
ಬೀಜಿಂಗ್: ಟಿಬೆಟ್ ಮೇಲಿನ ಅತಿರೇಕದ ವರ್ತನೆಯೊಂದಿಗೆ ಅಮೆರಿಕಾದ ಸಿಬ್ಬಂದಿ ಮೇಲೆ ಚೀನಾ ವೀಸಾ ನಿರ್ಬಂಧವನ್ನು ಹೇರಿದೆ. 2018ರ ಕಾಯ್ದೆಯೊಂದರ ಅಡಿಯಲ್ಲಿ ಚೀನಾದ ಕೆಲ ಅಧಿಕಾರಿಗಳಿಗೆ ವೀಸಾ ನಿರ್ಬಂಧವನ್ನು ಅಮೆರಿಕಾ ಸೆಕ್ರೆಟರಿ ಆಫ್ ಸ್ಟೇಟ್ ಮೈಕ್ ಪಾಂಪಿಯೊ ಹೇರಿದ ಬೆನ್ನಲ್ಲೇ, ಚೀನಾ ಈ ಕ್ರಮ ಕೈಗೊಂಡಿದೆ.
ಅಮೆರಿಕದಿಂದ ತಪ್ಪು ನಿರ್ಧಾರಗಳಿಗೆ ಪ್ರತಿಯಾಗಿ ಆ ದೇಶದ ಸಿಬ್ಬಂದಿ ಮೇಲೆ ವೀಸಾ ನಿರ್ಬಂಧವನ್ನು ವಿಧಿಸುವ ನಿರ್ಧಾರವನ್ನು ಚೀನಾ ಕೈಗೊಂಡಿದೆ. ಟಿಬೆಟ್ ವಿಚಾರದಲ್ಲಿ ಕೆಟ್ಟದ್ದಾಗಿ ಅಮೆರಿಕ ವರ್ತಿಸುತ್ತಿದೆ ಎಂದು ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಜೋ ಲಿಜಿಯಾನ್ ಹೇಳಿಕೆಯನ್ನು ಉಲ್ಲೇಖಿಸಿ ಸ್ಪೂಟಿಕ್ ವರದಿ ಮಾಡಿದೆ.
ಇದಕ್ಕೂ ಮುನ್ನ ಟಿಬೆಟ್ ಗೆ ವಿದೇಶಿಯರ ಭೇಟಿಯನ್ನು ನಿರ್ಬಂಧಿಸಿದ ಚೀನಾ ಸರ್ಕಾರ ಹಾಗೂ ಕಮ್ಯೂನಿಸ್ಟ್ ಪಕ್ಷದ ಅಧಿಕಾರಿಗಳಿಗೆ ನಾನು ಇಂದು ವೀಸಾ ನಿರ್ಬಂಧವನ್ನು ವಿಧಿಸಿದ್ದೇನೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಟ್ವೀಟ್ ಮಾಡಿದ್ದರು.
Advertisement