ಕೊರೋನಾಗೆ ನಲುಗಿದ ದೊಡ್ಡಣ್ಣ: ಅಮೆರಿಕಾ ನೌಕಾಸೇನೆಯ ಕಾರ್ಯದರ್ಶಿ ಥಾಮಸ್ ಮಾಡ್ಲಿ ರಾಜಿನಾಮೆ

ಸಾವಿರಾರು ಜನರನ್ನು ಬಲಿ ಪಡೆದಿರುವ ಈ ಮಾರಕ ವೈರಾಣು ಇದೀಗ ದೇಶದ ರಕ್ಷಣಾ ಪಡೆಗಳಲ್ಲೂ ಸಂಚಲನ ಉಂಟಾಗಲು ಕಾರಣವಾಗಿದೆ. ನೌಕಾಸೇನೆ ಕಾರ್ಯದರ್ಶಿ ಸ್ಥಾನಕ್ಕೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್, ಮಾಡ್ಲಿ ರಾಜೀನಾಮೆ ನೀಡಿದ್ದು ರಕ್ಷಣಾ ಇಲಾಖೆ ಸ್ವೀಕರಿಸಿದೆ.
ಥಾಮಸ್ ಮಾಡ್ಲಿ
ಥಾಮಸ್ ಮಾಡ್ಲಿ

ವಾಷಿಂಗ್ಟನ್: ಮಾರಕ ಕೊರೊನಾ ವೈರಸ್ ಅಮೆರಿಕದಲ್ಲಿ ಭಾರೀ ಕೋಲಾಹಲವನ್ನೇ ಸೃಷ್ಟಿಸಿದೆ. ಸಾವಿರಾರು ಜನರನ್ನು ಬಲಿ ಪಡೆದಿರುವ ಈ ಮಾರಕ ವೈರಾಣು ಇದೀಗ ದೇಶದ ರಕ್ಷಣಾ ಪಡೆಗಳಲ್ಲೂ ಸಂಚಲನ ಉಂಟಾಗಲು ಕಾರಣವಾಗಿದೆ. ನೌಕಾಸೇನೆ ಕಾರ್ಯದರ್ಶಿ ಸ್ಥಾನಕ್ಕೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್, ಮಾಡ್ಲಿ ರಾಜೀನಾಮೆ ನೀಡಿದ್ದು ರಕ್ಷಣಾ ಇಲಾಖೆ ಸ್ವೀಕರಿಸಿದೆ.

'ಥಿಯೊಡೋರ್ ರೂಸ್‌ವೆಲ್ಟ್' ಯುದ್ಧ ಹಡಗಿನಲ್ಲಿ ಕೊರೊನಾ ವೈರಸ್ ನುಸುಳಿದ್ದು, ಯುದ್ಧ ಹಡಗಿನಲ್ಲಿರುವ ಸೈನಿಕರನ್ನು ಕಾಪಾಡುವಂತೆ ಕ್ಯಾಪ್ಟನ್ ಬ್ರೆಟ್ ಕ್ರೊಜಿಯರ್ ನೌಕಾಪಡೆಯ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಆದರೆ ಈ ಮನವಿಯನ್ನು ಅಪಹಾಸ್ಯ ಮಾಡಿದ್ದ ಅಮೆರಿಕ ನೌಕಾಸೇನೆಯ ಕಾರ್ಯದರ್ಶಿ ಥಾಮಸ್ ಮಾಡ್ಲಿ, ಯುದ್ಧ ಹಡಗಿನಲ್ಲಿ ಕೊರೊನಾ ಬಂದರೆ ನಾವೇನು ಮಾಡೋಣ ಎಂದು ಪ್ರಶ್ನಿಸಿದ್ದರು. ಅಲ್ಲದೇ ಈ ಸುದ್ದಿಯನ್ನು ಬಹಿರಂಗಗೊಳಿಸಿದ್ದಕ್ಕೆ ಕ್ಯಾಪ್ಟನ್ ವಿರುದ್ಧ ಹರಿಹಾಯ್ದಿದ್ದರು.

ಇದಕ್ಕೆ ಪ್ರತಿಯಾಗಿ 'ಥಿಯೊಡೋರ್ ರೂಸ್‌ವೆಲ್ಟ್' ಹಡಗಿನಲ್ಲಿದ್ದ ಸೈನಿಕರು ತಮ್ಮ ಕ್ಯಾಪ್ಟನ್ ಅವರಿಗೆ ಗೌರವ ಸಲ್ಲಿಸಿ ವಿಡಿಯೋ ಬಿಡುಗಡೆ ಮಾಡಿದ್ದರು. ಇದು ಥಾಮಸ್ ಮಾಡ್ಲಿ ಅವರಿಗೆ ತೀವ್ರ ಮುಜುಗರ ತಂದಿತ್ತು ಎನ್ನಲಾಗಿದೆ.

ಥಾಮಸ್ ಮಾಡ್ಲಿಯ ಈ ಹೇಳಿಕೆಗೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ನೌಕಾಸೇನೆಯ ಕಾರ್ಯದರ್ಶಿಯಾಗಿ ಯುದ್ಧ ಹಡಗಿನ ಕ್ಯಾಪ್ಟನ್ ಪತ್ರವನ್ನು ಅಪಹಾಸ್ಯ ಮಾಡುವುದು ಸಲ್ಲ ಎಂದು ಮಾಡ್ಲಿ ವಿರುದ್ಧ ಹಲವರು ಆಕ್ರೋಶ ವ್ಯಕ್ತವಾಗಿತ್ತು.  ಇನ್ನೂ ನೌಕಾಸೇನೆ ಕಾರ್ಯದರ್ಶಿ ಮಾಡ್ಲಿ ಅವರ ರಾಜಿನಾಮೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೇಸರ ವ್ಯಕ್ತ ಪಡಿಸಿದ್ದಾರೆ, ಇಷ್ಟೊಂದು ಸ್ವಾರ್ಥಿಗಳಗಬಾರದು ಎಂದು ಟ್ವೀಟ್  ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com