ಸೇನಾ ದಂಡನಾಯಕ ಖಾಸಿಮ್‌ ಸುಲೇಮಾನಿ ಪಾರ್ಥಿವ ಶರೀರದೆದುರು ಕಣ್ಣೀರಿಟ್ಟ ಇರಾನ್ ಸರ್ವೋಚ್ಛ ನಾಯಕ! 

ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ ಸೇನಾ ದಂಡನಾಯಕ ಖಾಸಿಮ್ ಸುಲೇಮಾನಿ ಮೃತಪಟ್ಟ ನಂತರ ಇರಾನ್ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಿದೆ. ಈ ನಡುವೆ ಮೃತಪಟ್ಟ ಸುಲೇಮಾನಿ ಪಾರ್ಥಿವ ಶರೀರಕ್ಕೆ ಅಲ್ಲಿನ ನಾಯಕರು ಅಂತಿಮ ನಮನ ಸಲ್ಲಿಸಿದ್ದಾರೆ. 
ಸೇನಾ ದಂಡನಾಯಕ ಖಾಸಿಮ್‌ ಸುಲೇಮಾನಿ ಪಾರ್ಥಿವ ಶರೀರದೆದುರು ಕಣ್ಣೀರಿಟ್ಟ ಇರಾನ್ ಸರ್ವೋಚ್ಛ ನಾಯಕ!
ಸೇನಾ ದಂಡನಾಯಕ ಖಾಸಿಮ್‌ ಸುಲೇಮಾನಿ ಪಾರ್ಥಿವ ಶರೀರದೆದುರು ಕಣ್ಣೀರಿಟ್ಟ ಇರಾನ್ ಸರ್ವೋಚ್ಛ ನಾಯಕ!

ತೆಹ್ರಾನ್ : ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ ಸೇನಾ ದಂಡನಾಯಕ ಖಾಸಿಮ್ ಸುಲೇಮಾನಿ ಮೃತಪಟ್ಟ ನಂತರ ಇರಾನ್ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಿದೆ. ಈ ನಡುವೆ ಮೃತಪಟ್ಟ ಸುಲೇಮಾನಿ ಪಾರ್ಥಿವ ಶರೀರಕ್ಕೆ ಅಲ್ಲಿನ ನಾಯಕರು ಅಂತಿಮ ನಮನ ಸಲ್ಲಿಸಿದ್ದಾರೆ. 

ಈ ವೇಳೆ ಸಾವಿರಾರು ಜನರ ಆಕ್ರಂದನದ ನಡುವೆಯೇ ಇರಾನ್ ನ ಸರ್ವೋಚ್ಛ ನಾಯಕ ಅಲಿ ಖಮೇನಿ ಪಾರ್ಥಿವ ಶರೀರದೆದುರು ಕಣ್ಣೀರಿಟ್ಟಿದ್ದಾರೆ. ಸುಲೇಮಾನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಕ್ಕೆ ಆತನ ಉತ್ತರಾಧಿಕಾರಿಯಾಗಿರುವ ನೂತನ ಸೇನಾ ದಂಡನಾಯಕ ಯೋಜನೆ ರೂಪಿಸುತ್ತಿದ್ದಾನೆ. 

ಇವೆಲ್ಲವೂ ಒಂದೆಡೆಯಾದರೆ ಮಧ್ಯಪ್ರಾಚ್ಯದ ಉದ್ವಿಗ್ನತೆಗಳಿಗೆ ಮತ್ತಷ್ಟು ಸೇರ್ಪಡೆಯಾಗುವಂತೆ ಇತ್ತ ಇರಾಕ್ ನ ಸಂಸತ್ ಕೂಡ ಅಮೆರಿಕ ಸೇನಾ ತುಕಡಿಗಳನ್ನು ತನ್ನ ನೆಲದಿಂದ ಉಚ್ಚಾಟಿಸುವ ಮಾತನ್ನಾಡಿದೆ. ಈ ಎಲ್ಲಾ ಬೆಳವಣಿಗೆಗಳೂ ಇರಾನ್ ನ್ನು ಪರಮಾಣು ಬಾಂಬ್ ನಿರ್ಮಾಣಕ್ಕೆ ಪ್ರೇರಿಪಿಸಬಹುದಾಗಿದೆ. ಪರಿಣಾಮವಾಗಿ ಅಮೆರಿಕ-ಇರಾನ್ ನಡುವಿನ ಯುದ್ಧೋನ್ಮಾದ ಪರಿಸ್ಥಿತಿ ತೀವ್ರಗೊಳಿಸಿ ಮಧ್ಯಪ್ರಾಚ್ಯವನ್ನು ಮತ್ತಷ್ಟು ಅಸ್ಥಿರಗೊಳಿಸುವ ಸಾಧ್ಯತೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com