ಕೊರೋನಾ ವಿರುದ್ಧ ಅಸಹಾಯಕ ಹೋರಾಟ: ಬ್ರಿಟನ್ ಆಸ್ಪತ್ರೆಯಲ್ಲಿ ಹಗಲು ರಾತ್ರಿ ಎನ್ನದೆ ಸೇವೆ ಸಲ್ಲಿಸುತ್ತಿರುವ ಭಾರತೀಯ ವೈದ್ಯ

ಇಡೀ ವಿಶ್ವಕ್ಕೆ ಕಂಟಕವಾಗ ಪರಿಣಮಿಸಿರುವ ಕೊರೋನಾ ವೈರಸ್ ವಿರುದ್ಧ ಬ್ರಿಟನ್ ಆಸ್ಪತ್ರೆಗಳಲ್ಲಿ ಭಾರತೀಯ ಮೂಲದ ವೈದ್ಯರು ಹಗಲು ರಾತ್ರಿ ಎನ್ನದೆ ಸೋಂಕಿತರಿಗೆ ಚಿಕಿತ್ಸೆ ನೀಡಿ, ವೈರಸ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಂಡನ್: ಇಡೀ ವಿಶ್ವಕ್ಕೆ ಕಂಟಕವಾಗ ಪರಿಣಮಿಸಿರುವ ಕೊರೋನಾ ವೈರಸ್ ವಿರುದ್ಧ ಬ್ರಿಟನ್ ಆಸ್ಪತ್ರೆಗಳಲ್ಲಿ ಭಾರತೀಯ ಮೂಲದ ವೈದ್ಯರು ಹಗಲು ರಾತ್ರಿ ಎನ್ನದೆ ಸೋಂಕಿತರಿಗೆ ಚಿಕಿತ್ಸೆ ನೀಡಿ, ವೈರಸ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. 

ಬ್ರಿಟನ್'ನ ಕೇಂಬ್ರಿಡ್ಜ್‌ಶೈರ್ ನಲ್ಲಿರುವ ರಾಯಲ್ ಪಾಪ್'ವರ್ತ್ ಆಸ್ಪತ್ರೆಯಲ್ಲಿ ಭಾರತೀಯ ಮೂಲಕ ಚಿನ್ಮಯ್ ಪಟ್ವರ್ಧನ್ ಅವರು ಕಾರ್ಯನಿರ್ವಹಿಸುತ್ತಿದ್ದು, ವೈರಸ್ ವಿರುದ್ಧ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಅಸಹಾಯಕ ಹೋರಾಟದ ಬಗ್ಗೆ ವಿವರಿಸಿದ್ದಾರೆ. 

ವೈರಸ್ ಸೋಂಕಿಗೆ ಒಳಗಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಎಂದಿಗಿಂತಲೂ ವೈದ್ಯಕೀಯ ಸಲಕರಣೆಗಳು ಹಾಗೂ ಔಷಧಿಗಳಿಗೆ ಡಿಮ್ಯಾಂಡ್ ಹೆಚ್ಚಾಗಿಯೇ ಇದೆ. ಕೊರೋನಾ ವೈರಸ್ ಹೊಸ ರೋಗವಾಗಿತ್ತು. ಈ ವೈರಸ್'ಗಿನ್ನೂ ಔಷಧಿಗಳು ಬಂದಿಲ್ಲ. ರೋಗವನ್ನು ಗುಣಪಡಿಸುವುದ ಹೇಗೆ ಎಂಬುದು ಯಾರಿಗೂ ಗೊತ್ತಿಲ್ಲ. ಪ್ರತೀಯೊಬ್ಬರೂ ಅಸಹಾಯಕತೆಯಿಂದಲೇ ಹೋರಾಟ ಮಾಡುತ್ತಿದ್ದಾರೆ. ಆದರೆ, ವೈದ್ಯರು ಹಾಗೂ ಇತರೆ ವೈದ್ಯಕೀಯ ಸಿಬ್ಬಂದಿಗಳು ಹಗಲು, ರಾತ್ರಿ ಎನ್ನದೆ ಸೇವೆ ಸಲ್ಲಿಸುತ್ತಿದ್ದು, ಬಹಳ ಹೆಮ್ಮೆ ಎನಿಸುತ್ತಿದೆ. ಈ ಬೆಳವಣಿಗೆಗಳನ್ನು ಎಂದಿಗೂ ನೋಡಿರಲಿಲ್ಲ. ಪ್ರತೀಯೊಬ್ಬರು ತಮಗೆ ತಾವೇ ಸಮಾಧಾನ ಹೇಳಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆಂದು ಪಟ್ವರ್ಧನ್ ಅವರು ಹೇಳಿದ್ದಾರೆ. 

ಬ್ರಿಟನ್ ನಲ್ಲಿ ಒಟ್ಟು 5 ಆಸ್ಪತ್ರೆಗಳಲ್ಲಿ ಇಸಿಎಂಒ ವ್ಯವಸ್ಥೆಯಿದ್ದು, ಆ ಐದು ಆಸ್ಪತ್ರೆಗಳ ಪೈಕಿ ರಾಯಲ್ ಪಾಪ್'ವರ್ತ್ ಆಸ್ಪತ್ರೆ ಕೂಡ ಒಂದಾಗಿದೆ. ಹೀಗಾಗಿ ಇಲ್ಲಿನ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು 24*7 ಕಾರ್ಯನಿರ್ವಹಿಸಲೇಬೇಕಿದೆ. ಆಸ್ಪತ್ರೆಗೆ ಬರುವ ಕರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಅತ್ಯಂತ ಗಂಭೀರ ಇರುವ ರೋಗಿಗಳೇ ಆಸ್ಪತ್ರೆಗೆ ಬರುತ್ತಾರೆ. ಇಲ್ಲಿಗೆ ಬರುವ ರೋಗಿಗಳಿಗೆ ನಾವೇ ಭರವಸೆಯಾಗಿರುತ್ತೇವೆ. ವೈರಸ್ ನಿಂದ ಬಳಲುತ್ತಿರುವ ವ್ಯಕ್ತಿ ಅಪಾಯದ ಮಟ್ಟಕ್ಕೆ ತಲುಪಿದಾಗ ಅವರಿಗೆ ಇಸಿಎಂಒ ಅತ್ಯಂತ ಮುಖ್ಯವಾಗಿರುತ್ತದೆ. ರೋಗಿಯನ್ನು ಅಪಾಯದಿಂದ ದೂರ ಉಳಿಯುವಂತೆ ಮಾಡಲು ಹಗಲು ರಾತ್ರಿ ದುಡಿಯುತ್ತಿದ್ದೇವೆ. 

ರಾತ್ರಿ ಪಾಳಿಕೆಯಲ್ಲಿ 12 ಗಂಟೆಗೂ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತೇವೆ. ಒಮ್ಮೆ ಮಾಸ್ಕ್ ಹಾಗೂ ಸುರಕ್ಷಾ ಸಾಧನಗಳನ್ನು ತೊಟ್ಟರೆ, ಕೆಲಸ ಪೂರ್ಣಗೊಳ್ಳುವವರೆಗೂ ತೆಗೆಯುವಂತಿಲ್ಲ. ಕೆಲಸ ಪೂರ್ಣಗೊಂಡು ಸಾಧನೆಗಳನ್ನು ತೆಗೆದಾಗ ನಮ್ಮ ದೇಹದ ಮೇಲೆ ಅವುಗಳ ಗುರುತು/ಕಲೆಗಳು ಬಿದ್ದಿರುತ್ತವೆ. 

ಕೆಲಸ ಅಷ್ಟೊಂದು ಸುಲಭವಲ್ಲ ಆದರೆ, ಒಗ್ಗೂಡಿ ಕೆಲಸ ಮಾಡುವಾಗ ಎಲ್ಲವೂ ಮರೆತುಹೋಗುತ್ತದೆ. ನಾವೆಲ್ಲರೂ ಒಟ್ಟಿಗಿದ್ದೇವೆ. ಕಷ್ಟದಲ್ಲಿಯೂ ನಗುತ್ತಲೇ ಸೇವೆ ಸಲ್ಲಿಸುತ್ತಿದ್ದೇವೆಂದು ತಮ್ಮ ಅಸಹಾಯಕತೆ ಹಾಗೂ ಅಳಲನ್ನು ಚಿನ್ಮಯ್ ತೋಡಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com