ಕೊರೋನಾ ಮಧ್ಯೆ ಚೀನಾದಲ್ಲಿ ಕಾಣಿಸಿಕೊಂಡಿದೆ ಮತ್ತೊಂದು ಮಾರಣಾಂತಿಕ ವೈರಸ್, 7 ಸಾವು, 60 ಮಂದಿಗೆ ಸೋಂಕು!

ಮಹಾಮಾರಿ ಕೊರೋನಾ ವೈರಸ್ ಅದಾಗಲೇ ಜಗತ್ತನ್ನೇ ನಡುಗಿಸಿದ್ದು ಬರೋಬ್ಬರಿ 7 ಲಕ್ಷ ಮಂದಿಯನ್ನು ಬಲಿ ಪಡೆದಿದೆ. ಇದರ ಮಧ್ಯೆ ಚೀನಾದಲ್ಲಿ ಇದೀಗ ಮತ್ತೊಂದು ಮಾರಣಾಂತಿಕ ವೈರಸ್ ಕಾಣಿಸಿಕೊಂಡಿದ್ದು ಅದಾಗಲೇ 7 ಮಂದಿಯನ್ನು ಬಲಿ ಪಡೆದಿದ್ದು 60 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. 
ಚೀನಾ

ಜಿಯಾಂಗ್ಸು ಮತ್ತು ಅನ್ಹುಯಿ ಪ್ರಾಂತ್ಯಗಳಲ್ಲಿ ಈಗಾಗಲೇ ಈ ವೈರಸ್ ನಿಂದ 7 ಮಂದಿ ಬಲಿಯಾಗಿದ್ದು 60 ಮಂದಿ ಸೋಂಕಿಗೆ ತುತ್ತಾಗಿದ್ದಾರೆ ಎಂದು ಚೀನಾದ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ವರದಿ ಮಡಿದೆ. 

ಈ ವೈರಸ್ ಗೆ ಎಸ್‌ಎಫ್‌ಟಿಎಸ್‌ವಿ(ಸೀವಿಯರ್ ಫೀವರ್ ವಿಥ್ ಥ್ರೋಂಬೊ ಬೊಕ್ಯಾಟೋಪಿನಿಯಾ ಸಿಂಡ್ರೋಮ್ ಬುನಿವೈರಸ್) ಎಂದು ಹೆಸರಿಸಲಾಗಿದೆ. 

ಈ ವೈರಸ್ ಕೀಟಗಳ ಕಡಿತದ ಮೂಲಕ ಮನುಷ್ಯರಿಗೆ ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ವೈರಸ್ ಸಹ ಮಾರಣಾಂತಿಕ ಮಟ್ಟದಲ್ಲಿ ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. 

ಚೀನಾಗೆ ಈ ವೈರಸ್ ಹೊಸದಲ್ಲ. 2011ರಲ್ಲೇ ಈ ವೈರಸ್ ಪತ್ತೆಯಾಗಿತ್ತು. ಆದರೆ ಈ ವೈರಸ್ ನಿಂದ ಸಾವಿನ ಸಂಖ್ಯೆ ಪ್ರಮಾಣ ಕಡಿಮೆ ಎಂದು ವೈದ್ಯರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com