ಸಿಎಂ ಯೋಗಿ ಹೇಳಿಕೆಯಿಂದ ನೇಪಾಳ ಸಾರ್ವಭೌಮತೆಗೆ ಧಕ್ಕೆ; ಗಡಿ ವಿಚಾರದಲ್ಲಿ ಭಾರತದಿಂದ ಮೋಸವಾಗಿದೆ: ಒಲಿ

ಗಡಿ ವಿಚಾರದಲ್ಲಿ ಭಾರತದಿಂದ ನೇಪಾಳಕ್ಕೆ ಮೋಸವಾಗಿದೆ ಎಂದು ಪ್ರಧಾನಿ ಕೆಪಿ ಶರ್ಮಾ ಒಲಿ ಸಂಸತ್ತಿನಲ್ಲಿ ಹೇಳಿದ್ದಾರೆ. 
ಆದಿತ್ಯನಾಥ-ಕೆಪಿ ಶರ್ಮಾ ಒಲಿ
ಆದಿತ್ಯನಾಥ-ಕೆಪಿ ಶರ್ಮಾ ಒಲಿ

ಕಾಠ್ಮಂಡು: ಗಡಿ ವಿಚಾರದಲ್ಲಿ ಭಾರತದಿಂದ ನೇಪಾಳಕ್ಕೆ ಮೋಸವಾಗಿದೆ ಎಂದು ಪ್ರಧಾನಿ ಕೆಪಿ ಶರ್ಮಾ ಒಲಿ ಸಂಸತ್ತಿನಲ್ಲಿ ಹೇಳಿದ್ದಾರೆ. 

ಸುಳ್ಳು ಕಾಳಿ ನದಿಯನ್ನು ತೋರಿಸಿ ಭಾರತವು ನೇಪಾಳಕ್ಕೆ ಮೋಸ ಮಾಡಿದೆ. ನಮಗೆ ಸೇರಿದ ಭೂಪ್ರದೇಶಗಳನ್ನು ತನ್ನದೆಂದು ವಾದಿಸುತ್ತಿದೆ ಎಂದು ಕೆಪಿ ಶರ್ಮಾ ಒಲಿ ಹೇಳಿದ್ದಾರೆ. 

ಭಾರತವು ಅಕ್ರಮವಾಗಿ ಕಾಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರಾ ಪ್ರದೇಶಗಳನ್ನು ಕಬಳಿಸಿ ತನ್ನ ಭೂಪಟಗಳಲ್ಲಿ ತೋರಿಸುತ್ತಿದೆ. ಆದರೆ ಮತ್ತೆ ನಾವು ನಮ್ಮ ಪ್ರದೇಶಗಳನ್ನು ವಶಕ್ಕೆ ಪಡೆದುಕೊಳ್ಳಲು ಕಟಿಬದ್ಧರಾಗಿದ್ದೇವೆ ಎಂದು ಒಲಿ ಹೇಳಿದ್ದಾರೆ. 

ಇದೇ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಟಿಬೆಟ್ ಮಾಡಿದ ತಪ್ಪನ್ನು ನೇಪಾಳ ಮಾಡಬಾರದು ಎಂಬ ಹೇಳಿಕೆಯನ್ನು ಪ್ರಸ್ತಾಪಿಸಿದ ಒಲಿ ಈ ಹೇಳಿಕೆಯಿಂದ ನೇಪಾಳದ ಸಾರ್ವಭೌಮತೆಗೆ ಧಕ್ಕೆಯಾಗಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com