ಮೌಂಟ್ ಎವರೆಸ್ಟ್ ನ ಪರಿಷ್ಕೃತ ಎತ್ತರ 8848.86 ಮೀಟರ್: ನೇಪಾಳ ಮತ್ತು ಚೀನಾ ಘೋಷಣೆ!

ವಿಶ್ವದ ಅತೀ ದೊಡ್ಡ ಮತ್ತು ಎತ್ತರದ ಶಿಖರ ಎಂದೇ ಖ್ಯಾತಿಗಳಿಸಿರುವ ಮೌಂಟ್ ಎವರೆಸ್ಟ್ ನ ಎತ್ತರದ ಕುರಿತು ನೇಪಾಳ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ.
Mount Everest
Mount Everest
Updated on

ಕಠ್ಮಂಡು: ವಿಶ್ವದ ಅತೀ ದೊಡ್ಡ ಮತ್ತು ಎತ್ತರದ ಶಿಖರ ಎಂದೇ ಖ್ಯಾತಿಗಳಿಸಿರುವ ಮೌಂಟ್ ಎವರೆಸ್ಟ್ ನ ಎತ್ತರದ ಕುರಿತು ನೇಪಾಳ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ.

ಹೌದು...ವಿಶ್ವದ ಅತೀ ಎತ್ತರದ ಶಿಖರದ ನಿಜವಾದ ಎತ್ತರವನ್ನು ನೇಪಾಳ ಹಾಗೂ ಚೀನಾ ಘೋಷಣೆ ಮಾಡಿದ್ದು, ವಿಶ್ವದ ಅತೀ ಎತ್ತರದ ಶಿಖರ ಎಂದೇ ಖ್ಯಾತಿ ಗಳಿಸಿರುವ ಮೌಂಟ್ ಎವರೆಸ್ಟ್ ನ ಈಗನ ಎತ್ತರ 8848.86 ಮೀಟರ್ ಎಂದು ನೇಪಾಳ ಸರ್ಕಾರ ಘೋಷಣೆ ಮಾಡಿದೆ.  

2015ರಲ್ಲಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ನೇಪಾಳ ಭೂಕಂಪನದ ಬಳಿಕ ಮೌಂಟ್ ಎವರೆಸ್ಟ್ ನ ಎತ್ತರದಲ್ಲಿ ಬದಲಾವಣೆಯಾಗಿರಬಹುದು ಎಂದು ತಜ್ಞರು ಶಂಕಿಸಿದ್ದರು. ಇದೇ ಕಾರಣಕ್ಕೆ ನೇಪಾಳ ಸರ್ಕಾರ ವಿಶ್ವದ ಅತಿ ಎತ್ತರದ ಶಿಖರದ ಎತ್ತರವನ್ನು ಅಳೆಯುವ ಯೋಜನೆ  ಕೈಗೆತ್ತಿಕೊಂಡಿತ್ತು, ಪರ್ವತದ ಎತ್ತರವನ್ನು ಪುನಃ ಅಳೆಯಲು ನೇಪಾಳಿ ಅಧಿಕಾರಿಗಳು ಮತ್ತು ತಜ್ಞರನ್ನು ನಿಯೋಜಿಸುವಾಗ, ನೇಪಾಳ ಸರ್ಕಾರವು ತನ್ನ ದೇಶೀಯ ಪ್ರಯತ್ನಗಳಲ್ಲಿ ಚೀನಾದೊಂದಿಗೆ ಸಮನ್ವಯ ಸಾಧಿಸಿತು. 2019 ರಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ನೇಪಾಳ  ಭೇಟಿಯ ಸಂದರ್ಭದಲ್ಲಿ, ಉಭಯ ರಾಷ್ಟ್ರಗಳು ಜಂಟಿಯಾಗಿ ವಿಶ್ವದ ಅತಿ ಎತ್ತರದ ಶಿಖರದ ಎತ್ತರವನ್ನು ಅಳೆದು ಘೋಷಿಸುವ ಒಪ್ಪಂದಕ್ಕೆ ಸಹಿ ಹಾಕಿದವು.

ಅದರಂತೆ ಕಳೆದ ಕೆಲವು ವರ್ಷಗಳಿಗಿಂತ ಮೌಂಟ್ ಎವರೆಸ್ಟ್ ಎತ್ತರವನ್ನು ಅಳೆಯುವ ಕಾರ್ಯ ಸಾಗಿತ್ತು. ಇದೀಗ ಆ ಕಾರ್ಯ ಪೂರ್ಣಗೊಂಡಿದ್ದು ಶಿಖರದ ಎತ್ತರ 8848.86 ಮೀಟರ್ ಎಂದು ಗುರುತಿಸಲಾಗಿದೆ.

ಇನ್ನು 1954ರಲ್ಲಿ ಸರ್ವೆ ಆಫ್ ಇಂಡಿಯಾ ಈ ಶಿಖರವನ್ನು ಅಳೆದಿತ್ತು. ಅಂದು ಸರ್ವೇ ಆಫ್ ಇಂಡಿಯಾ ಘೋಷಣೆ ಮಾಡಿದ್ದ 8,848 ಮೀಟರ್ ಎತ್ತರವೇ ಮೌಂಟ್ ಎವರೆಸ್ಟ್ ನ ಅಂಗೀಕರಿಸಲ್ಪಟ್ಟ ಮತ್ತು ಗುರುತಿಸಲ್ಪಟ್ಟ ಎತ್ತರವಾಗಿತ್ತು. 66 ವರ್ಷಗಳ  ಬಳಿಕ ಮೌಂಟ್ ಎವರೆಸ್ಟ್ ನ ಎತ್ತರದಲ್ಲಿ 0.86 ಮೀಟರ್ ಹೆಚ್ಚಳ ಕಂಡುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com