ಸಾರ್ವಜನಿಕವಾಗಿ ಫಿಜರ್ ಕೋವಿಡ್ ಲಸಿಕೆ ಪಡೆದ ಅಮೆರಿಕ ನಿಯೋಜಿತ ಅಧ್ಯಕ್ಷ ಜೋ ಬೈಡನ್

ಮಾರಕ ಕೊರೋನಾ ವೈರಸ್ ನಿಂದ ತತ್ತರಿಸಿ ಹೋಗಿರುವ ಅಮೆರಿಕದಲ್ಲಿ ಲಸಿಕೆ ವಿತರಣಾ ಕಾರ್ಯ ಆರಂಭವಾಗಿದ್ದು, ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರು ಸೋಮವಾರ ಅವರ ಮೊದಲ ಕೋವಿಡ್‌–19 ಲಸಿಕೆ ಹಾಕಿಸಿಕೊಂಡಿದ್ದಾರೆ. 
ಕೋವಿಡ್ ಲಸಿಕೆ
ಕೋವಿಡ್ ಲಸಿಕೆ

ವಾಷಿಂಗ್ಟನ್‌: ಮಾರಕ ಕೊರೋನಾ ವೈರಸ್ ನಿಂದ ತತ್ತರಿಸಿ ಹೋಗಿರುವ ಅಮೆರಿಕದಲ್ಲಿ ಲಸಿಕೆ ವಿತರಣಾ ಕಾರ್ಯ ಆರಂಭವಾಗಿದ್ದು, ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರು ಸೋಮವಾರ ಅವರ ಮೊದಲ ಕೋವಿಡ್‌–19 ಲಸಿಕೆ ಹಾಕಿಸಿಕೊಂಡಿದ್ದಾರೆ. 

ಲಸಿಕೆ ಸುರಕ್ಷತೆಯನ್ನು ಅಮೆರಿಕದ ನಾಗರಿಕರಿಗೆ ಸಾರುವ ನಿಟ್ಟಿನಲ್ಲಿ ಟಿವಿ ನೇರ ಪ್ರಸಾರದಲ್ಲಿ ಬೈಡನ್ ಲಸಿಕೆ ಹಾಕಿಸಿಕೊಂಡರು. ಕ್ರಿಸ್ಟಿಯಾನಾಕೇರ್‌ ಹಾಸ್ಪೆಟಲ್‌ನ ನರ್ಸ್‌ ಒಬ್ಬರು ಫಿಝರ್‌ ಮತ್ತು ಬಯೋಎನ್‌ಟೆಕ್‌ ಅಭಿವೃದ್ಧಿ ಪಡಿಸಿರುವ ಕೋವಿಡ್‌ ಲಸಿಕೆಯನ್ನು ಅವರಿಗೆ ನೀಡಿದರು.  ಲಸಿಕೆ ಪಡೆದ ಬಳಿಕ ಮಾತನಾಡಿದ ಬೈಡನ್, ಲಸಿಕೆ ಲಭ್ಯವಾಗುತ್ತಿದ್ದಂತೆ ಜನರು ಅದನ್ನು ಪಡೆಯಲು ಸಿದ್ಧರಿರಲಿ ಎಂಬ ಕಾರಣಕ್ಕಾಗಿ ನಾನು ಲಸಿಕೆ ಪಡೆದುಕೊಂಡಿದ್ದೇನೆ' ಎಂದು ಹೇಳಿದರು.

ಬೈಡನ್‌ ಮಾಸ್ಕ್‌ ಧರಿಸುವುದು ಹಾಗೂ ಅಂತರ ಕಾಯ್ದುಕೊಳ್ಳುವುದನ್ನು ಚುನಾವಣಾ ಪ್ರಚಾರ ದಿನಗಳಿಂದಲೂ ಅನುಸರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಉಪಾಧ್ಯಕ್ಷ ಮೈಕ್‌ ಪೆನ್ಸ್ ಸೇರಿದಂತೆ ಇತರೆ ಸಂಸದರು ಶುಕ್ರವಾರ ಶ್ವೇತ ಭವನದಲ್ಲಿ ನಡೆದ  ಕಾರ್ಯಕ್ರಮದಲ್ಲಿ ಕೋವಿಡ್‌ ಲಸಿಕೆ ಸ್ವೀಕರಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com