ಕೊರೋನಾ ವೈರಸ್ ಹಿಂದೆ ಚೀನಾ ಕೈವಾಡವಿದ್ದರೆ, ವಾಣಿಜ್ಯ-ವ್ಯಾಪಾರ ಒಪ್ಪಂದ ಅಂತ್ಯ: ಅಮೆರಿಕ ಅಧ್ಯಕ್ಷ ಟ್ರಂಪ್

ಮಾರಕ ಕೊರೋನಾ ವೈರಸ್ ಪ್ರಸರಣದ ಹಿಂದೆ ಚೀನಾ ಕೈವಾಡವಿದ್ದರೆ ಆ ದೇಶದೊಂದಿಗಿನ ಎಲ್ಲ ರೀತಿಯ ವಾಣಿಜ್ಯ-ವ್ಯಾಪಾರ ಒಪ್ಪಂದಗಳನ್ನು ಅಂತ್ಯಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಮಾರಕ ಕೊರೋನಾ ವೈರಸ್ ಪ್ರಸರಣದ ಹಿಂದೆ ಚೀನಾ ಕೈವಾಡವಿದ್ದರೆ ಆ ದೇಶದೊಂದಿಗಿನ ಎಲ್ಲ ರೀತಿಯ ವಾಣಿಜ್ಯ-ವ್ಯಾಪಾರ ಒಪ್ಪಂದಗಳನ್ನು ಅಂತ್ಯಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಕೊರೋನಾ ವೈರಸ್ ಸೃಷ್ಟಿಯಾಗಿದ್ದು ಚೀನಾದಿಂದ ಎಂಬ ಚರ್ಚೆ ಮೊದಲಿನಿಂದಲೂ ನಡೆಯುತ್ತಿದ್ದು, ಇದೇ ವಾದವನ್ನು ಮುಂದಿಡುತ್ತಾ ಬಂದಿರುವ ಅಮೆರಿಕ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವೈರಸ್ ಹಿಂದೆ ಚೀನಾ ಕೈವಾಡವಿದ್ದರೆ, ವಾಣಿಜ್ಯ-ವ್ಯಾಪಾರ ಒಪ್ಪಂದ  ಅಂತ್ಯಗೊಳಿಸುವುದಾಗಿ ಎಚ್ಚರಿಕೆ ನೀಡಿದೆ. ಈ ಬಗ್ಗೆ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಕೊರೊನಾ ವೈರಸ್ ಹರಡಿದ್ದರ ಹಿಂದೆ ಚೀನಾದ ಕೈವಾಡ ಇದ್ದದ್ದೇ ಆದರೆ ಅದು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಚೀನಾದೊಂದಿಗಿನ ವ್ಯಾಪಾರ ಒಪ್ಪಂದವನ್ನು  ಅಮೆರಿಕ ಅಂತ್ಯಗೊಳಿಸಲಿದೆ ಎಂದು ಹೇಳಿದ್ದಾರೆ.

'ಚೀನಾ ಮತ್ತು ಅಮೆರಿಕ ಕಳೆದ ಜನವರಿ ತಿಂಗಳಲ್ಲಿ ವ್ಯಾಪಾರ ಒಪ್ಪಂದದ ಮೊದಲನೇ ಹಂತಕ್ಕೆ ಸಹಿ ಹಾಕಿದ್ದವು. ಈ ಒಪ್ಪಂದದ ಪ್ರಕಾರ ಚೀನಾ ಅಮೆರಿಕದಿಂದ 200 ಶತಕೋಟಿ ಅಮೆರಿಕ ಡಾಲರ್ ಮೊತ್ತದ ಉತ್ಪನ್ನಗಳನ್ನು ಖರೀದಿಸಬೇಕಿದೆ. ಆದಾಗ್ಯೂ, ಅಮೆರಿಕ- ಚೀನಾ ಆರ್ಥಿಕ  ಮತ್ತು ಭದ್ರತಾ ಪುನರ್‌ಪರಿಶೀಲನಾ ಆಯೋಗವು ಈ ಒಪ್ಪಂದದಲ್ಲಿ ಚೀನಾ ತಿದ್ದುಪಡಿ ಮಾಡಬಹುದು ಎಂದು ವರದಿಯಲ್ಲಿ ಹೇಳಿತ್ತು. ಇದರಲ್ಲಿ ನೈಸರ್ಗಿಕ ವಿಕೋಪ ಅಥವಾ ಇನ್ಯಾವುದೇ ವಿಕೋಪದ ವೇಳೆ ಎರಡೂ ದೇಶಗಳ ನಡುವೆ ಹೊಸ ವ್ಯಾಪಾರ ಒಪ್ಪಂದ ಮಾಡಬಹುದಾಗಿದೆ  ಎಂದು ಹೇಳಲಾಗಿದೆ. ಒಂದು ವೇಳೆ ಈ ರೀತಿ ಮಾಡಿದರೆ ನಾವು ಒಪ್ಪಂದವನ್ನು ಅಂತ್ಯಗೊಳಿಸಿ ಎಲ್ಲರಿಗಿಂತ ಉತ್ತಮವಾಗಿ ಏನು ಮಾಡಲು ಸಾಧ್ಯವೋ ಅದನ್ನು ನಾವು ಮಾಡುತ್ತೇವೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದ್ದಾಗ ಅದೃಶ್ಯ ವೈರಿಯೊಂದು ಎದುರಾಗಿದೆ. ಅದು ಎಲ್ಲಿಂದ  ಬಂತು ಎಂಬುದು ನಮಗೆ ತಿಳಿದಿದೆ. ಅದರ ಬಗ್ಗೆ ನಾವು ಜಾಸ್ತಿಯೇ ಮಾತನಾಡುತ್ತಿದ್ದೇವೆ. ಚೀನಾದ ಮೇಲೆ ಇಷ್ಟೊಂದು ಕಠಿಣ ನಿಲುವು ಸಾಧಿಸಿದ್ದು ನಾನು ಮಾತ್ರ' ಎಂದು ಟ್ರಂಪ್ ಹೇಳಿದ್ದಾರೆ.

ಈ ಹಿಂದೆ ಚೀನಾ ವ್ಯಾಪಾರದಲ್ಲಿನ ಖರ್ಚು ಕಡಿಮೆ ಮಾಡುವಂತೆ ಒತ್ತಾಯಿಸಿದ್ದ ಟ್ರಂಪ್ 2018ರಲ್ಲಿ ವ್ಯಾಪಾರ ಯುದ್ಧ ಆರಂಭಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com