ಇಮ್ರಾನ್ ಖಾನ್
ಇಮ್ರಾನ್ ಖಾನ್

ಮ್ಯಾಕ್ರನ್ ವ್ಯಂಗ್ಯ ಚಿತ್ರ ಕುರಿತು ಹೇಳಿಕೆ: ಫ್ರಾನ್ಸ್ ಪ್ರಧಾನಿ ವಿರುದ್ಧ ಇಮ್ರಾನ್ ತೀವ್ರ ಆಕ್ರೋಶ!

ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಉದ್ದೇಶ ಪೂರ್ವಕವಾಗಿ ಮುಸ್ಲಿಮರನ್ನು ಪ್ರಚೋದಿಸುತ್ತಿದ್ದಾರೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಸ್ಲಾಮಾಬಾದ್: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಉದ್ದೇಶ ಪೂರ್ವಕವಾಗಿ ಮುಸ್ಲಿಮರನ್ನು ಪ್ರಚೋದಿಸುತ್ತಿದ್ದಾರೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮ್ಯಾಕ್ರನ್ ಪ್ರವಾದಿ ವ್ಯಂಗ್ಯ ಚಿತ್ರ ಕುರಿತ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಪ್ರವಾದಿ ಮಹಮ್ಮದ್ ಅವರ ವ್ಯಂಗ್ಯಚಿತ್ರಗಳು ಫ್ರಾನ್ಸ್‌ನಲ್ಲಿ ಮುಂದುವರಿಯಲಿವೆ ಎಂದು ಪ್ರಧಾನಿ ಮ್ಯಾಕ್ರನ್ ಬುಧವಾರ ನೀಡಿದ್ದ ಹೇಳಿಕೆಗೆ ಇಮ್ರಾನ್ ಖಾನ್ ಸರಣಿ ಟ್ವೀಟ್ ಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. 

ಮ್ಯಾಕ್ರನ್ ಹೇಳಿಕೆಗಳು ಇಸ್ಲಾಮಿಕ್ ವಿರೋಧಿ ಮನೋಭಾವನೆ ಹೆಚ್ಚಿಸುವ ಉದ್ದೇಶ ಹೊಂದಿವೆ ಎಂದು ಆರೋಪಿಸಿದ್ದಾರೆ. ಇಂತಹ ಹೇಳಿಕೆಗಳ ಮೂಲಕ ತೀವ್ರವಾದಿಗಳಿಗೆ ಮತ್ತಷ್ಟು ಅವಕಾಶ ಕಲ್ಪಿಸಿದಂತಾಗುತ್ತದೆ ಅವರು ಸ್ಪಷ್ಟಪಡಿಸಿದ್ದಾರೆ.

ಫ್ರಾನ್ಸ್‌ನ ಶಿಕ್ಷಕ ಸ್ಯಾಮ್ಯುಯೆಲ್ ಪ್ಯಾಟಿ ತೀವ್ರವಾದಿಗಳಿಂದ ಹತ್ಯೆಗೊಳಗಾಗಿದ್ದರು. ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯಚಿತ್ರವನ್ನು ವಿದ್ಯಾರ್ಥಿಗಳಿಗೆ ತೋರಿಸಿದ ಆರೋಪದ ಮೇಲೆ ಇಸ್ಲಾಮಿಕ್ ತೀವ್ರವಾದಿಗಳು ಸ್ಯಾಮ್ಯುಯೆಲ್ ಪ್ಯಾಟಿಯನ್ನು ಹತ್ಯೆ ಮಾಡಿದ್ದರು. ಬುಧವಾರ ಫ್ರಾನ್ಸ್‌ನಲ್ಲಿ ಅವರ ಸಂಸ್ಮರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಫ್ರಾನ್ಸ್ ಅಧ್ಯಕ್ಷರು, ಪ್ರಚೋದಾನಾತ್ಮಕ ಹೇಳಿಕೆ ನೀಡಿದ್ದರು. 

ಇಂತಹ ವ್ಯಂಗ್ಯಚಿತ್ರಗಳು ಫ್ರಾನ್ಸ್‌ನಲ್ಲಿ ಮುಂದುವರಿಯುತ್ತವೆ ಎಂದು ಅವರು ಸ್ಪಷ್ಟಪಡಿಸಿದ್ದರು. ಇದಲ್ಲದೆ, ಫ್ರಾನ್ಸ್ ಭವಿಷ್ಯದ ಮೇಲೆ ಇಸ್ಲಾಂ ಮೂಲಭೂತವಾದಿಗಳು ಕಣ್ಣಿಟ್ಟಿರುವ ಕಾರಣ ಸ್ಯಾಮ್ಯುಯೆಲ್ ಪ್ಯಾಟಿ ಅವರ ಹತ್ಯೆಯಾಗಿದೆ ಎಂದು ತಿಳಿಸಿದ್ದರು. ಮ್ಯಾಕ್ರನ್ ಅವರ ಹೇಳಿಕೆ ಪ್ರಸ್ತುತ ಜಗತ್ತಿನಾದ್ಯಂತ ದೊಡ್ಡ ವಿವಾದಕ್ಕೆ ಕಾರಣವಾಗಿದೆ

Related Stories

No stories found.

Advertisement

X
Kannada Prabha
www.kannadaprabha.com