ಯುದ್ಧ ಆರಂಭಿಸಿದ ಇರಾನ್?: ಅಮೆರಿಕಾ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ

ಸೇನಾಧಿಕಾರಿ ಖಾಸಿಂ ಸೊಲೈಮಾನಿ ಹತ್ಯೆ ಬಳಿ ಇರಾನ್ ಹಾಗೂ ಅಮೆರಿಕಾ ನಡುವಿನ ಸಂಬಂಧ ತೀವ್ರವಾಗಿ ಹದಗಟ್ಟಿದ್ದು, ಎರಡು ರಾಷ್ಟ್ರಗಳ ಪರಿಸ್ಥಿತಿಯಿಂದಾಗಿ ವಿಶ್ವದಲ್ಲಿ 3ನೇ ಮಹಾಯುದ್ಧ ಸಂಭವಿಸುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿರುವಾಗಲೇ ಇರಾಕ್ ನಲ್ಲಿನ ಅಮೆರಿಕಾ ವಾಯುನೆಲೆಘಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ...
ಯುದ್ಧ ಆರಂಭಿಸಿದ ಇರಾನ್: ಇರಾಕ್ ನಲ್ಲಿ ಅಮೆರಿಕಾ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ
ಯುದ್ಧ ಆರಂಭಿಸಿದ ಇರಾನ್: ಇರಾಕ್ ನಲ್ಲಿ ಅಮೆರಿಕಾ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ

ಬಾಗ್ದಾದ್: ಸೇನಾಧಿಕಾರಿ ಖಾಸಿಂ ಸೊಲೈಮಾನಿ ಹತ್ಯೆ ಬಳಿ ಇರಾನ್ ಹಾಗೂ ಅಮೆರಿಕಾ ನಡುವಿನ ಸಂಬಂಧ ತೀವ್ರವಾಗಿ ಹದಗಟ್ಟಿದ್ದು, ಎರಡು ರಾಷ್ಟ್ರಗಳ ಪರಿಸ್ಥಿತಿಯಿಂದಾಗಿ ವಿಶ್ವದಲ್ಲಿ 3ನೇ ಮಹಾಯುದ್ಧ ಸಂಭವಿಸುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿರುವಾಗಲೇ ಇರಾಕ್ ನಲ್ಲಿನ ಅಮೆರಿಕಾ ವಾಯುನೆಲೆಘಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಇರಾನ್ ರಾಷ್ಟ್ರ ಈ ವರ್ತನೆ ಅಮೆರಿಕಾದ ಸಿಟ್ಟನ್ನು ನೆತ್ತಿಗೇರುವಂತೆ ಮಾಡಿದೆ. 

ಜನವರಿ 7ರ ಸಂಜೆ 5.30ರ ಸುಮಾರಿಗೆ ಇರಾನ್ 12ಕ್ಕೂ ಹೆಚ್ಚು ಮಿಸೈಲ್ ಗಳನ್ನು ಹಾರಿಸಿದೆ. ಇರಾಕ್ ನಲ್ಲಿರುವ ಅಮೆರಿಕಾ ಸೇನಾ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ. 

ಕ್ಷಿಪಣಿಗಳು ಇರಾಕ್ ನೆಲೆಯಿಂದ ಹಾರಿ ಬಂದಿರುವುದು ಬಹುತೇಕ ಖಚಿತವಾಗಿದ್ದು, ಇರಾಕ್ ಹಾಗೂ ಅಮೆರಿಕಾ ಜಂಟಿಯಾಗಿ ಬಳಕೆ ಮಾಡುವ ವಾಯುನೆಲೆಯನ್ನು ಇರಾನ್ ಗುರಿಯಾಗಿಸಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಾಳಿಯಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ, ಗಾಯಗೊಂಡಿದ್ದಾರೆ ಹಾಗೂ ನಷ್ಟವಾಗಿರುವ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ. 

ಇರಾನ್ ಮೇಲೆ ಅಮೆರಿಕಾ ದಾಳಿ ನಡೆಸಿದ್ದಾದರೂ ಏಕೆ?
ಇರಾಕ್ ರಾಜಧಾನಿ ಬಾದ್ದಾದ್ ನಲ್ಲಿನ ಅಮೆರಿಕಾದ ರಾಯಭಾರ ಕಚೇರಿ ಮೇಲೆ ನಡೆದ ದಾಳಿ ಪ್ರತೀಕಾರವಾಗಿ ಹಾಗೂ ಮತ್ತಷ್ಟು ಅಮೆರಿಕನ್ನರನ್ನು ಕೊಲ್ಲುವ ಸಂಚಿನ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಿರುವುದಾಗಿ ಅಮೆರಿಕಾದ ಅಧ್ಯಕ್ಷ ಟ್ರಂಪ್ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ. ಕೆಲವೇ ದಿನಘಳ ಹಿಂದೆ ಬಾಗ್ದಾದ್ ನಲ್ಲಿರುವ ಅಮೆರಿಕಾದ ರಾಯಭಾರ ಕಚೇರಿಯೊಳಕ್ಕೆ ಪ್ರತಿಭಟನಾಕಾರರು ನುಗ್ಗಲು ಯತ್ನಿಸಿದ್ದರು. 

ಅಮೆರಿಕಾದ ದಾಳಿಗೆ ಇರಾನ್ ಬೆಂಬಲಿತ ಶಿಯಾ ಬಂಡುಕೋರ ಸಂಘಟನೆ ಕತೈಬ್ ಹಿಜ್ಲುಬ್ಲ್ಲಾದ 25ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದಿದ್ದ ಪ್ರತಿಭಟನಾಕಾರರು ರಾಯಭಾರ ಕಚೇರಿಯ ಕಾಂಪೌಂಡ್ ಗೆ ಬೆಂಕಿ ಇಟ್ಟಿದ್ದರು. ಅಲ್ಲದೆ, ಇರಾಕ್ ನಲ್ಲಿರುವ ಅಮೆರಿಕಾ ಪಡೆಗಳ ಮೇಲೆ ಕಳೆದ ಹಲವು ತಿಂಗಳಿಂದ ದಾಳಿ ನಡೆಸಿದ್ದವು. ಹಾಗಾಗಿ ಅಮೆರಿಕಾ ಪ್ರತೀಕಾರ ತೆಗೆದುಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com