ಭಯೋತ್ಪಾದನೆ ನಿಗ್ರಹ ನಮ್ಮ ಪ್ರಮುಖ ಆದ್ಯತೆ: ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ

ಭಯೋತ್ಪಾದನೆ ನಿಗ್ರಹ ನಮ್ಮ ಪ್ರಮುಖ ಆದ್ಯತೆಯಾಗಿದ್ದು, ಹಲವು ದಶಕಗಳಿಂದ ಗಡಿ ಭಾಗದಲ್ಲಿ ಭಯೋತ್ಪಾದನೆ ಸಮಸ್ಯೆಯಿಂದ ನಾವು ನಲುಗಿ ಹೋಗಿದ್ದೇವೆ ಎಂದು ವಿಶ್ವ ಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ಟಿ ಎಸ್ ತಿರುಮೂರ್ತಿ ಹೇಳಿದ್ದಾರೆ.
ವಿಶ್ವ ಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ಟಿ ಎಸ್ ತಿರುಮೂರ್ತಿ
ವಿಶ್ವ ಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ಟಿ ಎಸ್ ತಿರುಮೂರ್ತಿ
Updated on

ನ್ಯೂಯಾರ್ಕ್: ಭಯೋತ್ಪಾದನೆ ನಿಗ್ರಹ ನಮ್ಮ ಪ್ರಮುಖ ಆದ್ಯತೆಯಾಗಿದ್ದು, ಹಲವು ದಶಕಗಳಿಂದ ಗಡಿ ಭಾಗದಲ್ಲಿ ಭಯೋತ್ಪಾದನೆ ಸಮಸ್ಯೆಯಿಂದ ನಾವು ನಲುಗಿ ಹೋಗಿದ್ದೇವೆ ಎಂದು ವಿಶ್ವ ಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ಟಿ ಎಸ್ ತಿರುಮೂರ್ತಿ ಹೇಳಿದ್ದಾರೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಇನ್ನೆರಡು ವರ್ಷಗಳವರೆಗೆ ಶಾಶ್ವತ ಅಲ್ಲದ ಸದಸ್ಯ ರಾಷ್ಟ್ರ ಸ್ಥಾನಮಾನ ಸಿಕ್ಕಿರುವ ಬಗ್ಗೆ ಎಎನ್ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ ಅವರು, 2021ನೇ ಜನವರಿ 1ರಂದು ನಾವು ಭದ್ರತಾ ಮಂಡಳಿಯನ್ನು ಸೇರಲಿದ್ದೇವೆ. ಇದು ಎರಡು ವರ್ಷಗಳ ಅವಧಿಯ ಸದಸ್ಯತ್ವ. ನಮ್ಮ ತಂಡವನ್ನು ಸಿದ್ದಗೊಳಿಸುವ ಪ್ರಕ್ರಿಯೆಯಲ್ಲಿ ನಾವು ಸಿದ್ದರಾಗಿದ್ದು ಭಾರತದ ಶಾಶ್ವತ ಆಯೋಗದ ಜೊತೆ ಕೈಜೋಡಿಸಿ ಕೆಲಸ ಮಾಡಲಿದೆ ಎಂದು ತಿಳಿಸಿದರು.

ನಿನ್ನೆಯ ಚುನಾವಣೆ ಪ್ರಕ್ರಿಯೆಯಲ್ಲಿ ಭಾರತಕ್ಕೆ ಅಷ್ಟೊಂದು ಅಭೂತಪೂರ್ವ ಬೆಂಬಲ ಸಿಕ್ಕಿದೆ ಎಂದರೆ ಪ್ರಧಾನಿ ಮೋದಿಯವರ ಜಾಗತಿಕ ಮಟ್ಟದ ಪಾತ್ರವನ್ನು ಸೂಚಿಸುತ್ತದೆ. ಅವರು ಗಡಿಯಾಚೆ ರಾಷ್ಟ್ರಗಳೊಂದಿಗೆ ಬೆಳೆಸಿಕೊಂಡ ಸ್ನೇಹ ಭಾತೃತ್ವ, ಸಂಬಂಧ ಸ್ಪಷ್ಟವಾಗಿ ವಿಶ್ವಸಂಸ್ಥೆಯಲ್ಲಿ ಕಂಡುಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com