ಕಿಮ್ ಜಾಂಗ್ ಉನ್ ಬರೆದ ಪತ್ರ ಎಂದು ಉಲ್ಲೇಖಿಸಿ ದಕ್ಷಿಣ ಆಫ್ರಿಕಾ ಅಧ್ಯಕ್ಷರಿಗೆ ಶುಭಾಶಯ, ಕಿಮ್ ಆರೋಗ್ಯದ ಬಗ್ಗೆ ಮಾತನಾಡಿದ ಟ್ರಂಪ್

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಆರೋಗ್ಯದ ಬಗ್ಗೆ ಕಳೆದ ಕೆಲ ದಿನಗಳಿಂದ ಕೇಳಿಬರುತ್ತಿರುವ ಊಹಾಪೋಹಗಳ ಬಗ್ಗೆ ತೆರೆ ಎಳೆಯಲು ಪ್ರಯತ್ನಿಸಿರುವ ದೇಶದ ಮಾಧ್ಯಮ,ಕಿಮ್ ಜಾಂಗ್ ಉನ್ ಅವರು ಹೊರಡಿಸಿರುವ ಪತ್ರವೆಂದು ಉಲ್ಲೇಖಿಸಿದ್ದು ಅದರಲ್ಲಿ ಸರ್ವಾಧಿಕಾರಿ ನಾಯಕ ದಕ್ಷಿಣ ಆಫ್ರಿಕಾದ ಸ್ವತಂತ್ರ ದಿನದ ಅಂಗವಾಗಿ ಅಲ್ಲಿನ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರಿಗೆ

Published: 28th April 2020 10:13 AM  |   Last Updated: 28th April 2020 12:51 PM   |  A+A-


Kim Jong Un(File photo)

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್(ಸಂಗ್ರಹ ಚಿತ್ರ)

Posted By : Sumana Upadhyaya
Source : PTI

ಸಿಯೊಲ್: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಆರೋಗ್ಯದ ಬಗ್ಗೆ ಕಳೆದ ಕೆಲ ದಿನಗಳಿಂದ ಕೇಳಿಬರುತ್ತಿರುವ ಊಹಾಪೋಹಗಳ ಬಗ್ಗೆ ತೆರೆ ಎಳೆಯಲು ಪ್ರಯತ್ನಿಸಿರುವ ದೇಶದ ಮಾಧ್ಯಮ,ಕಿಮ್ ಜಾಂಗ್ ಉನ್ ಅವರು ಹೊರಡಿಸಿರುವ ಪತ್ರವೆಂದು ಉಲ್ಲೇಖಿಸಿದ್ದು ಅದರಲ್ಲಿ ಸರ್ವಾಧಿಕಾರಿ ನಾಯಕ ದಕ್ಷಿಣ ಆಫ್ರಿಕಾದ ಸ್ವತಂತ್ರ ದಿನದ ಅಂಗವಾಗಿ ಅಲ್ಲಿನ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರಿಗೆ ಶುಭಾಶಯ ಕೋರಿದ್ದಾರೆ ಎಂದು ವರದಿ ಮಾಡಿದೆ.

ನಿನ್ನೆ ಅಂದರೆ ಏಪ್ರಿಲ್ 27 ಎಂದು ಪತ್ರದಲ್ಲಿ ದಿನಾಂಕ ನಮೂದಿಸಿದ್ದು ಆದರೆ ಈ ಪತ್ರದ ನಿಖರತೆ ಬಗ್ಗೆ ದೃಢವಾಗಿಲ್ಲ ಎಂದು ಕೊರಿಯಾ ಸೆಂಟ್ರಲ್ ಸುದ್ದಿಸಂಸ್ಥೆ ವರದಿ ಮಾಡಿದೆ.

ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರನ್ನು ಉಲ್ಲೇಖಿಸಿರುವ ಕಿಮ್ ಜಾಂಗ್ ಉನ್, ಎರಡೂ ದೇಶಗಳ ನಡುವಣ ಸಂಬಂಧ ಭವಿಷ್ಯದಲ್ಲಿ ಇನ್ನಷ್ಟು ಗಟ್ಟಿಯಾಗಲಿದೆ ಎಂದಿದ್ದಾರೆ.

ಇನ್ನೊಂದೆಡೆ ನಿನ್ನೆ ವಾಷಿಂಗ್ಟನ್ ನಲ್ಲಿ ಹೇಳಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಿಮ್ ಜಾಂಗ್ ಉನ್ ಅವರ ಆರೋಗ್ಯದ ಬಗ್ಗೆ ತಮಗೆ ಚೆನ್ನಾಗಿ ತಿಳಿದಿದ್ದು ಆ ಬಗ್ಗೆ ಈಗ ಹೆಚ್ಚಿಗೆ ಮಾತನಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ನನಗೆ ಕಿಮ್ ಜಾಂಗ್ ಉನ್ ಅವರ ಆರೋಗ್ಯದ ಬಗ್ಗೆ ಚೆನ್ನಾಗಿ ಗೊತ್ತಿದೆ. ಆದರೆ ಈಗ ನಿಖರವಾಗಿ ಹೇಳಲು, ಮಾತನಾಡಲು ಸಾಧ್ಯವಿಲ್ಲ. ಸ್ವಲ್ಪ ದಿನಗಳಲ್ಲಿ ನಿಮಗೇ ಗೊತ್ತಾಗಲಿದೆ. ಅವರಿಗೆ ಒಳ್ಳೆಯದಾಗಲಿ ಎಂದಷ್ಟೇ ನಾನು ಈಗ ಹೇಳಬಲ್ಲೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಕಿಮ್ ಜಾಂಗ್ ಉನ್ ಆರೋಗ್ಯ ತೀವ್ರ ಹದಗೆಟ್ಟಿದೆ ಎಂದು ಖಚಿತಪಡಿಸದ ಸುದ್ದಿಮೂಲಗಳು ಹೇಳುತ್ತಿವೆ. ಈ ಬಗ್ಗೆ ಉತ್ತರ ಕೊರಿಯಾ ಸರ್ಕಾರ ಇದುವರೆಗೆ ಯಾವುದೇ ಮಾಹಿತಿಯನ್ನು ಹೊರಜಗತ್ತಿಗೆ ಬಿಟ್ಟುಕೊಟ್ಟಿಲ್ಲ.

Stay up to date on all the latest ಅಂತಾರಾಷ್ಟ್ರೀಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp