

ರೋಮ್: ಪ್ರವಾಸಿಗರ ಸ್ವರ್ಗ ಇಟಲಿಯಲ್ಲಿ ಮತ್ತೆ ಕೊರೋನಾ ವೈರಸ್ ಗೆ 50 ಮಂದಿ ಬಲಿಯಾಗಿದ್ದು, ಆ ಮೂಲಕ ಸಾವಿನ ಸಂಖ್ಯೆ 233 ಕ್ಕೆ ಏರಿಕೆಯಾಗಿದೆ.
ಶುಕ್ರವಾರ 49 ಮಂದಿಯ ಬಲಿ ಪಡೆದಿದ್ದ ಕೊರೋನಾ ಸೋಂಕು ಶನಿವಾರ 50 ಮಂದಿಯನ್ನು ಬಲಿ ಪಡೆದಿದೆ ಎಂದು ಇಟಲಿ ಆರೋಗ್ಯ ಪ್ರಾಧಿಕಾರ ಮಾಹಿತಿ ನೀಡಿದೆ. ಕೊರೋನ ಹರಡದಂತೆ ವ್ಯಾಪಕ ನಿರ್ಭಂದ ಕ್ರಮಕ್ಕೆ ಮುಂದಾಗಿದ್ದು, ಸೋಂಕಿನ ಪರಿಣಾಮ ಈವರೆಗೆ ಮೃತರ ಸಂಖ್ಯೆ 233 ಕ್ಕೆ ಏರಿಕೆಯಾಗಿದೆ. ದೇಶ ಅದೂ ಒಂದೇ ದಿನದಲ್ಲಿ 1,247 ಸೋಂಕು ಕಾಣಿಸಿಕೊಂಡಿದ್ದು ಒಟ್ಟು ಸೋಂಕು ಪೀಡಿತರ ಸಂಖ್ಯೆ ಇದೀಗ 5,883ಕ್ಕೆ ಏರಿಕೆಯಾಗಿದೆ.