ಬಿಡೆನ್ ಅಡಳಿತದಲ್ಲಿ ಎಚ್-1ಬಿ ವೀಸಾ ನಿರ್ಬಂಧ, ಹಸಿರು ಕಾರ್ಡ್ ನಿಯಮ ಬದಲಾವಣೆ ಸಾಧ್ಯತೆ 

 ಭಾರತೀಯ ಮೂಲದ ಮಹಿಳೆ ಉಪಾಧ್ಯಕ್ಷರಾಗಿ ಇದೇ ಮೊದಲ ಬಾರಿಗೆ ಶ್ವೇತಭವನಕ್ಕೆ ಹೆಜ್ಜೆ ಇಡುವುದರ ಹೊರತಾಗಿಯೂ ಅನೇಕ ಕಾರಣಗಳಿಂದಾಗಿ ಬಿಡೆನ್- ಹ್ಯಾರಿಸ್ ಆಯ್ಕೆ ಭಾರತೀಯ ವೃತ್ತಿಪರರಿಗೆ ಒಳ್ಳೆಯ ಸುದ್ದಿಯಾಗಿದೆ.
ಜೋ ಬಿಡೆನ್
ಜೋ ಬಿಡೆನ್
Updated on

ವಾಷಿಂಗ್ಟನ್:  ಭಾರತೀಯ ಮೂಲದ ಮಹಿಳೆ ಉಪಾಧ್ಯಕ್ಷರಾಗಿ ಇದೇ ಮೊದಲ ಬಾರಿಗೆ ಶ್ವೇತಭವನಕ್ಕೆ ಹೆಜ್ಜೆ ಇಡುವುದರ ಹೊರತಾಗಿಯೂ ಅನೇಕ ಕಾರಣಗಳಿಂದಾಗಿ ಬಿಡೆನ್- ಹ್ಯಾರಿಸ್ ಆಯ್ಕೆ ಭಾರತೀಯ ವೃತ್ತಿಪರರಿಗೆ ಒಳ್ಳೆಯ ಸುದ್ದಿಯಾಗಿದೆ.

ಹೊಸ ಆಡಳಿತದಲ್ಲಿ ಟ್ರಂಪ್ ಆಡಳಿತಾವಧಿಯಲ್ಲಿ ಜಾರಿಗೊಳಿಸಲಾಗಿದ್ದ ಹೆಚ್-1 ಬಿ ವೀಸಾ ನಿರ್ಬಂಧವನ್ನು ಸಡಿಲಗೊಳಿಸುವ ಹಸಿರು ಕಾರ್ಡ್ ನಿಯಮವನ್ನು ಬದಲಾಯಿಸುವ ಸಾಧ್ಯತೆ ಹೆಚ್ಚಾಗಿದೆ. ಹೆಚ್ಚಿನ ನುರಿತ ವೀಸಾಗಳ ಸಂಖ್ಯೆಯನ್ನು ಹೆಚ್ಚಿಸಲು ಬಿಡೆನ್ ಆಡಳಿತದಲ್ಲಿ ಯೋಚಿಸಿದರೆ ಸಹಸ್ರಾರು ಭಾರತೀಯ ವೃತ್ತಿಪರರಿಗೆ ಪ್ರಯೋಜನವಾಗಲಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಲ್ಬಣಗೊಂಡಿರುವ ನಿರುದ್ಯೋಗದಿಂದ ಅಮೆರಿಕದ ಕಾರ್ಮಿಕರನ್ನು ರಕ್ಷಿಸಲು  2020 ರ ಅಂತ್ಯದವರೆಗೆ ಎಚ್ -1 ಬಿ ವೀಸಾಗಳ ಜೊತೆಗೆ ಇತರ ರೀತಿಯ ವಿದೇಶಿ ಕೆಲಸದ ವೀಸಾಗಳನ್ನು ತಾತ್ಕಾಲಿಕವಾಗಿ ಟ್ರಂಪ್ ಸ್ಥಗಿತಗೊಳಿಸಿದ್ದರು.

ನಗರಗಳು ಮತ್ತು ಕೌಂಟಿಗಳು  ಬೆಳವಣಿಗೆಯನ್ನು ಬೆಂಬಲಿಸಲು ಉನ್ನತ ಮಟ್ಟದ ವಲಸಿಗರಿಗೆ ಅರ್ಜಿ ಸಲ್ಲಿಸಲು ಬಿಡೆನ್ ಆಡಳಿತವು ಹೊಸ ವೀಸಾ ವರ್ಗವನ್ನು ರಚಿಸಲು ಯೋಜಿಸಿದೆ.

ಉನ್ನತ ಕೌಶಲ್ಯದ ಉದ್ಯೋಗಿಗಳು ಅಮೆರಿಕದಲ್ಲಿ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ ಸಮಗ್ರ ವಲಸೆ ನೀತಿಯನ್ನು ಜಾರಿಗೆ ತರಲು ಬೋ ಬಿಡೆನ್ ನೇತೃತ್ವದ ಆಡಳಿತ ಮುಂದಾಗಿದೆ. ಉದ್ಯೋಗ ಆಧಾರಿತ ವೀಸಾಗಳ ಮಿತಿಗಳನ್ನು ಬಿಡೆನ್ ತೆಗೆದುಹಾಕುವ ಸಾಧ್ಯತೆ ಹೆಚ್ಚಾಗಿದೆ.

ತಂತ್ರಜ್ಞಾನ ಕಂಪನಿಗಳು ಎಚ್ -1 ಬಿ ವೀಸಾಗಳನ್ನು ಅವಲಂಬಿಸಿವೆ, ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿವರ್ಷ ಹತ್ತಾರು ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಈ ವೀಸಾ ಅನುವು ಮಾಡಿಕೊಡುತ್ತದೆ. ಪ್ರಸ್ತುತ, ಉದ್ಯೋಗ ಆಧಾರಿತ ವೀಸಾಗಳ ಸಂಖ್ಯೆಯನ್ನು ಪ್ರತಿವರ್ಷ 140,000 ಎಂದು ಗುರುತಿಸಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com