ಅಮೆರಿಕದ ಅಲಾಸ್ಕಾದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ

ಅಮೆರಿಕದ ಅಲಾಸ್ಕಾದ ಪೆನಿನ್ಸುಲಾದಲ್ಲಿ ಬುಧವಾರ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 7.8ರಷ್ಟು ತೀವ್ರತೆ ದಾಖಲಾಗಿದೆ ಎಂದು ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ಅಮೆರಿಕದ ಅಲಾಸ್ಕಾದ ಪೆನಿನ್ಸುಲಾದಲ್ಲಿ ಬುಧವಾರ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 7.8ರಷ್ಟು ತೀವ್ರತೆ ದಾಖಲಾಗಿದೆ ಎಂದು ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಭೂಕಂಪನ ಕೇಂದ್ರ ಬಿಂದುವಿನ ಸುತ್ತ ಸುಮಾರು 300 ಕಿಮೀ ವ್ಯಾಪ್ತಿಯಲ್ಲಿ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದ್ದು, ಕರಾವಳಿಯಲ್ಲಿ ಜನತೆಗೆ ಜಾಗೃತೆಯಿಂದ ಇರಲು ಸೂಚಿಸಲಾಗಿದೆ.

ಉತ್ತರ ಅಮೆರಿಕ ಖಂಡದ ತುದಿಯಲ್ಲಿರುವ ಅಲಾಸ್ಕಾದಲ್ಲಿ ಭೂಕಂಪನ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 11:30 ಹೊತ್ತಿಗೆ ಭೂಮಿ ತೀವ್ರವಾಗಿ ಕಂಪಿಸಿದೆ. 10 ಕಿ.ಮೀ. ಆಳದಲ್ಲಿ ಭೂಮಿ ಕಂಪಿಸಿರುವುದರಿಂದ ಅಲಾಸ್ಕಾ ಪೆನಿನ್ಸುಲಾ ಮತ್ತು ದಕ್ಷಿಣ ಅಲಾಸ್ಕಾದಲ್ಲಿ ಅಪಾಯಕಾರಿ ಸುನಾಮಿಗೆ ಈ ಭೂಕಂಪನ ಎಡೆ ಮಾಡಿಕೊಡಬಹುದು ಎಂದು ತಜ್ಞರು ಹೇಳಿದ್ದಾರೆ.

ಸುನಾಮಿ ಎಚ್ಚರಿಕೆಯ ನಂತರ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಅಲಾಸ್ಕ ಮಾತ್ರವಲ್ಲದೇ ಅಮೆರಿಕದ ಇತರ ಕರಾವಳಿ ಪ್ರದೇಶ ಹಾಗೂ ಕೆನಡಾದ ಕರಾವಳಿಗೆ ಸುನಾಮಿ ಅಪ್ಪಳಿಸುವ ಸಾಧ್ಯತೆಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ರಿಂಗ್‌ ಆಫ್‌ ಫೈರ್‌ ಎಂದು ಕರೆಯಲಾಗುವ ಸ್ಥಳದಲ್ಲಿ ಭೂಕಂಪನ ಸಂಭವಿಸಿದೆ. ಈ ಹಿಂದೆಯೂ ಹಲವು ಬಾರಿ ಇಲ್ಲಿ ಭೂಕಂಪನಗಳು ಸಂಭವಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com