ಮಹಾಮಾರಿ ಕೊರೋನಾಗೆ ಅಮೆರಿಕ ತತ್ತರ: ಸೋಂಕಿನಲ್ಲೂ, ಸಾವಿನಲ್ಲೂ ಜಗತ್ತನ್ನೆ ಮೀರಿಸಿದ ಶಕ್ತಿಶಾಲಿ ರಾಷ್ಟ್ರ!

ಅಮೆರಿಕದಲ್ಲಿ ಕರೋನಾವೈರಸ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಭಾನುವಾರ 22,000 ದಾಟಿದ್ದು, ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 5,56,004 ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿ- ಅಂಶಗಳು ತಿಳಿಸಿವೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ನ್ಯೂಯಾರ್ಕ್: ಅಮೆರಿಕದಲ್ಲಿ ಕರೋನಾವೈರಸ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಭಾನುವಾರ 22,000 ದಾಟಿದ್ದು, ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 5,56,004 ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿ- ಅಂಶಗಳು ತಿಳಿಸಿವೆ.
ಅಮೆರಿಕದಲ್ಲಿ ನ್ಯೂಯಾರ್ಕ್ ಹೆಚ್ಚು ಭಾದಿತ ನಗರವಾಗಿದ್ದು, ಇಲ್ಲಿ 6,898 ಸಾವುಗಳು ವರದಿಯಾಗಿವೆ.

ವಿಶ್ವವಿದ್ಯಾಲಯದ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಒಟ್ಟು 2,805,892 ಜನರನ್ನು ಪರೀಕ್ಷಿಸಲಾಗಿದೆ.

ಈ ಪೈಕಿ 461,601 ಪರೀಕ್ಷೆಗಳನ್ನು ನ್ಯೂಯಾರ್ಕ್‌ನಲ್ಲಿ ನಡೆಸಲಾಗಿದೆ. ಅಮೆರಿಕದಲ್ಲಿ ಈವರೆಗೆ ಒಟ್ಟು 32,988 ಜನರು ವೈರಾಣು ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

22,020 ಸಾವುಗಳೊಂದಿಗೆ ಅಮೆರಿಕ ವಿಶ್ವದ ಅತಿ ಹೆಚ್ಚು ಭಾದಿತ ದೇಶವಾಗಿದೆ. ಇಟಲಿ ಮತ್ತು ಸ್ಪೇನ್ ನಲ್ಲಿ ಸೋಂಕಿನಿಂದ ಕ್ರಮವಾಗಿ 19,899 ಮತ್ತು 17,209 ಸಾವುಗಳು ಸಂಭವಿಸಿವೆ.

ಈ ಮಧ್ಯೆ, ಫ್ರಾನ್ಸ್ ನಲ್ಲಿ ಸಾವಿನ ಸಂಖ್ಯೆ 14,000 ದಾಟಿದ್ದು, 133,670 ಪ್ರಕರಣಗಳು ದೃಢಪಟ್ಟಿವೆ.

ಮಾರಕ ಸೋಂಕಿಗೆ 657 ಜನರು ಬಲಿಯಾದ ನಂತರ ಬ್ರಿಟನ್‌ನಲ್ಲಿ ಕೊವಿದ್‍-19ರಿಂದ ಸಾವನ್ನಪ್ಪಿದವರ ಸಂಖ್ಯೆ 10,612 ಕ್ಕೆ ತಲುಪಿದೆ ಎಂದು ದೇಶದ ಆರೋಗ್ಯ ಮತ್ತು ಸಾಮಾಜಿಕ ಆರೈಕೆ ಇಲಾಖೆ ಭಾನುವಾರ ತಿಳಿಸಿದೆ.

ಕರೋನವೈರಸ್‌ನಿಂದಾಗಿ ವಿಶ್ವದಾದ್ಯಂತ ಸಾವನ್ನಪ್ಪಿದವರ ಸಂಖ್ಯೆ 114,185ಕ್ಕೆ ಏರಿದ್ದು, 1,848,503 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ವಿಶ್ವವಿದ್ಯಾಲಯದ ಅಂಕಿ-ಅಂಶಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com