ಟ್ರಂಪ್ ಸೋಲಿನ ಬೆನ್ನಲ್ಲೇ ಭಾರತೀಯ ಟೆಕ್ಕಿಗಳಿಗೆ ಗುಡ್ ನ್ಯೂಸ್: ಎಚ್1ಬಿ ವೀಸಾ ನಿಯಮ ಬದಲಾವಣೆ ರದ್ದು!
ಡೊನಾಲ್ಡ್ ಟ್ರಂಪ್ ಆಡಳಿತಾವಧಿಯಲ್ಲಿ ಹೊರಡಿಸಿದ್ದ ವೀಸಾ ಸಂಖ್ಯೆ ನಿರ್ಬಂಧ ಆದೇಶವನ್ನು ಕ್ಯಾಲಿಫೋರ್ನಿಯಾ ಜಿಲ್ಲಾ ನ್ಯಾಯಾಲಯ ರದ್ದುಪಡಿಸಿ ಆದೇಶ ಹೊರಡಿಸಿದೆ.
Published: 03rd December 2020 03:04 PM | Last Updated: 03rd December 2020 04:04 PM | A+A A-

ಟ್ರಂಪ್
ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಆಡಳಿತಾವಧಿಯಲ್ಲಿ ಹೊರಡಿಸಿದ್ದ ವೀಸಾ ಸಂಖ್ಯೆ ನಿರ್ಬಂಧ ಆದೇಶವನ್ನು ಕ್ಯಾಲಿಫೋರ್ನಿಯಾ ಜಿಲ್ಲಾ ನ್ಯಾಯಾಲಯ ರದ್ದುಪಡಿಸಿ ಆದೇಶ ಹೊರಡಿಸಿದೆ.
ಡೊನಾಲ್ಡ್ ಟ್ರಂಪ್ ಅವರು ವಿದೇಶಿ ನೌಕರರಿಗೆ ಪ್ರತಿವರ್ಷ ಮಂಜೂರು ಮಾಡುವ ವೀಸಾ ಸಂಖ್ಯೆಯನ್ನು ನಿರ್ಬಂಧಿಸಿದ್ದರು. ಕಳೆದ ಅಕ್ಟೋಬರ್ ನಲ್ಲಿ ವೀಸಾಕ್ಕೆ ಅರ್ಜಿ ಸಲ್ಲಿಸುವ ನಿಯಮವನ್ನು ಬದಲಾಯಿಸಲಾಗಿತ್ತು. ಅಮೆರಿಕಾಕ್ಕೆ ವಿದೇಶೀಯು ಉದ್ಯೋಗ ಮಾಡಲು ತೆರಳುವುದಕ್ಕೆ ಅಲ್ಲಿನ ಸರ್ಕಾರ ನೀಡುವ ತಾತ್ಕಾಲಿಕ ನೌಕರಿ ವೀಸಾ ಇದಾಗಿದ್ದು ಇದರಿಂದಾಗಿ ಭಾರತೀಯ ಟೆಕ್ಕಿಗಳು ಸಂಕಷ್ಟಕ್ಕೆ ಸಿಲುಕ್ಕಿದ್ದರು.
ವಲಸಿಗರನ್ನು ತಡೆಯುವ ಸಲುವಾಗಿ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಟ್ರಂಪ್ ಆಡಳಿತ ಹೊಸ ನಿಯಮ ಪ್ರಕಟಿಸಿತ್ತು. ಇದನ್ನು ಪ್ರಶ್ನಿಸಿ ಕೋರ್ಟ್ ಕದ ತಟ್ಟಿದ್ದರು. ಇದಕ್ಕೆ ಉತ್ತರಿಸಿದ್ದ ಟ್ರಂಪ್ ಸರ್ಕಾರ ಕೊರೋನಾ ಸೋಂಕು ಹಾವಳಿಯಿಂದ ಉದ್ಯೋಗ ಕಳೆದುಕೊಂಡಿರುವುದರಿಂದ ವಿದೇಶಿ ನೌಕರರ ಸಂಖ್ಯೆಯನ್ನು ಕಡಿಮೆ ಮಾಡುವುದು ಅಗತ್ಯ ಎಂದು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು.