ಚೀನಾ: ಕೊರೋನಾ ಶಂಕಿತರನ್ನು ಪ್ರತ್ಯೇಕವಾಗಿ ಇಟ್ಟಿದ್ದ ಹೋಟೆಲ್ ಕಟ್ಟಡ ಕುಸಿತ, ನಾಲ್ವರು ದುರ್ಮರಣ

ಈಶಾನ್ಯ ಚೀನಾದ ಫುಜಿಯನ್ ಪ್ರಾಂತ್ಯದಲ್ಲಿ ಕೊರೋನಾ ವೈರಸ್ ಶಂಕಿತರನ್ನು ಪ್ರತ್ಯೇಕವಾಗಿ ಇಡಲಾಗಿದ್ದ ಹೋಟೆಲ್ ಕಟ್ಟಡ ಕುಸಿದು ನಾಲ್ಕು ಜನರು ಮೃತಪಟ್ಟಿದ್ದಾರೆ. ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿದ್ದ 42 ಜನರನ್ನು ಹೊರಗೆ ತರಲಾಗಿದೆ ಎಂದು ಅಧಿಕೃತ ಮಾಧ್ಯಮಗಳು ವರದಿ ಮಾಡಿವೆ.
ರಕ್ಷಣಾ ಕಾರ್ಯಾಚರಣೆ ಚಿತ್ರ
ರಕ್ಷಣಾ ಕಾರ್ಯಾಚರಣೆ ಚಿತ್ರ

ಬೀಜಿಂಗ್: ಈಶಾನ್ಯ ಚೀನಾದ ಫುಜಿಯನ್ ಪ್ರಾಂತ್ಯದಲ್ಲಿ ಕೊರೋನಾ ವೈರಸ್ ಶಂಕಿತರನ್ನು ಪ್ರತ್ಯೇಕವಾಗಿ ಇಡಲಾಗಿದ್ದ ಹೋಟೆಲ್ ಕಟ್ಟಡ ಕುಸಿದು ನಾಲ್ಕು ಜನರು ಮೃತಪಟ್ಟಿದ್ದಾರೆ. ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿದ್ದ 42 ಜನರನ್ನು ಹೊರಗೆ ತರಲಾಗಿದೆ ಎಂದು ಅಧಿಕೃತ ಮಾಧ್ಯಮಗಳು ವರದಿ ಮಾಡಿವೆ.

ಕ್ವಾನ್ಜೌ ನಗರದ ಲಿಚೆಂಗ್ ನಗರದ  ಕ್ಸಿನ್‌ಜಿಯಾ ಹೋಟೆಲ್ ಕುಸಿದು ಬಿದ್ದಿದ್ದು ಅದರಲ್ಲಿ  ಸುಮಾರು 71 ಜನರು ಸಿಲುಕಿದ್ದರು ಎನ್ನಲಾಗಿದೆ. ಕೊರೋನಾ ವೈರಸ್  ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಶಂಕಿತರನ್ನು ಇಲ್ಲಿ ಪ್ರತ್ಯೇಕವಾಗಿ ಇಡುವ ಮೂಲಕ ಅವರ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುತಿತ್ತು. 

ರಕ್ಷಣಾ ಕಾರ್ಯಾಚರಣೆ ವೇಳೆಯಲ್ಲಿ 2 ವರ್ಷದ ಬಾಲಕ ಹಾಗೂ ಆತನ ಪೋಷಕರನ್ನು ಅವಶೇಷಗಳಿಂದ ಹೊರಗೆ ತರಲಾಗಿದ್ದು,ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. 

ಸುದ್ದಿ ತಿಳಿದ ಕೂಡಲೇ ಸುಮಾರು 200 ಕ್ಕೂ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ವುಹಾನ್ ನಲ್ಲಿ ಕಾಣಿಸಿಕೊಂಡ ಮಾರಣಾಂತಿಕ ಕೊರೋನಾ ವೈರಸ್ ನಿಂದಾಗಿ ಈವರೆಗೂ ಚೀನಾದಲ್ಲಿ ಮೃತಪಟ್ಟರ ಸಂಖ್ಯೆ 3 ಸಾವಿರಕ್ಕೆ ಏರಿಕೆ ಆಗಿದೆ. 

ಚೀನಾ ಮಾತ್ರವಲ್ಲದೇ  ಇತರೆಡೆ ಕೊರೋನಾ ವೈರಸ್ ನಿಂದ 3400 ಜನರು ಮೃತಪಟ್ಟಿದ್ದು,101, 000 ಜನರಲ್ಲಿ ಸೋಂಕು ಪತ್ತೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com