ಜಪಾನ್ ಗೂ ಹಬ್ಬಿದ ಬ್ರಿಟನ್ ನ ರೂಪಾಂತರಿ ಕೊರೋನಾ ವೈರಸ್!

ಬ್ರಿಟನ್ ನಲ್ಲಿ ಕಾಣಿಸಿಕೊಂಡು ವಿಶ್ವಾದ್ಯಂತ ಭೀತಿ ಸೃಷ್ಟಿಸಿರುವ ರೂಪಾಂತರಿತ ಕೊರೋನಾ ವೈರಸ್ ಇದೀಗ ಜಪಾನ್ ಗೂ ಕಾಲಿಟ್ಟಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಟೋಕಿಯೋ: ಬ್ರಿಟನ್ ನಲ್ಲಿ ಕಾಣಿಸಿಕೊಂಡು ವಿಶ್ವಾದ್ಯಂತ ಭೀತಿ ಸೃಷ್ಟಿಸಿರುವ ರೂಪಾಂತರಿತ ಕೊರೋನಾ ವೈರಸ್ ಇದೀಗ ಜಪಾನ್ ಗೂ ಕಾಲಿಟ್ಟಿದೆ.

ಜಪಾನ್ ಸರ್ಕಾರ ಶುಕ್ರವಾರ ಇಂತಹ ಮೊದಲ ಪ್ರಕರಣವನ್ನು ವರದಿ ಮಾಡಿದ್ದು, ಡಿಸೆಂಬರ್ 18ರಿಂದ 21ರವರೆಗೆ ಬ್ರಿಟನ್ ನಿಂದ ಜಪಾನ್ ಗೆ ಬಂದ ಐದ ಮಂದಿಯಲ್ಲಿ ಇದೀಗ ಸೋಂಕು ಕಾಣಿಸಿಕೊಂಡಿದೆ.

ಜಪಾನ್ ಸರ್ಕಾರ ವಿಮಾನ ನಿಲ್ದಾಣದಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮುನ್ನಲೇ ಅವರು ಆಗಮಿಸಿದ್ದರಿಂದ ಹೊಸ ವಿಧಾನದ ಸೋಂಕು ಪತ್ತೆಯಾಗಿರಲಿಲ್ಲ. ಇದೀಗ ಆ ಐದು ಮಂದಿಯ ಪೈಕಿ ಓರ್ವರಲ್ಲಿ ಆಯಾಸ, ಜ್ವರ ಮತ್ತು ಶೀಥದ ಲಕ್ಷಣ ಕಾಣಿಸಿಕೊಂಡಿದ್ದು, ಅವರನ್ನು ಪರೀಕ್ಷಿಸಿದಾಗ ಅವರಲ್ಲಿ  ಕೊರೋನಾ ರೂಪಾಂತರಿತ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ. ಅಂತೆಯೇ ಅವರೊಟ್ಟಿಗೆ ಜಪಾನ್ ಗೆ ಬಂದ ಇತರೆ ನಾಲ್ವರಲ್ಲೂ ಸೋಂಕು ಪತ್ತೆಯಾಗಿದ್ದು, ಈ ನಾಲ್ವರೂ ರೋಗ ಲಕ್ಷಣ ರಹಿತರಾಗಿದ್ದಾರೆ ಎಂದು ಸರ್ಕಾರ ಹೇಳಿದೆ. 

ಈ ಬಗ್ಗೆ ಮಾಹಿತಿ ನೀಡಿರುವ ಜಪಾನ್ ಆರೋಗ್ಯ ಸಚಿವ ನೊರಿಹಿಸಾ ತಮುರಾ ಅವರು, ಎಲ್ಲ ಐದೂ ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, ಅವರ ಸಂಪರ್ಕದ ಮಾಹಿತಿ ಪಡೆಯಲಾಗುತ್ತಿದೆ. ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗುತ್ತಿದ್ದು, ಪ್ರಮುಖವಾಗಿ ವಿಮಾನ ನಿಲ್ದಾಣಗಳಲ್ಲಿನ ಸೋಂಕು ಪರೀಕ್ಷಾ  ವಿಧಾನವನ್ನು ಶೀಘ್ರಗೊಳಿಸಲಾಗುತ್ತಿದೆ. ಅಲ್ಲದೆ ವೇಗವಾಗಿ ವರದಿ ಕೈಸೇರುವ ಸಲುವಾಗಿ ಸಾಂಕ್ರಾಮಿಕ ರೋಗಗಳ ರಾಷ್ಟ್ರೀಯ ಸಂಸ್ಥೆ ನಿರತಂರವಾಗಿ ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com