ವುಹಾನ್ ನ ಅತಿದೊಡ್ಡ ಕೋವಿಡ್-19 ರೋಗಿಗಳ ಆಸ್ಪತ್ರೆಯನ್ನು ಮುಚ್ಚಿದ ಚೀನಾ ಸರ್ಕಾರ

ಕೊರೋನಾ ಸೋಂಕು ಮತ್ತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿಯಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ವುಹಾನ್ ನಲ್ಲಿ ಕಟ್ಟಿಸಲಾಗಿದ್ದ ಆಸ್ಪತ್ರೆಯನ್ನು ಚೀನಾ ಸರ್ಕಾರ ಮುಚ್ಚಿದೆ.
ವುಹಾನ್ ನ ಅತಿದೊಡ್ಡ ಕೋವಿಡ್-19 ರೋಗಿಗಳ ಆಸ್ಪತ್ರೆಯನ್ನು ಮುಚ್ಚಿದ ಚೀನಾ ಸರ್ಕಾರ

ಬೀಜಿಂಗ್: ಕೊರೋನಾ ಸೋಂಕು ಮತ್ತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿಯಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ವುಹಾನ್ ನಲ್ಲಿ ಕಟ್ಟಿಸಲಾಗಿದ್ದ ಆಸ್ಪತ್ರೆಯನ್ನು ಚೀನಾ ಸರ್ಕಾರ ಮುಚ್ಚಿದೆ.

ಇಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ವೈದ್ಯಕೀಯ ಕಾರ್ಮಿಕರು ನಗರ ತೊರೆದು ಹೋಗಿದ್ದಾರೆ. ವುಹಾನ್ ನ ಲೈಶೆನ್ಶಾನ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಣೆಯನ್ನು ನಿಲ್ಲಿಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ತಿಳಿಸಿದೆ.

ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲೆಂದೇ 10 ದಿನಗಳಲ್ಲಿ ತಯಾರಿಸಲಾದ ಸಾವಿರಕ್ಕೂ ಹೆಚ್ಚು ಬೆಡ್ ಗಳನ್ನು ಹೊಂದಿರುವ ಆಸ್ಪತ್ರೆ ಇದಾಗಿದೆ. ಇಂತಹ ಎರಡು ಆಸ್ಪತ್ರೆಗಳ ಜೊತೆಗೆ ಚೀನಾ ಕ್ವಾರಂಟೈನ್ ಮತ್ತು ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು 14 ಹೆಚ್ಚುವರಿ ಆರೋಗ್ಯ ಕೇಂದ್ರಗಳನ್ನು ನಿರ್ಮಾಣ ಮಾಡಿದೆ. ಅವುಗಳನ್ನೆಲ್ಲಾ ಇತ್ತೀಚೆಗೆ ಬಂದ್ ಮಾಡಲಾಗಿತ್ತು.

ಚೀನಾ ಸರ್ಕಾರ ಜನವರಿ 23ರಂದು ಲಾಕ್ ಡೌನ್ ಘೋಷಿಸಿ ಏಪ್ರಿಲ್ 8ರಂದು ತೆಗೆದುಹಾಕಿತ್ತು. ಇಲ್ಲಿ 3 ಸಾವಿರಕ್ಕೂ ಅಧಿಕ ವೈದ್ಯಕೀಯ ಸೇವೆಯಲ್ಲಿ ತೊಡಗಿದ್ದವರಿಗೆ ಸೋಂಕು ತಗುಲಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com