ಹೊಸ ವಲಸೆ ಹಸಿರು ಕಾರ್ಡಿಗೆ ಅಮೆರಿಕ ತಾತ್ಕಾಲಿಕ ನಿರ್ಬಂಧ: ಈ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

ಅಮೆರಿಕಕ್ಕೆ ವಲಸೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ತನ್ನ ಕಾರ್ಯನಿರ್ವಾಹಕ ಆದೇಶದ ಭಾಗವಾಗಿ ಮುಂದಿನ 60 ದಿನಗಳವರೆಗೆ ಹೊಸ ಹಸಿರು ಕಾರ್ಡ್‌ಗಳನ್ನು ಅಥವಾ ಕಾನೂನುಬದ್ಧ ಶಾಶ್ವತ ನಿವಾಸ ಹಕ್ಕು ನೀಡುವ ಪ್ರಕ್ರಿಯೆಯನ್ನು ನಿಲ್ಲಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಹೊಸ ವಲಸೆ ಹಸಿರು ಕಾರ್ಡಿಗೆ ಅಮೆರಿಕ ತಾತ್ಕಾಲಿಕ ನಿರ್ಬಂಧ: ಈ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

ವಾಷಿಂಗ್ಟನ್: ಅಮೆರಿಕಕ್ಕೆ ವಲಸೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ತನ್ನ ಕಾರ್ಯನಿರ್ವಾಹಕ ಆದೇಶದ ಭಾಗವಾಗಿ ಮುಂದಿನ 60 ದಿನಗಳವರೆಗೆ ಹೊಸ ಹಸಿರು ಕಾರ್ಡ್‌ಗಳನ್ನು ಅಥವಾ ಕಾನೂನುಬದ್ಧ ಶಾಶ್ವತ ನಿವಾಸ ಹಕ್ಕು ನೀಡುವ ಪ್ರಕ್ರಿಯೆಯನ್ನು ನಿಲ್ಲಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಆದರೆ ಅಮೆರಿಕಕ್ಕೆ ತಾತ್ಕಾಲಿಕವಾಗಿ ಹೊರದೇಶಗಳಿಂದ ಬರುವವರಿಗೆ ಇದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಈಗಿರುವ ಕಾನೂನು ಪ್ರಕಾರ, ಅಮೆರಿಕ ಸರ್ಕಾರ ಪ್ರತಿವರ್ಷ ಪ್ರತಿದೇಶಕ್ಕೆ ಶೇಕಡಾ 7ರ ಪ್ರಮಾಣದಲ್ಲಿ ಗರಿಷ್ಠ 1,40,000 ಉದ್ಯೋಗ ಆಧಾರಿತ ಹಸಿರು ಕಾರ್ಡುಗಳನ್ನು ನೀಡುತ್ತದೆ.

ಕಳೆದ 2019ನೇ ಸಾಲಿನ ಆರ್ಥಿಕ ವರ್ಷದಲ್ಲಿ 9 ಸಾವಿರದ 8 ಮಂದಿ ಭಾರತೀಯರಿಗೆ ಇಬಿ1 ವಿಭಾಗ 1, 2,908 ವಿಭಾಗ 2, 5,083 ವಿಭಾಗ 3ರ ಗ್ರೀನ್ ಕಾರ್ಡುಗಳನ್ನು ಅಮೆರಿಕಾ ನೀಡಿತ್ತು. ಇಬಿ1-3 ವಿವಿಧ ವರ್ಗದ ಉದ್ಯೋಗ ಆಧಾರಿತ ಗ್ರೀನ್ ಕಾರ್ಡುಗಳಾಗಿವೆ.

ಭಾರತೀಯ ಐಟಿ ವೃತ್ತಿಪರರಲ್ಲಿ ಜನಪ್ರಿಯವಾಗಿರುವ ಹೆಚ್-1ಬಿ ವೀಸಾದ ರೀತಿಯಲ್ಲಿ ವಲಸೆರಹಿತ ವೀಸಾಗಳನ್ನು ಹೊಂದಿರುವ ವಿದೇಶಿಗರಿಗೆ ಇದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಕೃಷಿ ಚಟುವಟಿಕೆಗಳಿಗೆ ಋತುಮಾನದ ವಲಸೆ ಕಾರ್ಮಿಕರ ಮೇಲೆ ಸಹ ಇದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ.

ಇಂದು ಅಧ್ಯಕ್ಷ ಟ್ರಂಪ್ ಅವರು ಈ ಆಡಳಿತಾತ್ಮಕ ಆದೇಶಕ್ಕೆ ಸಹಿ ಹಾಕಿದರೆ ಗ್ರೀನ್ ಕಾರ್ಡಿಗಾಗಿ ಅರ್ಜಿ ಹಾಕಿ ಕಾಯುತ್ತಿರುವ ಸಾವಿರಾರು ಭಾರತೀಯ-ಅಮೆರಿಕಾದ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಗ್ರೀನ್ ಕಾರ್ಡು ಸಿಗುವುದು ಮತ್ತಷ್ಟು ವಿಳಂಬವಾಗಲಿದೆ. ನಾವು ಮೊದಲು ಅಮೆರಿಕಾದ ನೌಕರರ ಹಿತರಕ್ಷಣೆ ಕಾಯಬೇಕು. ಈ ಆದೇಶ ಮುಂದಿನ 60 ದಿನಗಳವರೆಗೆ ಅನ್ವಯವಾಗಲಿದೆ. 60 ದಿನಗಳ ಬಳಿಕ ಯಾವುದೇ ವಿಸ್ತರಣೆ ಅಥವಾ ತಿದ್ದುಪಡಿ, ಬದಲಾವಣೆ ಮಾಡಬಹುದೇ ಎಂಬುದನ್ನು ನಾವೇ ಜನರ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಮೌಲ್ಯಮಾಪನ ಮಾಡುತ್ತೇವೆ ಎಂದು ಟ್ರಂಪ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಯಾರಿಗೆ ಅನ್ವಯವಾಗುತ್ತದೆ?: ಅಮೆರಿಕದಲ್ಲಿ ಶಾಶ್ವತ ನೆಲೆಸಲು ಬಯಸುತ್ತಿರುವ ವಿದೇಶಿಗರಿಗೆ, ಅಲ್ಲಿನ ಗ್ರೀನ್ ಕಾರ್ಡು ಪಡೆಯಲು ಬಯಸುವವರಿಗೆ, ದೊಡ್ಡ ದೊಡ್ಡ ಕೈಗಾರಿಕೆಗಳಿಗೆ ಅನ್ವಯವಾಗುತ್ತದೆಯೇ ಹೊರತು ತಾತ್ಕಾಲಿಕವಾಗಿ ಅಮೆರಿಕಕ್ಕೆ ಹೋಗಲು ಬಯಸುವವರಿಗೆ ಅನ್ವಯವಾಗುವುದಿಲ್ಲ. ಇದರಲ್ಲಿ ವಿನಾಯ್ತಿ ಕೂಡ ಇದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com