ಬ್ರಿಟನ್ ನಲ್ಲಿ ಕೊರೋನಾ ವೈರಸ್ ನ ರೂಪಾಂತರ ತಳಿ ಪತ್ತೆ: ಡಬ್ಲ್ಯು ಹೆಚ್ ಒ ಈ ಬಗ್ಗೆ ಏನ್ ಹೇಳತ್ತೆ?

ಕೊರೋನಾ ವೈರಸ್ ಸಮಸ್ಯೆ ಇನ್ನೇನು ಮುಗಿಯಿತು ಎನ್ನುವ ಹಂತದಲ್ಲಿ ಬ್ರಿಟನ್ ನಲ್ಲಿ ರೂಪಾಂತರಗೊಂಡ ಕೊರೋನಾ ವೈರಸ್ ನಿಂದ ಸೋಂಕು ತಗುಲಿರುವ ಪ್ರಕರಣಗಳು ವರದಿಯಾಗಿರುವುದು ಆತಂಕ ಮೂಡಿಸಿದೆ. 
ಬ್ರಿಟನ್ ನಲ್ಲಿ ರೂಪಾಂತರಗೊಂಡ ಕೊರೋನಾ ವೈರಸ್ ಪತ್ತೆ
ಬ್ರಿಟನ್ ನಲ್ಲಿ ರೂಪಾಂತರಗೊಂಡ ಕೊರೋನಾ ವೈರಸ್ ಪತ್ತೆ

ಲಂಡನ್: ಕೊರೋನಾ ವೈರಸ್ ಸಮಸ್ಯೆ ಇನ್ನೇನು ಮುಗಿಯಿತು ಎನ್ನುವ :ಹಂತದಲ್ಲಿ ಬ್ರಿಟನ್ ನಲ್ಲಿ ರೂಪಾಂತರಗೊಂಡ ಕೊರೋನಾ ವೈರಸ್ ನಿಂದ ಸೋಂಕು ತಗುಲಿರುವ ಪ್ರಕರಣಗಳು ವರದಿಯಾಗಿರುವುದು ಆತಂಕ ಮೂಡಿಸಿದೆ. 

ರೂಪಾಂತರಗೊಂಡ ಕೊರೋನಾ ವೈರಸ್ ಸೋಂಕು ಸುಮಾರು 1000 ಕ್ಕೂ ಹೆಚ್ಚು ಜನರಲ್ಲಿ ಕಂಡಬಂದಿದೆ. ಡಬ್ಲ್ಯುಹೆಚ್ ಒ ಈ ವಿಷಯವನ್ನು ಗಮನಿಸುತ್ತಿದ್ದು, ಪ್ರಾಥಮಿಕ ವರದಿಗಳ ಪ್ರಕಾರ, ಈ ಹೊಸ ರೂಪಾಂತರಗೊಂಡ ಕೊರೋನ ವೈರಸ್ ಈಗಾಗಲೇ ಸಿದ್ಧವಾಗಿರುವ ಲಸಿಕೆಯ ಪರಿಣಾಮಕಾರಿತ್ವದ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿಲ್ಲ ಎಂದು ವಿಶ್ಲೇಷಿಸಿದೆ. 

ಬ್ರಿಟನ್ ನ ಆರೋಗ್ಯ ಸಚಿವ ಮಾಟ್ ಹ್ಯಾನ್ಕಾಕ್, ರೂಪಾಂತರಗೊಂಡ ವೈರಸ್ ನ ಪ್ರಕರಣಗಳು ವರದಿಯಾಗಿರುವುದರ ಬಗ್ಗೆ ಸಂಸತ್ ನಲ್ಲಿ ಘೋಷಿಸಿದ್ದಾರೆ. 

" ಡಬ್ಲ್ಯುಹೆಚ್ಒ ತುರ್ತು ಆರೋಗ್ಯ ಯೋಜನೆಗಳ ವಿಭಾಗದ ನಿರ್ದೇಶಕ ಮೈಕ್ ರ್ಯಾನ್ ಈ ಬಗ್ಗೆ ಮಾತನಾಡಿದ್ದು, ಸಂಸ್ಥೆ ಬ್ರಿಟನ್ ನ ಹೊಸ ಪ್ರಕರಣಗಳ ಬಗ್ಗೆ ನಿಗಾ ವಹಿಸುತ್ತಿದೆ. ಹೊಸದಾಗಿ ರೂಪಾಂತರಗೊಂಡಿರುವ ವೈರಾಣು ಈ ಹಿಂದಿನ ಕೊರೋನಾಗಿಂತಲೂ ಗಂಭೀರ ಸ್ವರೂಪದ್ದೇ? ಬೇಗ ಹರಡುತ್ತದೆಯೇ? ಈ ಹೊಸ ಮಾದರಿಯ ಸೋಂ ಈಗಾಗಲೇ ಸಿದ್ಧಪಡಿಸಿರುವ ಲಸಿಕೆಗಳ ಮೇಲೆ ಪಾರಿಣಾಮ ಉಂಟುಮಾಡಲಿದೆಯೇ ಇಲ್ಲವೇ ಎಂಬ ಮುಂತಾದ ಯಾವುದೇ ಪ್ರಶ್ನೆಗಳಿಗೆ ಸಧ್ಯಕ್ಕೆ ಉತ್ತರವಿಲ್ಲ, ಇವುಗಳಿಗೆ ಸಂಬಧಿಸಿದಂತೆ ಸಾಕ್ಷ್ಯ ಸಮೇತವಾಗಿ ಯಾವುದೂ ಸಾಬೀತಾಗಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com