ಅಮೆರಿಕ ಕೋರ್ಟ್ ನಲ್ಲಿ ಮೋದಿ, ಅಮಿತ್ ಶಾ ವಿರುದ್ಧ ದಾಖಲಾಗಿದ್ದ 100 ಮಿಲಿಯನ್ ಡಾಲರ್ ಮೊತ್ತದ ಕಾನೂನು ಪ್ರಕರಣ ವಜಾ!

ಅಮೆರಿಕ ಕೋರ್ಟ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ದಾಖಲಾಗಿದ್ದ 100 ಮೊತ್ತದ ಕಾನೂನು ಪ್ರಕರಣವನ್ನು ಕೋರ್ಟ್ ವಜಾಗೊಳಿಸಿದೆ.
ಮೋದಿ ಅಮಿತ್ ಶಾ
ಮೋದಿ ಅಮಿತ್ ಶಾ

ವಾಷಿಂಗ್ಟನ್: ಅಮೆರಿಕ ಕೋರ್ಟ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ದಾಖಲಾಗಿದ್ದ 100 ಮೊತ್ತದ ಕಾನೂನು ಪ್ರಕರಣವನ್ನು ಕೋರ್ಟ್ ವಜಾಗೊಳಿಸಿದೆ.

ಅರ್ಜಿ ಸಲ್ಲಿಕೆ ಮಾಡಿ ಕೋರ್ಟ್ ನಿಗದಿ ಪಡಿಸಿದ ಎರಡೂ ವಿಚಾರಣೆಗಳಿಗೂ ಅರ್ಜಿದಾರರು ಗೈರು ಹಾಜರಿಯಾದ ಹಿನ್ನಲೆಯಲ್ಲಿ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ. ಪ್ರಧಾನಿ ಮೋದಿ ಮತ್ತು ಟ್ರಂಪ್ ಅವರ ಹೌಡಿ ಮೋದಿ ಕಾರ್ಯಕ್ರಮಕ್ಕೂ ಕೆಲವೇ ದಿನಗಳ ಹಿಂದೆ ಅಂದರೆ ಸೆಪ್ಟೆಂಬರ್ 19 2019ರಂದು ಟೆಕ್ಸಾಸ್  ನಲ್ಲಿ ಈ ಅರ್ಜಿ ದಾಖಲಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಕುರಿತಾದ ಭಾರತೀಯ ಸಂಸತ್ತಿನ ನಿರ್ಧಾರವನ್ನು ಈ ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು. 

ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಅಧಿಕಾರವನ್ನು ರದ್ದು ಮಾಡಿದ್ದಲ್ಲದೇ ಜಮ್ಮು ಮತ್ತು ಕಾಶ್ಮೀರವನ್ನು ಇಬ್ಭಾಗ ಮಾಡಿ ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿಸಿದ ಕೇಂದ್ರ ಸರ್ಕಾರದ ನಡೆಯನ್ನು ಈ ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು. ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ, ಲೆಫ್ಟಿನೆಂಟ್ ಜೆನರಲ್ ಕನ್ವಾಲ್ ಜೀತ್ ಸಿಂಗ್ ಧಿಲ್ಲಾನ್ ಅವರಿಂದ 100 ಮಿಲಿಯನ್ ಅಮೆರಿಕ ಡಾಲರ್ ಪರಿಹಾರವನ್ನು ಕೋರಿ ಈ ಅರ್ಜಿಯನ್ನು ದಾಖಲಿಸಲಾಗಿತ್ತು. ಧಿಲ್ಲಾನ್  ಪ್ರಸ್ತುತ ಡೈರೆಕ್ಟರ್-ಜನರಲ್ ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿ ಮತ್ತು ಡಿಫೆನ್ಸ್ ಚೀಫ್ ಆಫ್ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಆಫ್ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಅಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಅರ್ಜಿಯ ವಿಚಾರಣೆ ನಡೆಸಿದ ಅಮೆರಿಕ ನ್ಯಾಯಾಲಯ, ಅರ್ಜಿ ಹಾಕಿದನ್ನು ಬಿಟ್ಟರೆ ಅರ್ಜಿದಾರರು ವಿಚಾರಣೆಗೆ ಹಾಜರಾಗಿಲ್ಲ. ಕಾಶ್ಮೀರ ಖಲಿಸ್ತಾನ್ ರೆಫರೆಂಡಮ್ ಫ್ರಂಟ್ ಈ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಲು ಏನೂ ಮಾಡಿಲ್ಲ, ಮತ್ತು ಈಗ ಎರಡು ನಿಗದಿತ ವಿಚಾರಣೆಯಲ್ಲೂ ಹಾಜರಾಗಿಲ್ಲ. ಹೀಗಾಗಿ  ಅರ್ಜಿಯನ್ನು ವಜಾಗೊಳಿಸುತ್ತಿದ್ದೇವೆ ಎಂದು ಯುಎಸ್ ಡಿಸ್ಟ್ರಿಕ್ಟ್ ಕೋರ್ಟ್ ದಕ್ಷಿಣ ಜಿಲ್ಲೆಯ ಟೆಕ್ಸಾಸ್ ನ್ಯಾಯಾಧೀಶ ಫ್ರಾನ್ಸಿಸ್ ಎಚ್ ಸ್ಟೇಸಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.  
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com