ಕುಲಭೂಷಣ್ ಜಾಧವ್ ಪರ ವಕೀಲರ ನೇಮಕಾತಿ ಕುರಿತು ವಿವರಿಸಲು ಭಾರತ ಬಯಸಿದೆ: ಐಎಚ್‌ಸಿ

ಪಾಕಿಸ್ತಾನದಲ್ಲಿ ಮರಣದಂಡನೆ ಶಿಕ್ಷೆಗೊಳಗಾಗಿರುವ ಭಾರತೀಯ ನೌಕಾದಳದ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಪರ ವಕೀಲರನ್ನು ನೇಮಕ ಮಾಡುವ ಬಗ್ಗೆ ಭಾರತದ ನಿಲುವನ್ನು ವಿವರಿಸಲು ಉಪ ಹೈಕಮಿಷನರ್ ಗೌರವ್ ಅಹ್ಲುವಾಲಿಯಾ ಬಯಸಿದ್ದಾರೆಂದು ಪಾಕಿಸ್ತಾನದ ಭಾರತೀಯ ಹೈಕಮಿಷನ್‌ನ ವಕೀಲರು ಇಸ್ಲಾಮಾಬಾದ್ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾಗಿ ಮಾಧ್ಯಮ ವರದಿ ತಿಳಿಸಿದೆ.
ಕುಲಭೂಷಣ್ ಜಾಧವ್
ಕುಲಭೂಷಣ್ ಜಾಧವ್
Updated on

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮರಣದಂಡನೆ ಶಿಕ್ಷೆಗೊಳಗಾಗಿ ಜೈಲು ಸೇರಿರುವ ಭಾರತೀಯ ನೌಕಾದಳದ ಮಾಜಿ ಅಧಿಕಾರಿ  ಕುಲಭೂಷಣ್ ಜಾಧವ್ ಪರ ವಕೀಲರನ್ನು ನೇಮಕ ಮಾಡುವ ಬಗ್ಗೆ ಭಾರತದ ನಿಲುವನ್ನು ವಿವರಿಸಲು ಉಪ ಹೈಕಮಿಷನರ್ ಗೌರವ್ ಅಹ್ಲುವಾಲಿಯಾ ಬಯಸಿದ್ದಾರೆಂದು ಪಾಕಿಸ್ತಾನದ ಭಾರತೀಯ ಹೈಕಮಿಷನ್‌ನ ವಕೀಲರು ಇಸ್ಲಾಮಾಬಾದ್ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾಗಿ ಮಾಧ್ಯಮ ವರದಿ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಅತರ್ ಮಿನಾಲಾ, ನ್ಯಾಯಮೂರ್ತಿ ಆಮರ್ ಫಾರೂಕ್ ಮತ್ತು ನ್ಯಾಯಮೂರ್ತಿ ಮಿಯಾಂಗುಲ್ ಹಸನ್ ಔರಂಗಜೇಬ್ ಅವರನ್ನೊಳಗೊಂಡ ಐಎಚ್‌ಸಿ ಉನ್ನತ  ನ್ಯಾಯಪೀಠದ ಮುಂದೆ ಹಾಜರಾದ ಭಾರತೀಯ ಹೈಕಮಿಷನ್‌ನ ವಕೀಲ ಶಹನವಾಜ್ ನೂನ್ ಮಂಗಳವಾರ ಜಾಧವ್ ಪರ ವಕೀಲರ ನೇಮಕಕ್ಕೆ ಸಂಬಂಧಿಸಿದ ವಿಷಯವನ್ನು ವಿವರವಾಗಿ ಚರ್ಚಿಸಲಾಗಿದೆ ಎಂದು ಹೇಳಿದರು. ಈ ಕುರಿತಂತೆ ಅಹ್ಲುವಾಲಿಯಾ ಅವರು ನ್ಯಾಯಾಲಯದ ಮುಂದೆ ಭಾರತ ಸರ್ಕಾರದ ನಿಲುವನ್ನು ವಿವರಿಸಬಹುದು ಎಂದು ಡಾನ್ ನ್ಯೂಸ್ ವರದಿ ಮಾಡಿದೆ.

ನ್ಯಾಯಮೂರ್ತಿ ಮಿನಲ್ಲಾ ಐಸಿಜೆ ತೀರ್ಪನ್ನು ಜಾರಿಗೆ ತರಲು, "ನ್ಯಾಯಯುತ ವಿಚಾರಣೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯ" ಎಂದಿದ್ದು ಐಎಚ್‌ಸಿ ಭಾರತ ಸರ್ಕಾರದಿಂದ ಪ್ರತಿಕ್ರಿಯೆಗಾಗಿ ಕಾಯುತ್ತಿದೆ ಎಂದು ಹೇಳಿದರು. ರಾಜತಾಂತ್ರಿಕರು ನ್ಯಾಯಾಲಯಕ್ಕೆ ಹಾಜರಾಗಲು ಬಯಸಿದರೆ, "ನಾವು ಅವರನ್ನು ಯಾವಾಗಲೂ ಸ್ವಾಗತಿಸುತ್ತಾರೆ" ಎಂದು ಅವರು ಹೇಳಿದರು. ಅಟಾರ್ನಿ ಜನರಲ್ ಖಲೀದ್ ಜಾವೇದ್ ಖಾನ್ ಅವರು ನ್ಯಾಯಾಲಯಕ್ಕೆಭಾರತದ ಉಪ ಹೈಕಮಿಷನರ್ ಬರಬಹುದು ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಮೊದಲು ಸಲಹೆಗಾರರನ್ನು ತೊಡಗಿಸಬೇಕು. ಎಂದು ಸೂಚಿಸಿದ್ದಾರೆ.

ಗೂಢಚರ್ಯೆ ನಡೆಸಿದ ಆರೋಪದಡಿ ಶಿಕ್ಷೆಗೊಳಗಾದ ಇನ್ನೊಬ್ಬ ಭಾರತೀಯ ರಾಷ್ಟ್ರೀಯ ಇಸ್ಮಾಯಿಲ್ ತನ್ನ ಅವಧಿಯನ್ನು ಪೂರೈಸಿದ ನಂತರವೂ ಬಂಧನದಲ್ಲಿರುವ ಬಗ್ಗೆ ಭಾರತವು ಕಳವಳ ವ್ಯಕ್ತಪಡಿಸಿದೆ ಎಂದು ನೂನ್ ನ್ಯಾಯಾಲಯಕ್ಕೆತಿಳಿಸಿದ್ದಾಗಿ ವರದಿ ತಿಳಿಸಿದೆ.

ಗುಜರಾತ್‌ನ ಕಚ್ ಜಿಲ್ಲೆಯ ಇಂಡೋ-ಪಾಕಿಸ್ತಾನ ಗಡಿಯಿಂದ 50 ಕಿ.ಮೀ ದೂರದಲ್ಲಿರುವ ನಾನಾ ದಿನಾರಾ ಗ್ರಾಮದ ನಿವಾಸಿ ಇಸ್ಮಾಯಿಲ್ ಸಮ್ಮಾ (53) ದನಗಳನ್ನು ಮೇಯಿಸುವಾಗ ದಾರಿ ತಪ್ಪಿ ಪಾಕಿಸ್ತಾನದ ಕಡೆಗೆ ತೆರಳಿದ್ದರಿಂದ  2008 ರ ಆಗಸ್ಟ್‌ನಲ್ಲಿ ನಾಪತ್ತೆಯಾಗಿದ್ದ. ಪಾಕಿಸ್ತಾನದ ಅಧಿಕಾರಿಗಳು ಆತನನ್ನು ಬಂಧಿಸಿ, 2011 ರ ಅಕ್ಟೋಬರ್‌ನಲ್ಲಿ ಗೂಢಚರ್ಯೆ ಮಾಡಿದ್ದಾಗಿ ಆರೋಪಿಸಿ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದರು.

ಅಕ್ಟೋಬರ್‌ನಲ್ಲಿ ಪಾಕಿಸ್ತಾನದ ಸಂಸದೀಯ ಸಮಿತಿಯು ಜಾಧವ್ ಅವರ ಅಪರಾಧದ ಬಗ್ಗೆ ಪರಿಶೀಲನೆ ನಡೆಸುವ ಸರ್ಕಾರಿ ಮಸೂದೆಯನ್ನು ಅಂಗೀಕರಿಸಿತು, ಇದು ಅಂತರರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ನಿರ್ದೇಶನಗಳನ್ನು ಅನುಸರಿಸುತ್ತದೆ. ಐವತ್ತು ವರ್ಷದ ಮಾಜಿಭಾರತೀಯ ನೌಕಾಪಡೆಯ ಅಧಿಕಾರಿ ಜಾಧವ್‌ಗೆ 2017 ರ ಏಪ್ರಿಲ್‌ನಲ್ಲಿ ಗೂಢಚರ್ಯೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಜಾಧವ್‌ಗೆ ಕಾನ್ಸುಲರ್ ಪ್ರವೇಶವನ್ನು ನಿರಾಕರಿಸಿದ್ದಕ್ಕಾಗಿ ಮತ್ತು ಮಿಲಿಟರಿ ನ್ಯಾಯಾಲಯವು ಅವರಿಗೆ ನೀಡಿದ್ದ ಮರಣದಂಡನೆಯನ್ನು ಪ್ರಶ್ನಿಸಿ 2017 ರಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಐಸಿಜೆಯನ್ನು ಸಂಪರ್ಕಿಸಿತು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com