ಚೀನಾ, ಪಾಕಿಸ್ತಾನ ಉತ್ತಮ ಸಹೋದರರು: ಕ್ಸಿ- ಜಿನ್ ಪಿಂಗ್ 

ಚೀನಾ ಮತ್ತು ಪಾಕಿಸ್ತಾನ ಅತ್ಯುತ್ತಮ ಸಹೋದರರು ಎಂದು ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಬಣ್ಣಿಸಿದ್ದಾರೆ.ಉಭಯ ರಾಷ್ಟ್ರಗಳು ವಿಶೇಷ ಸ್ನೇಹವನ್ನು ಹಂಚಿಕೊಳ್ಳುವ ಪಾಲುದಾರರು ಎಂಬುದಾಗಿ ಚೀನಾದ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಚೀನಾ ಅಧ್ಯಕ್ಷ  ಕ್ಸಿ- ಜಿನ್ ಪಿಂಗ್ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.
ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್
ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್

ಹೈನಾನ್: ಚೀನಾ ಮತ್ತು ಪಾಕಿಸ್ತಾನ ಅತ್ಯುತ್ತಮ ಸಹೋದರರು ಎಂದು ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಬಣ್ಣಿಸಿದ್ದಾರೆ. ಉಭಯ ರಾಷ್ಟ್ರಗಳು ವಿಶೇಷ ಸ್ನೇಹವನ್ನು ಹಂಚಿಕೊಳ್ಳುವ ಪಾಲುದಾರರು ಎಂಬುದಾಗಿ ಚೀನಾದ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಚೀನಾ ಅಧ್ಯಕ್ಷ  ಕ್ಸಿ- ಜಿನ್ ಪಿಂಗ್ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ಚೀನಾದ ದ್ವೀಪ ಪ್ರದೇಶ ಹೈನಾನ್ ನಲ್ಲಿನ ರೆಸಾರ್ಟ್ ನಲ್ಲಿ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ನಡುವಿನ ಎರಡು ದಿನಗಳ  2ನೇ ಕಾರ್ಯತಂತ್ರ ಮಾತುಕತೆ ಇಂದು ಮುಕ್ತಾಯಗೊಳ್ಳುತ್ತಿದ್ದಂತೆ ಕ್ಸಿ- ಜಿನ್ ಪಿಂಗ್ ಪಾಕಿಸ್ತಾನ ಅಧ್ಯಕ್ಷ ಅರಿಫ್ ಅಲ್ವಿಗೆ ಈ ರೀತಿಯ ಸಂದೇಶ ಕಳುಹಿಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

 ಉಭಯ ರಾಷ್ಟ್ರಗಳು ಆಗಾಗ್ಗೆ ಸ್ನೇಹಮಯ ಸಮಾಲೋಚನೆ ಮತ್ತು ನಿರಂತರ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವುದರಿಂದ ಸಿಪಿಇಸಿ (ಚೀನಾ- ಪಾಕಿಸ್ತಾನ ಆರ್ಥಿಕ ಕಾರಿಡಾರ್)ನಿರ್ಮಾಣ ಮತ್ತು ಉತ್ತಮ ಗುಣಮಟ್ಟದ ಬೆಲ್ಟ್ ಮತ್ತು ರಸ್ತೆ ನಿರ್ಮಾಣವಾಗಲಿದೆ ಎಂದು ಕ್ಸಿ- ಜಿನ್ ಪಿಂಗ್ ತಿಳಿಸಿದ್ದಾರೆ.

ಚೀನಾ- ಪಾಕಿಸ್ತಾನ ಆರ್ಥಿಕ ಕಾರಿಡಾರ್ ಬೆಲ್ಚ್ ಮತ್ತು ರಸ್ತೆ ನಿರ್ಮಾಣದಲ್ಲಿ ಮೈಲುಗಲ್ಲು ಯೋಜನೆಯಾಗಲಿದೆ ಎಂದು ಹೇಳಿರುವ ಕ್ಸಿ- ಜಿನ್ ಪಿಂಗ್,ಉಭಯ ರಾಷ್ಟ್ರಗಳ ನಡುವೆ ಸಹಕಾರದ ಪಾಲುದಾರಿಕೆ ಹಾಗೂ ಆಳವಾದ ಅಭಿವೃದ್ಧಿ ಉತ್ತೇಜಿಸಲು ಇದು ಬಹಳ ಮಹತ್ವದ್ದಾಗಿದೆ ಎಂದು ಅವರು ಹೇಳಿದ್ದಾರೆ.ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೂಲಕ ಹಾದುಹೋಗುವ ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ ಗೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com