ಸಿಐಸಿಎ ಸಭೆಯಲ್ಲಿ ಕಾಶ್ಮೀರ ವಿಷಯ ಎತ್ತಿದ್ದ ಪಾಕಿಸ್ತಾನಕ್ಕೆ ಬುದ್ದಿ ಕಲಿಸಿದ ಭಾರತ!

ಬಹುಪಕ್ಷೀಯ ಗುಂಪಿನ ಸಿಐಸಿಎ ವರ್ಚುಯಲ್ ಸಭೆಯಲ್ಲಿ ಕಾಶ್ಮೀರ ವಿಷಯವನ್ನು ಎತ್ತಿದ್ದ ಪಾಕಿಸ್ತಾನ ವಿರುದ್ಧ ಭಾರತ ವಾಗ್ದಾಳಿ ನಡೆಸಿದ್ದು, ಗಡಿಯಾಚೆಗಿನ ಭಯೋತ್ಪಾದನೆಗೆ ಬಹಿರಂಗ ಮತ್ತು ರಹಸ್ಯ ಬೆಂಬಲವನ್ನು ನಿಲ್ಲಿಸುವಂತೆ  ಸಲಹೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಬಹುಪಕ್ಷೀಯ ಗುಂಪಿನ ಸಿಐಸಿಎ ವರ್ಚುಯಲ್ ಸಭೆಯಲ್ಲಿ ಕಾಶ್ಮೀರ ವಿಷಯವನ್ನು ಎತ್ತಿದ್ದ ಪಾಕಿಸ್ತಾನ ವಿರುದ್ಧ ಭಾರತ ವಾಗ್ದಾಳಿ ನಡೆಸಿದ್ದು, ಗಡಿಯಾಚೆಗಿನ ಭಯೋತ್ಪಾದನೆಗೆ ಬಹಿರಂಗ ಮತ್ತು ರಹಸ್ಯ ಬೆಂಬಲವನ್ನು ನಿಲ್ಲಿಸುವಂತೆ  ಸಲಹೆ ನೀಡಿದೆ.

ಭಾರತದ ವಿರುದ್ಧ ನಿರಂತರವಾಗಿ ಸುಳ್ಳು ಹೇಳುತ್ತಾ ಬಂದಿರುವ ಪಾಕಿಸ್ತಾನ ಮತ್ತೊಂದು ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೀಕ್ಷ್ಣ ಪ್ರತಿಕ್ರಿಯೆ ನೀಡಿತು. 

27 ದೇಶಗಳ ಅಂತರ್ ಸರ್ಕಾರಿ ವೇದಿಕೆಯಾದ ಏಷ್ಯಾದಲ್ಲಿ ಸಂವಹನ ಮತ್ತು ವಿಶ್ವಾಸಾರ್ಹ ಮೂಡಿಸುವ ಕ್ರಮಗಳ ಸಮ್ಮೇಳನದ (ಸಿಐಸಿಎ) ಮಂತ್ರಿಗಳ ಸಭೆಯಲ್ಲಿ ಪಾಕಿಸ್ತಾನ ಕಾಶ್ಮೀರ ವಿಷಯವನ್ನು ಎತ್ತಿತು.ವಿದೇಶಾಂಗ ಸಚಿವ ಎಸ್. ಜೈಶಂಕರ್ ಈ ಸಭೆಯಲ್ಲಿ ಪಾಲ್ಗೊಂಡಿದ್ದರು..

ಭಾರತದ ಆಂತರಿಕ ವ್ಯವಹಾರಗಳ ಬಗ್ಗೆ ಪ್ರತಿಕ್ರಿಯಿಸಲು ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಕ್ ಕೇಂದ್ರಾಡಳಿತ ಪ್ರದೇಶಗಳು ದೇಶದ ಅವಿಭಾಜ್ಯ ಅಂಗವಾಗಿ ಉಳಿಯುತ್ತವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿತು.

ಭಾರತದ ಆಂತರಿಕ ವ್ಯವಹಾರಗಳು, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯಲ್ಲಿ  ಪಾಕಿಸ್ತಾನ ಸಂಪೂರ್ಣ ಹಸ್ತಕ್ಷೇಪ ಮಾಡುತ್ತಿದೆ. ಇದು ಸೆಪ್ಟೆಂಬರ್ 1999 ರ ಸಿಐಸಿಎ ಸದಸ್ಯ ರಾಷ್ಟ್ರಗಳ ನಡುವಿನ ಸಂಬಂಧಗಳ ಮಾರ್ಗದರ್ಶಿ ಸಂಬಂಧಗಳ ಕುರಿತಾದ ಸಿಐಸಿಎ ಘೋಷಣೆಗೆ ಹೊಂದಿಕೆಯಾಗುವುದಿಲ್ಲ ”ಎಂದು ಪಾಕಿಸ್ತಾನ ವಿದೇಶಾಂಗ ಸಚಿವ  ಶಾ ಮೊಹಮದ್ ಖುರೇಷಿ ಅವರ ಟೀಕೆಗಳಿಗೆ ಪ್ರತಿಕ್ರಿಯೆಯಾಗಿ  ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ನೀಡಿತು.

ಪಾಕಿಸ್ತಾನವು ಭಯೋತ್ಪಾದನೆಯ ಜಾಗತಿಕ ಕೇಂದ್ರಬಿಂದುವಾಗಿದೆ ಮತ್ತು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಮೂಲವಾಗಿ ಮುಂದುವರೆದಿದೆ. ಇದನ್ನು ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಸಲಹೆ ನೀಡುತ್ತೇವೆ.ಈ ಪ್ರಮುಖ ವೇದಿಕೆಯನ್ನು ಅದರ ಕಾರ್ಯಸೂಚಿಯಿಂದ ಬೇರೆಡೆಗೆ ತಿರುಗಿಸುವ ಬದಲು, ಇದು ಉಭಯ ದೇಶಗಳು ದ್ವಿಪಕ್ಷೀಯವಾಗಿ ಸಮಸ್ಯೆಗಳನ್ನು  ಪರಿಹರಿಸಲು ಅನುವು ಮಾಡಿಕೊಡುತ್ತದೆ ಎಂದು ಎಂಇಎ ಹೇಳಿಕೆ ನೀಡಿತು.

ರಾಷ್ಟ್ರಗಳ ಜಂಟಿ ಸಹಭಾಗಿತ್ವದಲ್ಲಿ ಭಯೋತ್ಪಾದನೆ ಹಾಗೂ ಅದರ ಪ್ರಾಯೋಜಕತ್ವವನ್ನು ತಡೆಗಟ್ಟಬಹುದು ಎಂದು ಎಸ್. ಜೈಶಂಕರ್ ಸಿಐಸಿಎ ಸಭೆಯಲ್ಲಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com