2000-2019ರ ಅವಧಿಯಲ್ಲಿ ಭಾರತದಲ್ಲಿ ಮಲೇರಿಯಾ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಕೆ: ವಿಶ್ವ ಆರೋಗ್ಯ ಸಂಸ್ಥೆ

2000-2019ರ ಅವಧಿಯಲ್ಲಿ ಭಾರತದಲ್ಲಿ ಮಲೇರಿಯಾ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಶ್ಲಾಘಿಸಿದೆ.

Published: 01st December 2020 11:43 AM  |   Last Updated: 01st December 2020 12:07 PM   |  A+A-


tedros adhanom ghebreyesus

ಟೆಡ್ರೋಸ್ ಅಧನೋಮ್ ಗೇಬ್ರಿಯಾಸಿಸ್

Posted By : Srinivasamurthy VN
Source : PTI

ವಿಶ್ವಸಂಸ್ಥೆ: 2000-2019ರ ಅವಧಿಯಲ್ಲಿ ಭಾರತದಲ್ಲಿ ಮಲೇರಿಯಾ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಶ್ಲಾಘಿಸಿದೆ.

ವಿಶ್ವ ಸಂಸ್ಥೆ ಬಿಡುಗಡೆ ಮಾಡಿರುವ 'ವಿಶ್ವ ಮಲೇರಿಯಾ ವರದಿ–2020' ವರದಿಯ ಅನ್ವಯ, 'ಮಲೇರಿಯಾ ರೋಗದ ವಿರುದ್ಧದ ಹೋರಾಟದಲ್ಲಿ ಭಾರತ ಉತ್ತಮ ಪ್ರಗತಿ ಸಾಧಿಸಿದ್ದು, ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲೇ ಅತಿ ಕಡಿಮೆ ಪ್ರಕರಣಗಳನ್ನು ಹೊಂದಿದ ರಾಷ್ಟ್ರವಾಗಿದೆ.  2000ನೇ  ಇಸವಿಯಲ್ಲಿ ಭಾರತದಲ್ಲಿ 2 ಕೋಟಿಯಷ್ಟಿದ್ದ ಮಲೇರಿಯಾ ಪ್ರಕರಣಗಳು, ಕಳೆದ ವರ್ಷ 5.6 ಲಕ್ಷಕ್ಕೆ ಇಳಿದಿತ್ತು. ಅಂತೆಯೇ 409,000 ಜೀವಗಳು ಬಲಿಯಾಗಿದ್ದವು, 2018 ರಲ್ಲಿ 411,000 ಮಂದಿ ಮಲೇರಿಯಾಗೆ ಸಾವನ್ನಪ್ಪಿದ್ದರು ಎಂದು ಹೇಳಿದೆ. 

ಮಲೇರಿಯಾಗೆ ಕಾಂಗೋ, ಘಾನಾ, ಭಾರತ, ಮಾಲಿ, ಮೊಜಾಂಬಿಕ್, ನೈಜರ್, ನೈಜೀರಿಯಾ, ಉಗಾಂಡಾ ಮತ್ತು ಟಾಂಜೇನಿಯಾದಲ್ಲಿ ಹೆಚ್ಚು ಸಾವು ಸಂಭವಿಸಿದೆ.

ಈ ವರದಿ ಪ್ರಕಾರ 2019ರಲ್ಲಿ ವಿಶ್ವದಾದ್ಯಂತ ಸುಮಾರು 22 ಕೋಟಿ ಮಲೇರಿಯಾ ಪ್ರಕರಣಗಳು ವರದಿಯಾಗಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ವಾರ್ಷಿಕವಾಗಿ ಈ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಕಳೆದ ವರ್ಷ, ಈ ರೋಗದಿಂದ 4.09 ಲಕ್ಷ ಹಾಗೂ 2018ರಲ್ಲಿ 4.11 ಲಕ್ಷ ಮಂದಿ  ಸಾವನ್ನಪ್ಪಿದ್ದರು. ಆಗ್ನೇಯ ಏಷ್ಯಾದ ರಾಷ್ಟ್ರಗಳು ಮಲೇರಿಯಾ ರೋಗ ನಿಯಂತ್ರಣದಲ್ಲಿ ಉತ್ತಮ ಪ್ರಗತಿ ಸಾಧಿಸಿವೆ. ಸಾವಿನ ಪ್ರಕರಣಗಳು ಶೇ 73 ರಿಂದ ಶೇ 74ರಷ್ಟು ಕಡಿಮೆಯಾಗಿವೆ ಎಂದು ಹೇಳಲಾಗಿದೆ.

ಜಾಗತಿಕ ಮಟ್ಟದಲ್ಲಿ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಶೇ 3ರಷ್ಟು ಮಲೇರಿಯಾ ಪ್ರಕರಣಗಳಿವೆ ಎಂದು ವರದಿ ಹೇಳಿದೆ. ಕಳೆದ 2 ವರ್ಷಗಳಲ್ಲಿ ಮಲೇರಿಯಾ ವಿರುದ್ಧದ ಹೋರಾಟದಲ್ಲಿ ಭಾರತವು ಸಾಧಿಸಿರುವ ಪ್ರಗತಿಯನ್ನು ಡಬ್ಲ್ಯುಎಚ್‌ಒ ಗಮನಿಸಿದೆ. ಭಾರತದಲ್ಲಿ 2000– 2019 ರ  ನಡುವೆ ಮಲೇರಿಯಾದಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲೂ ಇಳಿಮುಖವಾಗಿದೆ. 2000 ರಲ್ಲಿ ಮಲೇರಿಯಾದಿಂದ ಸುಮಾರು 29,500 ಮೃತಪಟ್ಟಿದ್ದರು. ಕಳೆದ ವರ್ಷ ಸುಮಾರು 7700 ಮಂದಿ ಸಾವನ್ನಪ್ಪಿದ್ದಾರೆ ಎಂದು ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಡಾ. ಟೆಡ್ರೊಸ್  ಅಧಾನೊಮ್ ಘೆಬ್ರೆಯೆಸಸ್ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
 

Stay up to date on all the latest ಅಂತಾರಾಷ್ಟ್ರೀಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp