ಕೊರೋನಾ ಪೀಡಿತ 101 ವರ್ಷದ ವೃದ್ಧ ಸಂಪೂರ್ಣ ಗುಣಮುಖ...!
ರೋಮ್: ಚೀನಾ ಬಳಿಕ ಕೊರೋನಾ ವೈರಸ್ ಪೀಡಿತ ರಾಷ್ಟ್ರವೆಂದು ಹೇಳಲಾಗುತ್ತಿರುವ ಇಟಲಿ ರಿಮಿನಿ ಎಂಬ ನಗರದಲ್ಲಿ ಸೋಂಕು ಪೀಡಿದ 101 ವರ್ಷದ ವೃದ್ಧರೊಬ್ಬರು ವೈರಸ್ ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಈ ಕುರಿತು ರಿಮಿನಿ ನಗರದ ಉಪ ಮೇಯರ್ ಗ್ಲೋರಿಯಾ ಲಿಸಿಯವರು ಮಾಹಿತಿ ನೀಡಿದ್ದು, ಮಿ.ಪಿಯವರು 1919ರಲ್ಲಿ ಜನಿಸಿದ್ದು, ಸೋಂಕು ಹಿನ್ನೆಲೆಯಲ್ಲಿ ರಿಮಿನಿ ಆಸ್ಪತ್ರೆಗೆ ದಾಖಲಾಗಿದ್ದರು. ಮಿ.ಪಿ ಗುಣಮುಖರಾದ ಬಳಿಕ ಆಸ್ಪತ್ರೆಯಲ್ಲಿರುವ ಪ್ರತೀಯೊಬ್ಬರೂ ಅವರ ಕುರಿತು ಮಾತನಾಡುತ್ತಿದ್ದಾರೆಂದು ಹೇಳಿದ್ದಾರೆ.
ಇದೀಗ ಆಸ್ಪತ್ರೆಯಲ್ಲಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಹಲವರಲ್ಲಿ ಈ ಪ್ರಕರಣ ಆತ್ಮವಿಶ್ವಾಸ ಮೂಡಿಸಿದೆ. ಮಿ.ಪಿಯವರು 100ವರ್ಷದ ವಯೋವೃದ್ಧರಾಗಿದ್ದಾರೆಂದು ತಿಳಿಸಿದ್ದಾರೆ.
ಪ್ರತೀನಿತ್ಯ ನಾವು ದುಃಖ ತರಿಸುವ ಸುದ್ದಿಗಳನ್ನೇ ನೋಡುತ್ತಿದ್ದೇವೆ. ವೈರಸ್'ಗೆ ವಯಸ್ಸಾದವರೇ ಹೆಚ್ಚು ಬಲಿಯಾಗುತ್ತಿದ್ದಾರೆ. ಆದರೆ, ಮಿಸ್ಟರ್ ಪಿಯವರು 101 ವರ್ಷಗಳ ವಯೋವೃದ್ಧರಾಗಿದ್ದರೂ, ಸೋಂಕಿನಿಂದ ಗುಣಮುಖರಾಗಿರುವುದು, ಇತರರ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ