ಭಾರತದಲ್ಲಿ 40 ಕೋ ಅಸಂಘಟಿತ ವಲಯ ಕಾರ್ಮಿಕರನ್ನು ಬಡತನಕ್ಕೆ ತಳ್ಳಲಿದೆ ಕೊರೋನಾ ಲಾಕ್ ಡೌನ್

ಭಾರತ ದೇಶದಲ್ಲಿ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಸುಮಾರು 40 ಕೋಟಿ ಕಾರ್ಮಿಕರು ಕೊರೋನಾ ಸೋಂಕಿನ ಆರ್ಥಿಕ ಹೊಡೆತದಿಂದಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಬಡತನಕ್ಕೆ ಇಳಿಯಬಹುದು ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ಹೇಳಿದೆ.
ಭಾರತದಲ್ಲಿ 40 ಕೋ ಅಸಂಘಟಿತ ವಲಯ ಕಾರ್ಮಿಕರನ್ನು ಬಡತನಕ್ಕೆ ತಳ್ಳಲಿದೆ ಕೊರೋನಾ ಲಾಕ್ ಡೌನ್

ಜೆನೆವಾ:ಭಾರತ ದೇಶದಲ್ಲಿ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಸುಮಾರು 40 ಕೋಟಿ ಕಾರ್ಮಿಕರು ಕೊರೋನಾ ಸೋಂಕಿನ ಆರ್ಥಿಕ ಹೊಡೆತದಿಂದಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಬಡತನಕ್ಕೆ ಇಳಿಯಬಹುದು ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ಹೇಳಿದೆ.

ಸಂಘಟನೆ ಇಂದು ಸಲ್ಲಿಸಿರುವ ವರದಿಯಲ್ಲಿ ಜಾಗತಿಕ ಮಟ್ಟದಲ್ಲಿ ಕೊರೋನಾ ಸೋಂಕಿನಿಂದ 2.7 ಶತಕೋಟಿ ಕಾರ್ಮಿಕರ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ. ಕೋವಿಡ್-19 ಈಗಾಗಲೇ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಕೋಟ್ಯಂತರ ಜನರ ಜೀವನದ ಮೇಲೆ ಪರಿಣಾಮ ಬೀರಿದೆ. ಭಾರತ, ನೈಜೀರಿಯಾ, ಬ್ರೆಜಿಲ್ ದೇಶಗಳಲ್ಲಿ ಲಾಕ್ ಡೌನ್ ನಂತರ ಸಾಕಷ್ಟು ತೊಂದರೆಗೀಡಾಗಿದ್ದು ಬದಲಿ ಪರಿಹಾರಗಳು ತುರ್ತಾಗಿ ಸಿಗಬೇಕಿದೆ ಎಂದು ಹೇಳಿದೆ.

ಭಾರತ ದೇಶದಲ್ಲಿ ಶೇಕಡಾ 90ರಷ್ಟು ಮಂದಿ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಶ್ವದಲ್ಲಿ 400 ಮಿಲಿಯನ್ ಜನರನ್ನು ಈ ಕೊರೋನಾ ಸೋಂಕಿನಿಂದ ಆದ ಲಾಕ್ ಡೌನ್ ಮತ್ತಷ್ಟು ದುಸ್ಥಿತಿಗೆ ತಳ್ಳುತ್ತದೆ. ಕೂಲಿ ಹುಡುಕಿಕೊಂಡು ನಗರ ಪ್ರದೇಶಗಳಿಗೆ ಗುಳೆ ಹೊರಟ ಸಾವಿರಾರು ಮಂದಿ ಮತ್ತೆ ಗ್ರಾಮೀಣ ಪ್ರದೇಶಗಳಿಗೆ ಹೋಗುವ ಸಾಧ್ಯತೆಯಿದೆ ಎಂದು ಕೂಡ ಕಾರ್ಮಿಕ ಸಂಘಟನೆ ಹೇಳಿದೆ.

ಕಡಿಮೆ ಮತ್ತು ಮಧ್ಯಮ ಪ್ರಮಾಣದ ಆದಾಯ ಹೊಂದಿರುವ ದೇಶಗಳ ಜನರು, ಅಸಂಘಟಿತ ವಲಯ ಕಾರ್ಮಿಕರಿಗೆ ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆ ಮತ್ತು ಸಾಮಾಜಿಕ ಭದ್ರತೆಗೆ ಸಂಕಷ್ಟವಾಗಬಹುದು ಎಂದು ಕೂಡ ವರದಿ ತಿಳಿಸಿದೆ. ಸರ್ಕಾರದ ಸರಿಯಾದ ಯೋಜನಾ ಕ್ರಮಗಳಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನರು ಮತ್ತಷ್ಟು ಬಡತನಕ್ಕೆ ಜಾರುವ ಸಾಧ್ಯತೆಯಿದ್ದು ಜೀವನ ನಡೆಸಲು ಸವಾಲುಗಳು ಎದುರಾಗಬಹುದು ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com