ಯುಕೆ ಯುರೋಪಿಯನ್ ಒಕ್ಕೂಟ ತೊರೆದ ಬಳಿಕ ಮತ್ತೆ ಕಾಮನ್ ವೆಲ್ತ್ ಸೇರಿದ ಮಾಲ್ಡೀವ್ಸ್ 

ಯುನೈಟೆಡ್ ಕಿಂಗ್ ಡಮ್ 47 ವರ್ಷಗಳ ನಂತರ ಯುರೋಪಿಯನ್ ಒಕ್ಕೂಟ ತೊರೆದಿದೆ. ಇದಾದ ಕೆಲ ಗಂಟೆಯೊಳಗೆ ದ್ವೀಪರಾಷ್ಟ್ರ ಮಾಲ್ಡೀವ್ಸ್ ಮೂರು ವರ್ಷಗಳ ಬಳಿಕ ಮತ್ತೆ ಕಾಮನ್ ವೆಲ್ತ್ ನ್ನು ಅಧಿಕೃತವಾಗಿ ಸೇರ್ಪಡೆಯಾಯಿತು.
ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹೀಂ ಮೊಹಮ್ಮದ್ ಸೊಲಿ
ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹೀಂ ಮೊಹಮ್ಮದ್ ಸೊಲಿ

ಲಂಡನ್: ಯುನೈಟೆಡ್ ಕಿಂಗ್ ಡಮ್ 47 ವರ್ಷಗಳ ನಂತರ ಯುರೋಪಿಯನ್ ಒಕ್ಕೂಟ ತೊರೆದಿದೆ. ಇದಾದ ಕೆಲ ಗಂಟೆಯೊಳಗೆ ದ್ವೀಪರಾಷ್ಟ್ರ ಮಾಲ್ಡೀವ್ಸ್ ಮೂರು ವರ್ಷಗಳ ಬಳಿಕ ಮತ್ತೆ ಕಾಮನ್ ವೆಲ್ತ್ ನ್ನು ಅಧಿಕೃತವಾಗಿ ಸೇರ್ಪಡೆಯಾಯಿತು.

ಮಾನವ ಹಕ್ಕುಗಳ ದಾಖಲೆ ಮತ್ತು ಪ್ರಜಾಪ್ರಭುತ್ವ ಸುಧಾರಣೆಯ ಪ್ರಗತಿಯ ಕೊರತೆಯಿಂದಾಗಿ ಅಮಾನತುಗೊಳಿಸುವ ಬೆದರಿಕೆ ಹಾಕಿದ ನಂತರ 2016 ರ ಅಕ್ಟೋಬರ್‌ನಲ್ಲಿ ಕಾಮನ್‌ವೆಲ್ತ್‌ನಿಂದ ಮಾಲ್ಡೀವ್ಸ್ ಹೊರಬಂದಿತ್ತು.

2018 ಡಿಸೆಂಬರ್ ನಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿ  ಕಾಮನ್ ವೆಲ್ತ್  ಪ್ರಧಾನ ಕಾರ್ಯದರ್ಶಿ ಪೆಟ್ರೀಷಿಯಾ ಸ್ಕಾಟ್ಲೆಂಡ್‌ಗೆ ಪತ್ರ ಬರೆದು ಮತ್ತೆ ಕಾಮನ್ ವೆಲ್ತ್ ಗೆ ಸೇರ್ಪಡೆಯಾಗಲು ವಿನಂತಿ ಮಾಡಿಕೊಂಡಿದ್ದರು. 

ಮಾಲ್ಡೀವ್ಸ್ ಅನ್ನು ಕುಟುಂಬದ ಸದಸ್ಯರೆಂದು ಪರಿಗಣಿಸಲು ಮತ್ತೊಮ್ಮೆ ಸಂತೋಷವಾಗಿದೆ. ಮಾಲ್ಡೀವ್ಸ್  ಮಹತ್ವಾಕಾಂಕ್ಷೆಗಳನ್ನು ಸಾಕಾರಗೊಳಿಸಲು ನಾವು ಒಟ್ಟಾಗಿ ಬೆಂಬಲಿಸುತ್ತೇವೆ ಎಂದು ಕಾಮನ್ ವೆಲ್ತ್ ಪ್ರಧಾನ ಕಾರ್ಯದರ್ಶಿ ಬಾರೊನೆಸ್ ಸ್ಕಾಟ್ಲೆಂಡ್ ಹೇಳಿದ್ದಾರೆ. 

ಕಾಮನ್ ವೆಲ್ತ್ ಗೆ ಮಾಲ್ಡೀವ್ಸ್ ಮರುಸೇರ್ಪಡೆಯಾಗಲು ಬೆಂಬಲಿಸಿದ ರಾಷ್ಟ್ರಗಳಲ್ಲಿ ಭಾರತ ಕೂಡಾ ಒಂದಾಗಿದೆ. ಮಾಲ್ಡೀವ್ಸ್ ಮತ್ತೆ ಕಾಮನ್ ವೆಲ್ತ್ ಗೆ ಸೇರಿರುವುದಕ್ಕೆ ಸಂತೋಷವಾಗಿದೆ. ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ಉತ್ತಮ ಆಡಳಿತ, ಬಹುಪಕ್ಷೀಯತೆ ಮತ್ತು ವಿಶ್ವ ಶಾಂತಿಯ ಪ್ರಚಾರದ ಕಾಮನ್‌ವೆಲ್ತ್‌ನ ಮೂಲಭೂತ ಮೌಲ್ಯಗಳು ಎಂದಿಗಿಂತಲೂ ಹೆಚ್ಚು ನಮಗೆ ಪ್ರಸ್ತುತವಾಗಿವೆ ಎಂದು ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿ ಹೇಳಿದ್ದಾರೆ.

ಕಾಮನ್ ವೆಲ್ತ್ 54 ಸದಸ್ಯ ರಾಷ್ಟ್ರಗಳ ರಾಜಕೀಯ ಸಂಘವಾಗಿದೆ ಇವೆಲ್ಲವೂ ಬ್ರಿಟಿಷ್ ಸಾಮ್ರಾಜ್ಯಕ್ಕೊಳಪಟ್ಟಿದ್ದ ಹಿಂದಿನ ರಾಷ್ಟ್ರಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com