ಹೂಸ್ಟನ್ ನಲ್ಲಿರುವ ದೂತವಾಸ ಕಚೇರಿ ತೆರವಿಗೆ ಅಮೆರಿಕ ಸೂಚನೆ: ಚೀನಾದಿಂದ ಪ್ರತೀಕಾರದ ಎಚ್ಚರಿಕೆ! 

ಹೂಸ್ಟನ್ ನಲ್ಲಿರುವ ಚೀನಾದ ದೂತವಾಸ ಕಚೇರಿ ತೆರವುಗೊಳಿಸಲು ಅಮೆರಿಕ ಚೀನಾಗೆ ಸೂಚನೆ ನೀಡಿದ್ದು ನೀಡಿದ್ದು ಅಮೆರಿಕ-ಚೀನಾ ನಡುವಿನ ಶೀತಲ ಸಮರ ಮತ್ತೊಂದು ಹಂತ ತಲುಪಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೂಸ್ಟನ್: ಹೂಸ್ಟನ್ ನಲ್ಲಿರುವ ಚೀನಾದ ದೂತವಾಸ ಕಚೇರಿ ತೆರವುಗೊಳಿಸಲು ಅಮೆರಿಕ ಚೀನಾಗೆ ಸೂಚನೆ ನೀಡಿದ್ದು ನೀಡಿದ್ದು ಅಮೆರಿಕ-ಚೀನಾ ನಡುವಿನ ಶೀತಲ ಸಮರ ಮತ್ತೊಂದು ಹಂತ ತಲುಪಿದೆ.

ಹೂಸ್ಟನ್ ನಲ್ಲಿರುವ ಚೀನಾದ ದೂತವಾಸ ಕಚೇರಿಯಿಂದ ಅಮೆರಿಕನ್ನರ ಬೌದ್ಧಿಕ ಆಸ್ತಿ ಹಕ್ಕು ಹಾಗೂ ಗೌಪ್ಯತೆಗೆ ಅಪಾಯವಿದ್ದು, ಅದನ್ನು ರಕ್ಷಿಸುವುದಕ್ಕಾಗಿ ಚೀನಾ ದೂತವಾಸ ಕಚೇರಿಯನ್ನು ಸ್ಥಗಿತಗೊಳಿಸುವುದಕ್ಕೆ ಆದೇಶ ನೀಡಲಾಗಿದೆ ಎಂದು ಅಮೆರಿಕ ಸರ್ಕಾರ ಸಮರ್ಥನೆ ನೀಡಿದೆ.

ಚೀನಾದ ವಿದೇಶಾಂಗ ವಕ್ತಾರರಾದ ವಾಂಗ್ ವೆನ್ಬಿನ್ ಅಮೆರಿಕದ ಈ ನಡೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಮೆರಿಕದ ಬೇಡಿಕೆ ಹಿಂದೆಂದೂ ಕಾಣದ ತೀವ್ರತರವಾದುದ್ದಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಅಮೆರಿಕಾದಲ್ಲಿರುವ ಚೀನಾ ರಾಯಭಾರ ಕಚೇರಿ ಹಾಗೂ ದೂತವಾಸ ಕಚೇರಿಗಳಿಗೆ ಇತ್ತೀಚೆಗಷ್ಟೇ ಬಾಂಬ್ ಹಾಗೂ ಜೀವ ಬೆದರಿಕೆಗಳೂ ಬಂದಿದ್ದವು ಎಂದು ಹೇಳಿದ್ದಾರೆ. 

ಅಮೆರಿಕ ಈ ಆದೇಶವನ್ನು ಹಿಂಪಡೆಯುವಂತೆ ಚೀನಾ ಆಗ್ರಹಿಸುತ್ತದೆ. ಇದನ್ನೂ ಮೀರಿ ಅಮೆರಿಕ ತಾನು ಬಯಸಿದ್ದನ್ನು ಮಾಡಿದ್ದೇ ಆದಲ್ಲಿ, ಚೀನಾ ಸಹ ಅಗತ್ಯವಿರುವ ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದು ವಾಂಗ್ ಎಚ್ಚರಿಸಿದ್ದಾರೆ.

ಚೀನಾದಲ್ಲಿರುವ ಅಮೆರಿಕ ರಾಯಭಾರಿ, ದೂತವಾಸ ಕಚೇರಿ ಅಧಿಕಾರಿಗಳೆಡೆಗೆ ಚೀನಾ ಉತ್ತಮ ನಡತೆಯನ್ನು ತೋರಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಅಮೆರಿಕ ಚೀನಾದ ರಾಯಭಾರಿಗಳಿಗೆ ಜೂನ್ ಹಾಗೂ ಕಳೆದ ಅಕ್ಟೋಬರ್ ನಲ್ಲಿ ಸೂಕ್ತ ಕಾರಣವೇ ಇಲ್ಲದೇ ನಿರ್ಬಂಧಗಳನ್ನು ವಿಧಿಸಿತ್ತು. ಇದಾದ ಬಳಿಕ ಬಾಂಬ್ ಬೆದರಿಕೆ ಬಂದಿತ್ತು. ಅಷ್ಟೇ ಅಲ್ಲದೇ ಬೀಜಿಂಗ್ ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಚೀನಾ ವಿರುದ್ಧ ವಾಗ್ದಾಳಿ ನಡೆಸುವ ಲೇಖನಗಳನ್ನು ಪ್ರಕಟಿಸಿದೆ, ಯಾರು ಯಾರ ಆಂತರಿಕ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದು ಇದರಲ್ಲಿಯೇ ತಿಳಿಯುತ್ತದೆ ಎಂದು ಚೀನಾ ಅಮೆರಿಕದ ವಿರುದ್ಧ ಹರಿಹಾಯ್ದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com