ಕೋವಿಡ್-19: ಸ್ವತಃ ಕೋವಿಡ್ ಲಸಿಕೆ ಪಡೆಯುವ ಮೂಲಕ ಇಸ್ರೇಲ್ ನಲ್ಲಿ ಲಸಿಕೆ ವಿತರಣೆಗೆ ಚಾಲನೆ ನೀಡಿದ ಪ್ರಧಾನಿ ನೇತನ್ಯಾಹು!

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದ ತತ್ತರಿಸಿ ಹೋಗಿರುವ ಇಸ್ರೇಲ್ ನಲ್ಲಿ ಇದೀಗ ಕೋವಿಡ್ ಲಸಿಕೆ ವಿತರಣಾ ಕಾರ್ಯ ಆರಂಭವಾಗಿದ್ದು, ಸ್ವತಃ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಲಸಿಕೆ ವಿತರಣಾ  ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಲಸಿಕೆ ಪಡೆದ ಇಸ್ರೇಲ್ ಪ್ರಧಾನಿ
ಲಸಿಕೆ ಪಡೆದ ಇಸ್ರೇಲ್ ಪ್ರಧಾನಿ

ಜೆರುಸಲೇಂ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದ ತತ್ತರಿಸಿ ಹೋಗಿರುವ ಇಸ್ರೇಲ್ ನಲ್ಲಿ ಇದೀಗ ಕೋವಿಡ್ ಲಸಿಕೆ ವಿತರಣಾ ಕಾರ್ಯ ಆರಂಭವಾಗಿದ್ದು, ಸ್ವತಃ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಲಸಿಕೆ ವಿತರಣಾ  ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಆ ಮೂಲಕ ಬೆಂಜಮಿನ್ ನೇತನ್ಯಹು ಕೋವಿಡ್ ಲಸಿಕೆ ಪಡೆದ ಮೊಟ್ಟ ಮೊದಲ ಇಸ್ರೇಲಿಯನ್ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ,  ರಮಾಟ್ ಗನ್ ನ ಶೆಬಾ ಮೆಡಿಕಲ್ ಸೆಂಟರ್ ನಲ್ಲಿ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನೇತನ್ಯಾಹು,  ಇಸ್ರೇಲಿಯನ್ನರ ಪಾಲಿಗೆ ಇದು ನಿಜಕ್ಕೂ ಅತ್ಯುತ್ತಮ ದಿನ. ಲಸಿಕೆ ಸಂಶೋಧನೆಗೆ ಶ್ರಮಿಸಿದ ಸಾವಿರಾರು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. 

ಇದೇ ವೇಳೆ ತಿಂಗಳ ಅಂತ್ಯದ ವೇಳೆಗೆ ಲಕ್ಷಾಂತರ ಡೋಸ್ ಲಸಿಕೆಗಳು ಇಸ್ರೇಲ್ ಗೆ ಆಗಮಿಸಲಿದ್ದು, ಎಲ್ಲಾ ಇಸ್ರೇಲಿಗರಿಗೆ ಲಸಿಕೆ ಹಾಕಲಾಗುತ್ತದೆ ಎಂದು ಹೇಳಿದರು. 'ಲಸಿಕೆ ಪಡೆಯುವ ಮೊದಲು ನಾನು ಆರೋಗ್ಯ ಸಚಿವ ಯೂಲಿ ಎಡೆಲ್ಸ್ಟೈನ್ ಅವರೊಂದಿಗೆ ಚರ್ಚೆ ನಡೆಸಿದ್ದು, ಈ ವೇಳೆ  ಸ್ವತಃ ಲಸಿಕೆ ಪಡೆಯುವ ಮೂಲಕ ಲಸಿಕೆ ಪಡೆಯಲು ನಿಮ್ಮನ್ನು ಪ್ರೋತ್ಸಾಹಿಸಲು ಕೇಳಿದ್ದೆ. ಅದರಂತೆ ನಾನೇ ಮೊದಲಿಗನಾಗಿ ಲಸಿಕೆ ಪಡೆದಿದ್ದೇನೆ. ನೀವು ಪಡೆಯಿರಿ ಎಂದು ಅವರು ಹೇಳಿದರು. 

ನೇತನ್ಯಾಹು ಬಳಿಕ ಆರೋಗ್ಯ ಸಚಿವ ಯೂಲಿ ಎಡೆಲ್ಸ್ಟೈನ್ ಅವರೂ ಕೂಡ ಲಸಿಕೆ ಪಡೆದರು. ಇಸ್ರೇಲ್ ನಲ್ಲಿ ಫಿಜರ್-ಬಯೋಎನ್‌ಟೆಕ್‌ ಲಸಿಕೆ ವಿತರಣೆ ಮಾಡಲಾಗುತ್ತಿದ್ದು.  ಅನುಮೋದಿತ ಲಸಿಕೆಯ ಸುಮಾರು 4 ಮಿಲಿಯನ್ ಡೋಸ್‌ಗಳ ಮೂಲಕ ಇಸ್ರೇಲಿ ಸರ್ಕಾರ ವ್ಯಾಕ್ಸಿನೇಷನ್  ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಇದಕ್ಕೂ ಮೊದಲು ಬ್ರಿಟನ್, ಅಮೆರಿಕ. ರಷ್ಯಾ ದೇಶಗಳು ಲಸಿಕೆ ವಿತರಣಾ ಕಾರ್ಯ ಆರಂಭಿಸಿದ್ದು, ಭಾರತದಲ್ಲಿಯೂ ಕೂಡ ಹಲವು ಬಗೆಯ ಲಸಿಕೆಗಳನ್ನು ಅಂತಿಮ ಪ್ರಯೋಗಕ್ಕೆ ಒಳಪಡಿಸಲಾಗುತ್ತಿದೆ. 

ಇಸ್ರೇಲ್  ನಲ್ಲಿ ಇದುವರೆಗೆ 3.72 ಲಕ್ಷ ಕೋವಿಡ್ -19 ಪ್ರಕರಣಗಳನ್ನು ವರದಿಯಾಗಿದ್ದು, ಕೋವಿಡ್ ನಿಂದಾಗಿ ಇಸ್ರೇಲ್ ನಲ್ಲಿ ಈ ವರೆಗೂ 3,070 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com