ದಕ್ಷಿಣ ಕೊರಿಯಾದಲ್ಲೂ ಕೋವಿಡ್ ಹೊಸ ರೂಪಾಂತರದ ಪ್ರಕರಣ ವರದಿ

ದಕ್ಷಿಣ ಕೊರಿಯಾ ದೇಶದಲ್ಲಿ ಹೊಸ ಸ್ವರೂಪದ ಕೊರೋನ ಸೋಂಕಿನ ಮೂರು ಪ್ರಕರಣ ದೃ ಡಪಟ್ಟಿದೆ ಎಂದು ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆ (ಕೆಡಿಸಿಎ) ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸಿಯೋಲ್: ದಕ್ಷಿಣ ಕೊರಿಯಾ ದೇಶದಲ್ಲಿ ಹೊಸ ಸ್ವರೂಪದ ಕೊರೋನ ಸೋಂಕಿನ ಮೂರು ಪ್ರಕರಣ ದೃಢಪಟ್ಟಿದೆ ಎಂದು ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆ (ಕೆಡಿಸಿಎ) ತಿಳಿಸಿದೆ.

ಮೂವರು ಇದೇ 22 ರಂದು ಯುನೈಟೆಡ್ ಕಿಂಗ್‌ಡಂನಿಂದ ಆಗಮಿಸಿದ್ದಾರೆ ಎಂದು ಕೆಡಿಸಿಎ ತಿಳಿಸಿದೆ. ಅವರು ಲಂಡನ್ನಲ್ಲಿ ವಾಸಿಸುವ ಕುಟುಂಬವಾಗಿ ದೇಶಕ್ಕೆ ಬಂದರು ಮತ್ತು ಪರೀಕ್ಷೆಗಳು ಹೊಸ ಮಾದರಿ ಸೋಂಕು ಇರುವಿಕೆಯನ್ನು ಖಚಿತಪಡಿಸಿದೆ. ಅವರೆಲ್ಲರೂ ಈಗ ಸಂಪರ್ಕತಡೆಯಲ್ಲಿದ್ದಾರೆ ಎಂದು ಕೆಡಿಸಿಎ ತಿಳಿಸಿದೆ.

ಕೊರೋನಾ ವೈರಸ್​ ಹೊಸ ರೂಪಾಂತರ ಮೂಲಕ ಕಾಣಿಸಿಕೊಳ್ಳುತ್ತಿದ್ದು, ಇದು ಸೂಪರ್​ ಸ್ಪ್ರೇಡರ್​ ಆಗಿದೆ. ಸೆಪ್ಟೆಂಬರ್​ನಲ್ಲಿ ಮೊದಲ ಬಾರಿಗೆ ಈ ಹೊಸ ಸ್ವರೂಪದ ಕೊರೋನಾ ವೈರಸ್​ ಮೊದಲ ಬಾರಿ ಪತ್ತೆಯಾಗಿತ್ತು. ಇದು ಶೀಘ್ರವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಯುನೈಡೆಡ್​​ ಕಿಂಗ್​ಡಮ್​ನ ಲಂಡನ್​ ಮತ್ತಿತ್ತರ ಭಾಗಗಳಲ್ಲಿ ಕಂಡು ಬರುತ್ತಿದೆ. ಈ ಹೊಸ ವೈರಸ್​ನಿಂದ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಹೊಸ ವರ್ಷದ ಸಂಭ್ರಮಾ​ಚರಣೆ ಮೇಲೂ ಕರಿನೆರಳು ಬೀರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com