ಕೊರೋನಾವೈರಸ್ ಭೀತಿ: ಜಪಾನ್ ಹಡಗಿನಲ್ಲಿದ್ದ ಇಬ್ಬರು ಭಾರತೀಯರಲ್ಲಿ ಸೋಂಕು ಪತ್ತೆ

ಓರ್ವ ಕನ್ನಡಿಗ ಸೇರಿ 138 ಭಾರತೀಯರು ಹಾಗೂ 3700 ಪ್ರವಾಸಿಗರು ಇರುವ ಜಪಾನ್'ನ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಮತ್ತೆ 39 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಪೈಕಿ ಇಬ್ಬರು ಭಾರತೀಯರಿಗೂ ಸೋಂಕು ತಗುಲಿದೆ ಎಂದು ವರದಿಗಳು ತಿಳಿಸಿವೆ. ಇದರೊಂದಿಗೆ ಹಡಗಿನಲ್ಲಿ ಸೋಂಕು ಪೀಡಿತರ ಸಂಖ್ಯೆ 174ಕ್ಕೆ ಏರಿಕೆಯಾಗಿದೆ. 
ಭಾರತೀಯರಿರುವ ಹಡಗು
ಭಾರತೀಯರಿರುವ ಹಡಗು

ಕನ್ನಡಿಗನಿರುವ ಜಪಾನ್ ಹಗಡಿನಲ್ಲಿ ಸೋಂಕು ತಗುಲಿದವರ ಸಂಖ್ಯೆ 174ಕ್ಕೆ ಏರಿಕೆ


ಯೋಕೋಹಾಮಾ: ಓರ್ವ ಕನ್ನಡಿಗ ಸೇರಿ 138 ಭಾರತೀಯರು ಹಾಗೂ 3700 ಪ್ರವಾಸಿಗರು ಇರುವ ಜಪಾನ್'ನ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಮತ್ತೆ 39 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಪೈಕಿ ಇಬ್ಬರು ಭಾರತೀಯರಿಗೂ ಸೋಂಕು ತಗುಲಿದೆ ಎಂದು ವರದಿಗಳು ತಿಳಿಸಿವೆ. ಇದರೊಂದಿಗೆ ಹಡಗಿನಲ್ಲಿ ಸೋಂಕು ಪೀಡಿತರ ಸಂಖ್ಯೆ 174ಕ್ಕೆ ಏರಿಕೆಯಾಗಿದೆ. 

ಜಪಾನ್ ನ ಪ್ರವಾಸಿ ಹಗಡಿನಲ್ಲಿ 132 ಭಾರತೀಯ ಸಿಬ್ಬಂದಿ ಮತ್ತು 6 ಭಾರತೀಯ ಪ್ರವಾಸಿಗರು ಇದ್ದಾರೆ. ಈ ಪೈಕಿ ಯಾವ ಭಾರತೀಯ ಸಿಬಿಬಂದಿಗೆ ಸೋಂಕು ತಗುಲಿದೆ ಎಂಬುದರ ಮಾಹಿತಿ ಬಹಿರಂಗಪಡಿಸಲಾಗಿಲ್ಲ. ಈ ನಡುವೆ ಹಡಗಿನಲ್ಲಿ ಕೊರೋನಾಕ್ಕೆ ತುತ್ತಾಗದ ಭಾರತೀಯರ ರಕ್ಷಣೆ ನಿಟ್ಟಿನಲ್ಲಿ ಭಾರತದ ದೂತವಾಸ ಜಪಾನ್ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದೆ. 

ಹಡಗಿನಲ್ಲಿರುವ ಪ್ರವಾಸಿಗರಿಂದ ಕೊರೋನಾ ಹಬ್ಬುವ ಭೀತಿ ಇರುವ ಹಿನ್ನೆಲೆಯಲ್ಲಿ ಪೆ.19ರವರೆಗೂ ಹಡಗನ್ನು ಪ್ರತ್ಯೇಕ ಸ್ಥಳದಲ್ಲಿ ಇರಿಸಲಾಗಿದೆ. 

ಹಡಗಿನ ಒಳಗಿನಿಂದ ಯಾರಿಗೂ ಹೊರಗೆ ಬರಲು ಬಿಡಲಾಗಿಲ್ಲ. ಹಡಗಿನಲ್ಲಿ ಕೂಡ ಯಾರಿಗೂ ಅವಶ್ಯಕೆ ಇಲ್ಲದತ ಹೊರತಾಗಿ ಕೋಣೆಯಿಂದ ಹೊರಬರದಂತೆ ಸೂಚಿಸಲಾಗಿದೆ. ಸೋಂಕು ಪೀಡಿತರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com