12 ವರ್ಷ ಮತ್ತು ಮೇಲ್ಪಟ್ಟ ಮಕ್ಕಳು ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು; ವಿಶ್ವ ಆರೋಗ್ಯ ಸಂಸ್ಥೆ ಹೊಸ ಮಾರ್ಗಸೂಚಿ

ವಿಶ್ವದ ಎಲ್ಲಾ ದೇಶಗಳ 12 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ವಯಸ್ಸಿನ ಮಕ್ಕಳು ತಮ್ಮ ಪೋಷಕರ ನೆರವಿನಿಂದ ಮಾಸ್ಕ್‌ಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಮಾಸ್ಕ್ ಧರಿಸಿರುವ ಮಕ್ಕಳು
ಮಾಸ್ಕ್ ಧರಿಸಿರುವ ಮಕ್ಕಳು

ಜಿನೆವಾ: ವಿಶ್ವದ ಎಲ್ಲಾ ದೇಶಗಳ 12 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ವಯಸ್ಸಿನ ಮಕ್ಕಳು ತಮ್ಮ ಪೋಷಕರ ನೆರವಿನಿಂದ ಮಾಸ್ಕ್‌ಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಜಗತ್ತಿನ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಮಾರ್ಗಸೂಚಿ ಬಿಡುಗಡೆ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದಿನ ನಿಯಮಗಳ ಜೊತೆ ಇದೀಗ ಹೊಸ ನಿಯಮವೊಂದನ್ನು ಸೇರಿಸಿದೆ.  ಅದರಂತೆ ವಿಶ್ವದ ಎಲ್ಲಾ ದೇಶಗಳ 12 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ವಯಸ್ಸಿನ ಮಕ್ಕಳು ತಮ್ಮ ಪೋಷಕರ ನೆರವಿನಿಂದ ಮಾಸ್ಕ್‌ಗಳನ್ನು ಕಡ್ಡಾಯವಾಗಿ ಧರಿಸಬೇಕು ಹೇಳಲಾಗಿದೆ. 

ಮಕ್ಕಳು ಸೋಂಕನ್ನು ಹೇಗೆ ಹರಡಿಸುತ್ತಾರೆ ಎಂಬುದರ ಕುರಿತು ಸ್ಪಷ್ಟ ಮಾಹಿತಿಯಿಲ್ಲವಾದರೂ, ಅಪ್ರಾಪ್ತರು ಇತರ ವಯಸ್ಕರಂತೆಯೇ ಸೋಂಕು ಹರಡಿಸಬಲ್ಲರು ಎಂದು WHO ಹೇಳಿದೆ. ಐದು ವರ್ಷ ಮತ್ತು ಅದಕ್ಕಿಂತ ಸಣ್ಣ ವಯಸ್ಸಿನ ಮಕ್ಕಳು ಮಾಸ್ಕ್ ಧರಿಸಬೇಕಿಲ್ಲ ಎಂದು ಅದು ಹೇಳಿದೆ.

ಇಲ್ಲಿಯವರೆಗೆ ವಿಶ್ವದಲ್ಲಿ 8 ಲಕ್ಷ ಜನರು ಕೋವಿಡ್‌-19ಗೆ ಬಲಿಯಾಗಿದ್ದು, ಕನಿಷ್ಠ 23 ಮಿಲಿಯನ್‌ ಪ್ರಕರಣಗಳು ಸೋಂಕಿಗೆ ತುತ್ತಾಗಿದ್ದಾರೆ ಎಂದು ಜಾನ್ಸ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯ ತಿಳಿಸಿದೆ. ಅಮೆರಿಕ, ಬ್ರೆಜಿಲ್‌ ಮತ್ತು ಭಾರತದಲ್ಲಿ ಅತಿ ಹೆಚ್ಚು ಪ್ರಕರಣ ವರದಿಯಾಗಿವೆ.

ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಸಾಂಕ್ರಾಮಿಕ ರೋಗವು ಎರಡು ವರ್ಷಗಳಲ್ಲಿ ಮುಗಿಯುತ್ತದೆ ಎಂದು ಆಶಿಸಿದ್ದಾರೆ. ಆದರೆ ಬ್ರಿಟನ್‌ನ ಉನ್ನತ ವೈಜ್ಞಾನಿಕ ಸಲಹೆಗಾರರು ಕೋವಿಡ್ -19 ಅನ್ನು ಎಂದಿಗೂ ನಿರ್ಮೂಲನೆ ಮಾಡಲಾಗುವುದಿಲ್ಲ. ಜನರಿಗೆ ನಿಯಮಿತವಾಗಿ ಲಸಿಕೆ  ಅಗತ್ಯವಿರುತ್ತದೆ ಎಂದು ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com