಡಿಸಿದ ಅಮೆರಿಕಾದ ಬಾಣಸಿಗ!

ವಿಶ್ವಸಂಸ್ಥೆ ಸಾಮಾನ್ಯ ಸಭೆಯ 74ನೇ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅಮೆರಿಕಾಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ತಂಗಿರುವ ಹೋಟೆಲ್ ವೊಂದರ ಬಾಣಸಿಗ  ಮೋದಿಗಾಗಿ ವಿಶೇಷ ಆಹಾರವನ್ನು ತಯಾರಿಸಿದ್ದಾರೆ.

Published: 22nd September 2019 05:09 PM  |   Last Updated: 22nd September 2019 05:09 PM   |  A+A-


special NaMo thalis

ನಮೋ ಥಾಲಿ

Posted By : Nagaraja AB
Source : PTI

ಹೌಸ್ಟನ್: ವಿಶ್ವಸಂಸ್ಥೆ ಸಾಮಾನ್ಯ ಸಭೆಯ 74ನೇ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅಮೆರಿಕಾಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ತಂಗಿರುವ ಹೋಟೆಲ್ ವೊಂದರ ಬಾಣಸಿಗ  ಮೋದಿಗಾಗಿ ವಿಶೇಷ ಆಹಾರವನ್ನು ತಯಾರಿಸಿದ್ದಾರೆ.

ಪ್ರಧಾನಿ ಮೋದಿ ವಿಶೇಷ ಮನವಿ ಮಾಡದಿದ್ದರೂ ಬಾಣಸಿಗ ಕಿರಣ್ ವರ್ಮಾ,ವಿಶೇಷ ನಮೋ ಥಾಲಿಯನ್ನು ತಯಾರಿಸಿದ್ದಾರೆ. ನಮೋ ಥಾಲಿ ಮಿಠಾಯಿ ಹಾಗೂ ನಮೋ ಥಾಲಿ ಸೆವ್ರಿ ಎಂಬ ಎರಡು ವಿಧದ ಥಾಲಿಯನ್ನು ಸಿದ್ದಪಡಿಸಿದ್ದಾರೆ.ಎಲ್ಲಾ ಬಗೆಯ ಆಹಾರವನ್ನು ದೇಶಿ ತುಪ್ಪದಿಂದ ತಯಾರಿಸಲಾಗಿದೆ. ಮೋದಿಗಾಗಿ ವಿಶೇಷ ಚಟ್ನಿಯನ್ನು ಕೂಡಾ ತಯಾರಿಸಲಾಗಿದೆ. 

ನಮೋ ಥಾಲಿಯಲ್ಲಿ ಶ್ರೀಖಂಡ್, ರಸಮಲೈ, ಗಜರ್ ಕಾ ಹಲ್ವಾ,ಬಾದಾಮ್ ಹಲ್ವಾನೂ ಇರುತ್ತದೆ. ನಮೋ ಥಾಲಿ ಸೆವ್ರಿಯಲ್ಲಿ ಕಿಚಡಿ, ಕಚೋರಿ ಹಾಗೂ ಮೇಥಿ ಥೆಪ್ಲಾ ಇರುತ್ತದೆ. 

ಪ್ರಧಾನಿ ಮೋದಿಗಾಗಿ ವಿವಿಧ ರಾಜ್ಯಗಳ ಹಾಗೂ ನಗರಗಳ ಆಹಾರವನ್ನು ನೀಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಮೋದಿಗೆ ಈ ರೀತಿಯ ಆಹಾರವನ್ನು ತಯಾರಿಸುತ್ತಿರುವುದಾಗಿ ಬಾಣಸಿಗರಾದ ಕಿರಣ್ ವರ್ಮಾ ತಿಳಿಸಿದ್ದಾರೆ.

ಅಮೆರಿಕಾದೊಂದಿಗೆ ದ್ವಿಪಕ್ಷೀಯ ಸಂಬಂಧ ಬಲವರ್ದನೆ ಹಾಗೂ ವಿಶ್ವಸಂಸ್ಥೆಯ ಸಾಮಾನ್ಯಸಭೆಯ 74ನೇ ಅಧಿವೇಶನದಲ್ಲಿ ಭಾಷಣ ಮಾಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಏಳು ದಿನಗಳ ಅಮೆರಿಕಾ ಪ್ರವಾಸ ಕೈಗೊಂಡಿದ್ದಾರೆ. 

Stay up to date on all the latest ಅಂತಾರಾಷ್ಟ್ರೀಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp