'ಅಮೆರಿಕ ಇತಿಹಾಸದಲ್ಲಿಯೇ ಇದು ಅತಿ ಭ್ರಷ್ಟ ಚುನಾವಣೆ, ನನ್ನ ಹೋರಾಟ ಮುಗಿದಿಲ್ಲ': ಡೊನಾಲ್ಡ್ ಟ್ರಂಪ್ 

ಕಳೆದ ನವೆಂಬರ್ 3ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಪ್ರಶ್ನಿಸಿ ತಮ್ಮ ಹೋರಾಟ ಮುಗಿದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಚುನಾವಣಾ ಫಲಿತಾಂಶದ ಅಧಿಕೃತ ಪ್ರಮಾಣ ಪತ್ರದಲ್ಲಿ ಚುನಾಯಿತ ಅಧ್ಯಕ್ಷ ಜೊ ಬೈಡನ್ ಅವರ ಪರವಾಗಿದ್ದರೂ ಕೂಡ ತಮ್ಮ ಕಾನೂನು ಹೋರಾಟವನ್ನು ಮುಂದುವರಿಸುವುದಾಗಿ ಡೊನಾಲ್ಡ್ ಟ್ರಂಪ್ ಹೇಳುತ್ತಲೇ ಇದ್ದಾರೆ.
ಟ್ರಂಪ್ ನ್ಯಾಶನಲ್ ಗಾಲ್ಫ್ ಕ್ಲಬ್ ನಲ್ಲಿ ನಿನ್ನೆ ಗಾಲ್ಫ್ ಆಡುತ್ತಿದ್ದ ವೇಳೆ ಡೊನಾಲ್ಡ್ ಟ್ರಂಪ್
ಟ್ರಂಪ್ ನ್ಯಾಶನಲ್ ಗಾಲ್ಫ್ ಕ್ಲಬ್ ನಲ್ಲಿ ನಿನ್ನೆ ಗಾಲ್ಫ್ ಆಡುತ್ತಿದ್ದ ವೇಳೆ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಕಳೆದ ನವೆಂಬರ್ 3ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಪ್ರಶ್ನಿಸಿ ತಮ್ಮ ಹೋರಾಟ ಮುಗಿದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಚುನಾವಣಾ ಫಲಿತಾಂಶದ ಅಧಿಕೃತ ಪ್ರಮಾಣ ಪತ್ರದಲ್ಲಿ ಚುನಾಯಿತ ಅಧ್ಯಕ್ಷ ಜೊ ಬೈಡನ್ ಅವರ ಪರವಾಗಿದ್ದರೂ ಕೂಡ ತಮ್ಮ ಕಾನೂನು ಹೋರಾಟವನ್ನು ಮುಂದುವರಿಸುವುದಾಗಿ ಡೊನಾಲ್ಡ್ ಟ್ರಂಪ್ ಹೇಳುತ್ತಲೇ ಇದ್ದಾರೆ.

ಹಲವು ರಾಜ್ಯಗಳಲ್ಲಿ ಎರಡೂ ಪಕ್ಷಗಳಿಗೆ ಮತದಾರರು ಹೆಚ್ಚಿನ ಒಲವು ತೋರಿದ್ದರೂ ಕೂಡ ಟೆಕ್ಸಾಸ್ ರಾಜ್ಯದಲ್ಲಿನ ಫಲಿತಾಂಶದ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿಯನ್ನು ತಿರಸ್ಕರಿಸಿದರೂ ಕೂಡ ತಮ್ಮ ಮುಂದೆ ಕಾನೂನಾತ್ಮಕ ಹೋರಾಟ ನಡೆಸುವ ಇನ್ನಷ್ಟು ಮಾರ್ಗಗಳಿವೆ. ಕಳೆದ ತಿಂಗಳ ಅಧ್ಯಕ್ಷೀಯ ಚುನಾವಣೆ ಮೋಸದಿಂದ ಕೂಡಿತ್ತು ಎಂದು ಆರೋಪಿಸಿದ್ದಾರೆ.

ಜಾರ್ಜಿಯಾ, ಮಿಚಿಗನ್, ಪೆನ್ಸ್ವೇಲ್ಲೇನಿಯಾ ಮತ್ತು ವಿಸ್ಕೊನ್ಸಿನ್ ಸೇರಿದಂತೆ ಕೆಲವು ರಾಜ್ಯಗಳ ಬ್ಯಾಲೆಟ್ ಮತ ಎಣಿಕೆಯನ್ನು ತಡೆಹಿಡಿಯುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರವಾಗಿ ಟೆಕ್ಸಾಸ್ ಅಟಾರ್ನಿ ಜನರಲ್ ಸಲ್ಲಿಸಿದ್ದ ಅರ್ಜಿಯನ್ನು ಮೊನ್ನೆ ಶುಕ್ರವಾರ ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಜೊ ಬೈಡನ್ ಪರವಾಗಿ ತೀರ್ಪು ನೀಡಿದೆ. 

ಆದರೂ ಕೂಡ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಪ್ರತಿಕ್ರಿಯಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಲ್ಲ ನಮ್ಮ ಹೋರಾಟ ಮುಗಿದಿಲ್ಲ. ನಾವು ಮುಂದುವರಿಸುತ್ತೇವೆ, ತಾನು ಚುನಾವಣೆಯಲ್ಲಿ ಪೆನ್ಸಿಲ್ವೇನಿಯಾ, ಮಿಚಿಗನ್ ಮತ್ತು ಜಾರ್ಜಿಯಾಗಳಲ್ಲಿ ಜಯ ಸಾಧಿಸಿದ್ದು, ವಿಸ್ಕಾನ್ಸಿನ್‌ ಪ್ರಕರಣ ಮುಂದುವರಿದಿದೆ ಎಂದಿದ್ದಾರೆ.

ಅಮೆರಿಕ ಇತಿಹಾಸದಲ್ಲಿಯೇ ಇದು ಅತ್ಯಂತ ಭ್ರಷ್ಟ ಚುನಾವಣೆ, ಇಡೀ ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ನಡೆದಿರುವಾಗ ರಾಜ್ಯಗಳು ಮತ್ತು ರಾಜಕೀಯ ನಾಯಕರು ಜೊ ಬೈಡನ್ ಅವರ ಗೆಲುವನ್ನು ಹೇಗೆ ನಿಶ್ಚಯಿಸಲು ಸಾಧ್ಯ ಎಂದು ನಿನ್ನೆ ಡೊನಾಲ್ಡ್ ಟ್ರಂಪ್ ಮತ್ತೆ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com