ಸ್ಪೇನ್ ನಲ್ಲಿ ಕೊರೋನಾ ವೈರಸ್ ರುದ್ರ ನರ್ತನ, ಒಂದೇ ದಿನ 932 ಮಂದಿ ಬಲಿ, ಸಾವಿನ ಸಂಖ್ಯೆ 10,935ಕ್ಕೆ ಏರಿಕೆ

ಸ್ಪೇನ್ ನಲ್ಲಿ ಮಾರಕ ಕೊರೋನಾ ವೈರಸ್ ರುದ್ರನರ್ತನ ಮುಂದುವರೆದಿದ್ದು, ಕೇವಲ 24ಗಂಟೆಗಳ ಅವಧಿಯಲ್ಲಿ 932 ಮಂದಿ ಕೋವಿಡ್-19 ರೋಗಿಗಳು ಸಾವನ್ನಪ್ಪಿದ್ದಾರೆ. 
ಸ್ಪೇನ್ ನಲ್ಲಿ ಕೊರೋನಾ ರುದ್ರ ನರ್ತನ
ಸ್ಪೇನ್ ನಲ್ಲಿ ಕೊರೋನಾ ರುದ್ರ ನರ್ತನ

ಮ್ಯಾಡ್ರಿಡ್: ಸ್ಪೇನ್ ನಲ್ಲಿ ಮಾರಕ ಕೊರೋನಾ ವೈರಸ್ ರುದ್ರನರ್ತನ ಮುಂದುವರೆದಿದ್ದು, ಕೇವಲ 24ಗಂಟೆಗಳ ಅವಧಿಯಲ್ಲಿ 932 ಮಂದಿ ಕೋವಿಡ್-19 ರೋಗಿಗಳು ಸಾವನ್ನಪ್ಪಿದ್ದಾರೆ. 

ಯೂರೋಪ್ ನ ಪ್ರಮುಖ ದೇಶ ಸ್ಪೇನ್ ನಲ್ಲಿ ಕೊರೋನಾ ರುದ್ರ ನರ್ತನ ಮುಂದುವರೆದಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ ಸ್ಪೇನ್ ನಲ್ಲಿ ಬರೊಬ್ಬರಿ 932 ಮಂದಿ ಸಾವನ್ನಪ್ಪಿದ್ದಾರೆ. ಆ ಮೂಲಕ ಸ್ಪೇನ್ ನಲ್ಲಿ ವೈರಸ್ ಗೆ ಬಲಿಯಾದವರ ಸಂಖ್ಯೆ  10,935ಕ್ಕೆ ಏರಿಕೆಯಾಗಿದೆ. ಅಂತೆಯೇ ಸ್ಪೇನ್ ನಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 1,17,710ಕ್ಕೆ ಏರಿಕೆಯಾಗಿದೆ.

ಇನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿ ಅನ್ವಯ ಯೂರೋಪ್ ನಲ್ಲಿ ವೈರಸ್ ಸೋಂಕಿತರ ಸಂಖ್ಯೆ 5,03,006ಕ್ಕೆ ಏರಿಕೆಯಾಗಿದೆ. ಅದರಂತೆ ವಿಶ್ವದಲ್ಲಿ ದಾಖಲಾಗಿರುವ ಒಟ್ಟಾರೆ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಬರೊಬ್ಬರಿ ಅರ್ಧದಷ್ಟು ಪ್ರಕರಣಗಳು ಯೂರೋಪ್  ನಲ್ಲೇ ದಾಖಲಾಗಿವೆ.  ಅಂತೆಯೇ ಸಾವಿನ ಸಂಖ್ಯೆಯಲ್ಲೂ ಯೂರೋಪ್ ಅಗ್ರ ಸ್ಥಾನದಲ್ಲಿದ್ದು, ಇಲ್ಲಿ 33 ಸಾವಿರಕ್ಕೂ ಅಧಿಕ ಮಂದಿ ವೈರಸ್ ಗೆ ಬಲಿಯಾಗಿದ್ದಾರೆ. 

ಚೀನಾದ ವುಹಾನ್ ನಲ್ಲಿ ಮೊದಲು ಪತ್ತೆಯಾಗಿದ್ದ ಕೊರೊನಾ ವೈರಸ್ ವಿಶ್ವಾದ್ಯಂತ 50,000ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದೆ. ಭಾರತ ಸೇರಿ ಒಟ್ಟು 195ರಾಷ್ಟ್ರಗಳಿಗೂ ಹೆಚ್ಚು ಕಡೆ ವೈರಸ್ ಹರಡಿದೆ. ಭಾರತದಲ್ಲಿ 2500ಕ್ಕೂ ಹೆಚ್ಚು ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ.  ವಿಶ್ವದಾದ್ಯಂತ ಕೊರೊನಾ ವೈರಸ್ 53 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. 10 ಲಕ್ಷದ 15 ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ. ಇಟಲಿಯಲ್ಲಿ ಅತೀ ಹೆಚ್ಚು ಮಂದಿ ಈ ಮಾರಕ ವೈರಸ್ ಗೆ ಸಾವನ್ನಪ್ಪಿದ್ದು, ಮೃತಪಟ್ಟವರ ಚಾರ್ಟ್ ನಲ್ಲಿ ಮೊದಲ  ಸ್ಥಾನದಲ್ಲಿದೆ. ಇಲ್ಲಿ 1 ಲಕ್ಷದ 15 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. 13,900ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿ ತಿಳಿಸಿದೆ. ಎರಡನೇ ಸ್ಥಾನದಲ್ಲಿ ಸ್ಪೇನ್ ಇದ್ದು 1 ಲಕ್ಷದ 12 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್ ಎಂದು ವರದಿ  ಬಂದಿದೆ. 10,300ಕ್ಕೂ ಹೆಚ್ಚು ಮಂದಿ ಕೊರೊನಾಗೆ ಇಲ್ಲಿ ಸಾವನ್ನಪ್ಪಿದ್ದಾರೆ. 

ಕೋವಿಡ್-19ರ ತವರು ಎನಿಸಿರುವ ಚೀನಾದಲ್ಲಿ ಈಗ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಕಾಣ ಸಿಗುತ್ತಲೇ ಇಲ್ಲ. ಚೀನಾ ಸಂಪೂರ್ಣವಾಗಿ ಕೊರೊನಾ ವಿರುದ್ಧ ಹೋರಾಡಿ ಗೆಲುವು ಕಂಡಿದೆ. ಮಾತ್ರವಲ್ಲ 81 ಸಾವಿರಕ್ಕೂ ಹೆಚ್ಚ ಮಂದಿ ಇಲ್ಲಿ ಸೋಂಕಿತರಾಗಿದ್ದು, ಇದರಲ್ಲಿ 76,400ಕ್ಕೂ  ಹೆಚ್ಚು ಮಂದಿ ಗುಣಮುಖರಾಗಿ ಸಾವಿನಿಂದ ಪಾರಾಗಿದ್ದಾರೆ. ಇಲ್ಲಿ ಸಾವಿನ ಸಂಖ್ಯೆ ದಾಖಲಾಗಿರುವುದು 3,300. ಸದ್ಯ ಇಲ್ಲಿ ಇರುವ ಪಾಸಿಟಿವ್ ಪ್ರಕರಣ 1,863 ಮಾತ್ರ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com