ನಾವು ಯುದ್ಧ ಬಯಸುವುದಿಲ್ಲ, ಆದರೆ ನಮ್ಮನ್ನು ರಕ್ಷಿಸಿಕೊಳ್ಳಲು ನೋಡುತ್ತೇವೆ: ಕ್ಷಿಪಣಿ ದಾಳಿ ಬಗ್ಗೆ ಇರಾನ್

ನಾವು ಯುದ್ಧವನ್ನು ಬಯಸುವುದಿಲ್ಲ, ಆದರೆ ಆಕ್ರಮಣಶೀಲತೆಯಿಂದ ರಕ್ಷಿಸಿಕೊಳ್ಳಲು ಬಯಸುತ್ತೇವೆ, ಹೀಗಾಗಿ ಅಮೆರಿಕಾದ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದ್ದೇವೆ ಎಂದು ಇರಾನ್ ನ ವಿದೇಶಾಂಗ ಸಚಿವ ಜಾವದ್ ಜಾಫಿರ್ ಪ್ರತಿಕ್ರಿಯೆ ನೀಡಿದ್ದಾರೆ.
ಇರಾನ್ ವಿದೇಶಾಂಗ ಸಚಿವ
ಇರಾನ್ ವಿದೇಶಾಂಗ ಸಚಿವ

ಟೆಹ್ರಾನ್: ನಾವು ಯುದ್ಧವನ್ನು ಬಯಸುವುದಿಲ್ಲ, ಆದರೆ ಆಕ್ರಮಣಶೀಲತೆಯಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಬಯಸುತ್ತೇವೆ, ಹೀಗಾಗಿ ಅಮೆರಿಕಾದ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದ್ದೇವೆ ಎಂದು ಇರಾನ್ ನ ವಿದೇಶಾಂಗ ಸಚಿವ ಜಾವದ್ ಜಾಫಿರ್ ಪ್ರತಿಕ್ರಿಯೆ ನೀಡಿದ್ದಾರೆ.


ಸೇನಾಧಿಕಾರಿ ಖಾಸಿಂ ಸೊಲೈಮಾನಿ ಹತ್ಯೆ ಬಳಿ ಇರಾನ್ ಹಾಗೂ ಅಮೆರಿಕಾ ನಡುವಿನ ಸಂಬಂಧ ತೀವ್ರವಾಗಿ ಹದಗಟ್ಟಿದ್ದು, ಎರಡು ರಾಷ್ಟ್ರಗಳ ಪರಿಸ್ಥಿತಿಯಿಂದಾಗಿ ವಿಶ್ವದಲ್ಲಿ 3ನೇ ಮಹಾಯುದ್ಧ ಸಂಭವಿಸುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿರುವಾಗಲೇ ಇರಾಕ್ ನಲ್ಲಿನ ಅಮೆರಿಕಾ ವಾಯುಪಡೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ಆರಂಭಿಸಿದೆ. ಇದರಿಂದ ವಿಶ್ವದಲ್ಲಿ ಮೂರನೇ ಮಹಾಯುದ್ಧ ಆರಂಭವಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.


ಈ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಇರಾನ್ ನ ವಿದೇಶಾಂಗ ಸಚಿವ, ವಿಶ್ವಸಂಸ್ಥೆ ಪರಿಚ್ಛೇದ 51ರ ಪ್ರಕಾರ, ನಮ್ಮ ದೇಶದ ನಾಗರಿಕರು ಮತ್ತು ಹಿರಿಯ ಸೇನಾಧಿಕಾರಿಗಳ ಮೇಲೆ ಅಮೆರಿಕಾ ಸಶಸ್ತ್ರ ದಾಳಿ ನಡೆಸಿದಾಗ ಆತ್ಮ ರಕ್ಷಣೆಗಾಗಿ ತೆಗೆದುಕೊಂಡ ಕ್ರಮವೇ ಅಮೆರಿಕಾ ವಾಯುಪಡೆ ಮೇಲೆ ನಡೆಸಿದ ಇಂದಿನ ಕ್ಷಿಪಣಿ ದಾಳಿಯಾಗಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com