ವಿಶ್ವದ ಮೊದಲ ಕೋವಿಡ್-19 ಲಸಿಕೆ ಬಿಡುಗಡೆಗೆ ರಷ್ಯಾ ಸಜ್ಜು!

ಡಬ್ಲ್ಯುಎಚ್‌ಒ ಸೇರಿದಂತೆ ಹಲವಾರು ಕಡೆಗಳಿಂದ ಸುರಕ್ಷತೆಯ ಬಗೆಗಿನ ಕಾಳಜಿಯ ಹೊರತಾಗಿಯೂ  ಅಕ್ಟೋಬರ್‌ನಲ್ಲಿ ಸಮೂಹ ವ್ಯಾಕ್ಸಿನೇಷನ್ (ಮಾಸ್ ವ್ಯಾಕ್ಸಿನೇಷನ್) ಪ್ರಾರಂಭಕ್ಕೆ ಮುನ್ನ ಈ ವಾರ ವಿಶ್ವದ ಮೊದಲ ಕೋವಿಡ್ -19 ಲಸಿಕೆಯನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ರಷ್ಯಾ ಮುಂದುವರಿಸಿದೆ ಎನ್ನಲಾಗಿದೆ.
ವಿಶ್ವದ ಮೊದಲ ಕೋವಿಡ್-19 ಲಸಿಕೆ ಬಿಡುಗಡೆಗೆ ರಷ್ಯಾ ಸಜ್ಜು!

ಮಾಸ್ಕೋ: ಡಬ್ಲ್ಯುಎಚ್‌ಒ ಸೇರಿದಂತೆ ಹಲವಾರು ಕಡೆಗಳಿಂದ ಸುರಕ್ಷತೆಯ ಬಗೆಗಿನ ಕಾಳಜಿಯ ಹೊರತಾಗಿಯೂ  ಅಕ್ಟೋಬರ್‌ನಲ್ಲಿ ಸಮೂಹ ವ್ಯಾಕ್ಸಿನೇಷನ್ (ಮಾಸ್ ವ್ಯಾಕ್ಸಿನೇಷನ್) ಪ್ರಾರಂಭಕ್ಕೆ ಮುನ್ನ ಈ ವಾರ ವಿಶ್ವದ ಮೊದಲ ಕೋವಿಡ್ -19 ಲಸಿಕೆಯನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ರಷ್ಯಾ ಮುಂದುವರಿಸಿದೆ ಎನ್ನಲಾಗಿದೆ.

ರಷ್ಯಾದ ಉಪ ಆರೋಗ್ಯ ಸಚಿವ ಒಲೆಗ್ ಗ್ರಿಡ್ನೆವ್ ಅವರು ಆಗಸ್ಟ್ 12 ರಂದು ಕೋವಿಡ್ -19 ಲಸಿಕೆ ನೊಂದಾವಣೆ ಯೋಜನೆಯನ್ನು ಹೊಂದಿದ್ದಾಗಿ ಹೇಳಿದ್ದಾರೆ. ಕೋವಿಡ್ ನಿಂದ ಅತಿ ಹೆಚ್ಚು ಪೀಡಿತವಾದ ಜಗತ್ತಿನ ನಾಲ್ಕನೇ ರಾಷ್ಟ್ರ ರಷ್ಯಾ ಆಗಿದ್ದು ಯುಎಸ್, ಬ್ರೆಜಿಲ್ ಮತ್ತು ಭಾರತದ ನಂತರದ ಸ್ಥಾನದಲ್ಲಿದೆ, 

ಈ ವಾರ ದೇಶವು ವಿಶ್ವದ ಮೊದಕ ಕೋವಿಡ್ ಲಸಿಕೆ ಬಿಡುಗಡೆಯನ್ನು ಗಮಲೇಯ ಸಂಶೋಧನಾ ಸಂಸ್ಥೆ ಮತ್ತು ರಷ್ಯಾದ ರಕ್ಷಣಾ ಸಚಿವಾಲಯ ಜಂಟಿಯಾಗಿ ನೆರವೇರಿಸಲಿದೆ ಎಂದು  ಒಲೆಗ್ ಗ್ರಿಡ್ನೆವ್ ಹೇಳಿರುವುದಾಗಿ ಸ್ಪುಟ್ನಿಕ್ ಸುದ್ದಿ ಸಂಸ್ಥೆ ವರದಿ ಮಾಡಿದೆ.  ಆಗಸ್ಟ್ 3 ರಂದು, ಲಸಿಕೆಯ ಕ್ಲಿನಿಕಲ್ ಪ್ರಯೋಗಗಳಲ್ಲಿ ಭಾಗವಹಿಸುವವರ "ಅಂತಿಮ ವೈದ್ಯಕೀಯ ಪರೀಕ್ಷೆ" ಬರ್ಡೆಂಕೊ ಮುಖ್ಯ ಮಿಲಿಟರಿ ಕ್ಲಿನಿಕಲ್ ಆಸ್ಪತ್ರೆಯಲ್ಲಿ ನಡೆಯಿತು ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ವ್ಯಾಕ್ಸಿನೇಷನ್‌ನಿಂದಾಗಿ ಎಲ್ಲಾ ಸ್ವಯಂಸೇವಕರು ಸ್ಪಷ್ಟ ರೋಗನಿರೋಧಕ ಪ್ರತಿಕ್ರಿಯೆಯನ್ನು ಹೊಂದಿದ್ದಾರೆಂದು ಫಲಿತಾಂಶಗಳು ಸ್ಪಷ್ಟವಾಗಿ ಬಂದಿದೆ, ಸ್ವಯಂಸೇವಕರ ಕೆಲಸದಲ್ಲಿ ಯಾವುದೇ ಅಡ್ಡಪರಿಣಾಮಗಳು ಅಥವಾ ಅಸಹಜತೆ ಕಾಣಿಸಿಲ್ಲ ಎಂದು ಸಚಿವಾಲಯ ಹೇಳಿದೆ.

ಆದರೆ ಈ ಲಸಿಕೆ ನಿರ್ಣಾಯಕ ಮೂರನೇ ಹಂತದ ಪ್ರಯೋಗವನ್ನು ತಲುಪಿದ ಆರು ಲಸಿಕೆಗಳ ಪಟ್ಟಿಯಲ್ಲಿಲ್ಲ್  ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಈ ಕ್ಯಾಲೆಂಡರ್ ವರ್ಷದಲ್ಲಿ ಮಾರುಕಟ್ಟೆಗೆ ಬರುವ ಯಾವುದೇ ಲಸಿಕೆ ಬಗೆಗೆ  ಡಬ್ಲ್ಯುಎಚ್‌ಒ ಆರೋಗ್ಯ ತುರ್ತು ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕ ಮೈಕೆಲ್ ರಯಾನ್, ಮಾತನಾಡಿ "ನಾವು ಇನ್ನಷ್ಟು ಜಾಗರೂಕರಾಗಿರಬೇಕು" ಎಂದು ಹೇಳಿದ್ದಾರೆ. "ನಾವು ಆ ಲಸಿಕೆ ಉತ್ಪಾದನೆಗೆ ತೊಡಗಲು ಮತ್ತು ಅದನ್ನು ಮಾನವರಿಗೆ ಒದಗಿಸಲು ನಮಗೆ ಇನ್ನೂ ಆ "ಸಂಕೇತ" ಸಿಕ್ಕಿಲ್ಲ. ಆದರೆ ಲಸಿಕೆ ಹಾಕಿಸಿಕೊಂಡವರ ಸಂಖ್ಯೆ ಹೆಚ್ಚಳವಾದಾಗ ವು ಇನ್ನೂ ಜಾಗರೂಕರಾಗಿರಬೇಕು"  ಅವರು ಹೇಳಿದ್ದಾರೆ.

"ಅಡ್ಡಪರಿಣಾಮದ ಬಗೆಗೆ ನಾವು ಸಾಕಷ್ಟು ಜನರಿಗೆ ಆ ಲಸಿಕೆ ನೀಡಿದಾಗಷ್ಟೇ ಸ್ಪಷ್ಟವಾಗಲಿದೆ, ಆದ್ದರಿಂದ ನಾವು ಜನಸಂಖ್ಯಾ ಆಧಾರದಲ್ಲಿ ಲಸಿಕೆ ನೀಡಲು ಪ್ರಾರಂಭಿಸಿದಾಗಲೂ ಮಾನಿಟರಿಂಗ್ ಹಂತದ ಅವಶ್ಯಕತೆಯಿದೆ" ಎಂದು ಅವರು ಹೇಳಿದರು.ಡಬ್ಲ್ಯುಎಚ್‌ಒ ಪ್ರಕಾರ 3 ನೇ ಹಂತವನ್ನು ತಲುಪಿದ ಆರು ಕೋವಿಡ್ -19 ಲಸಿಕೆ ಪೈಕಿ , ಮೂರು ಚೀನಾ ಇನ್ನಿತರೆ ಮೂರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ, ಮೊಡೆರ್ನಾ ನಿಂದ ಅಭಿವೃದ್ದಿ ಪಡಿಸಲಾಗಿದೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com