176 ಮಂದಿ ದುರ್ಮರಣ: ಅಪಘಾತಕ್ಕೀಡಾದ ವಿಮಾನದ ಕಪ್ಪು ಪೆಟ್ಟಿಗೆಯನ್ನು ಅಮೆರಿಕನ್ನರಿಗೆ ನೀಡುವುದಿಲ್ಲ - ಇರಾನ್

ಉಕ್ರೇನ್ ಅಂತಾರಾಷ್ಟ್ರೀಯ ಏರ್ ಲೈನ್ಸ್ ಗೆ ಸೇರಿದ ಬೋಯಿಂಗ್ 737 ವಿಮಾನ ಪತನವಾಗಿ 176 ಮಂದಿ  ಮೃತಪಟ್ಟಿದ್ದು ವಿಮಾನದ ಕಪ್ಪು ಪೆಟ್ಟಿಗೆಯನ್ನು ಅಮೆರಿಕನ್ನರಿಗೆ ನೀಡುವುದಿಲ್ಲ ಎಂದು ಇರಾನ್ ಹೇಳಿದೆ.
ದುರಂತದಲ್ಲಿ ಮೃತಪಟ್ಟ ಪ್ರಯಾಣಿಕರು
ದುರಂತದಲ್ಲಿ ಮೃತಪಟ್ಟ ಪ್ರಯಾಣಿಕರು

ಟೆಹ್ರಾನ್: ಉಕ್ರೇನ್ ಅಂತಾರಾಷ್ಟ್ರೀಯ ಏರ್ ಲೈನ್ಸ್ ಗೆ ಸೇರಿದ ಬೋಯಿಂಗ್ 737 ವಿಮಾನ ಪತನವಾಗಿ 176 ಮಂದಿ  ಮೃತಪಟ್ಟಿದ್ದು ವಿಮಾನದ ಕಪ್ಪು ಪೆಟ್ಟಿಗೆಯನ್ನು ಅಮೆರಿಕನ್ನರಿಗೆ ನೀಡುವುದಿಲ್ಲ ಎಂದು ಇರಾನ್ ಹೇಳಿದೆ. 

ಇರಾನ್ ನ ಇಮಾಮ್ ಖೊಮೈನಿ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ಅಪಘಾತಕ್ಕೀಡಾಗಿತ್ತು. ಪರಿಣಾಮ ವಿಮಾನದಲ್ಲಿದ್ದ 180 ಮಂದಿ ಮೃತಪಟ್ಟಿದ್ದರು. 

ಬೋಯಿಂಗ್ 737 ವಿಮಾನವನ್ನು ಅಮೆರಿಕದ ಬೊಯಿಂಗ್ ಸಂಸ್ಧೆ ನಿರ್ಮಾಣ ಮಾಡುತ್ತದೆ. ಇನ್ನು ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ಇರಾನ್ ನಾಗರಿಕ ವಿಮಾನಯಾನ ಸಂಸ್ಥೆ ಮುಖ್ಯಸ್ಥ ಅಲಿ ಅಬೆದ್ಜಾಡೆ ಅವರು ಅಪಘಾತಕ್ಕೀಡಾದ ವಿಮಾನದ ಕಪ್ಪು ಪೆಟ್ಟಿಗೆಯನ್ನು ಅಮೆರಿಕನ್ನರಿಗೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ವಿಮಾನ ಅಪಘಾತದ ತನಿಖೆಯನ್ನು ಯಾವ ದೇಶ ನಡೆಸಬೇಕು ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಹೀಗಾಗಿ ಸದ್ಯಕ್ಕೆ ಬ್ಲಾಕ್ ಬಾಕ್ಸ್ ನಮ್ಮ ಬಳಿಯೇ ಇರಲಿದೆ. ಜಾಗತಿಕ ವಾಯುಯಾನ ನಿಯಮಗಳ ಪ್ರಕಾರ, ವಿಮಾನ ಪತನ ಎಲ್ಲಿ ನಡೆದಿದೆಯೋ ಆ ದೇಶಕ್ಕೆ ತನಿಖೆ ನಡೆಸುವ ಹಕ್ಕು ಇದೆ ಎಂದು ಅಬೆದ್ಜಾಡೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com